೨೧೨ ಮಿಂಚಿನಬಳ್ಳಿ ಸ್ಥಳಕ್ಕೆ ಮೆರವಣಿಗೆಯನ್ನು ಒಯ್ಯಬೇಕೆಂದು ನಿರ್ಧರಿಸಿದರು, ೧೦ನೇ ಸಪ ಟಂಬರ ದಿವಸ ಹೊರಟ ಮೆರವಣಿಗೆಯು ಮಾತ್ರ ಸುನಿಯಂತ್ರಿತವಾಗಿ ಕಂಡು ಬರಲಿಲ್ಲ. ಕಾರಣ ಪರಿಣಾಮ ದು:ಖಾಂತವಾಯಿತು. ಈ ಇಸ್ಲಾಂಪುರದಿಂದ ಸ್ವಲ್ಪ ದೂರದಲ್ಲಿದ್ದ ಮೂರುವಾರಿಗಳ ಸಂಗಮದಲ್ಲಿ ಬೇರೆ ಬೇರೆ ಕಡೆಯಿಂದ ಬಂದ ಎಲ್ಲ ಮೆರವಣಿಗೆಗಳು ಸೇರಿಕೊಂಡು, ಊರಲ್ಲಿ ಹೋಗಬೇಕೆಂದು ಮೊದಲೇ ನಿಶ್ಚಯವಾಗಿತ್ತು, ಹಾಗಾಗಿದ್ದರೆ, ಇದು ಯಶಸ್ವಿಯೂ ಆಗುವ ಸಂಭವವಿತ್ತು, ಆದರೆ ಎಲ್ಲವೂ ಸಕಾಲದಲ್ಲಿ ಬರಲಿಲ್ಲ. ಕಾರಣ ಮೊದಲೇ ಬಂದಿದ್ದ ಪಾಂಡು ಮಾಸ್ತರರ ನೇತೃತ್ವದಲ್ಲಿಯ ನಿಪ್ಪಾ. ಣಿಯ ಗುಂಪು ಸ್ವತಂತ್ರ ರೀತಿಯಿಂದ ಊರನ್ನು ಪ್ರವೇಶಿಸಿತು. - ಪೋಲೀಸರು ತಾಸಗಾವದಂತೆ, ಅಸಾವಧರಾಗಿರಲಿಲ್ಲ. ಇಸ್ಲಾಂಪುರದ ಮೇಲೆ ಏರಿಬರುತ್ತಿರುವ ಸುದ್ದಿ ಯು ಮೊದಲೇ ಪ್ರಕಟವಾದ್ದರಿಂದ, ಸಾತಾರೆಯ ಡಿ. ಎಸ್. ಸಿ. ಮಿ|! ಯೇಟ್ಟನು ಸಶಸ್ತ್ರ ಪೋಲೀಸರೊಂದಿಗೆ ಹಾಗೂ ಕೆಲವು ಅಧಿಕಾರಿಗಳೊಂದಿಗೆ ಕೂಟಿನಲ್ಲಿ ಚಳವಳಿಗಾರರ ದಾರಿ ಕಾಯುತ್ತಿದ್ದನು. ಪಾಂಡು ಮಾಸ್ತರನ ಗುಂಪು ಬಂದೊಡನೆ, ಮಾಸ್ಕರನನ್ನು ಬಂಧಿಸಿ ಉಳಿದ ವರ ಮೇಲೆ ತೀವ್ರತರವಾದ ಲಾಠಿಹಲ್ಲೆ ಮಾಡಿ ಗುಂಪನ್ನು ಚದುರಿಸಿದನು. ಅಷ್ಟರಲ್ಲಿ ಪೂರ್ವದ ಕಡೆಯಿಂದ ಬರತಕ್ಕ ಮೆರವಣಿಗೆ ಇಸ್ಲಾಂಪುರಕ್ಕೆ ಬಂದಿತು. ಗೋವಿಂದರಾವ ಖೋತರು ಅದರ ಮುಂದಾಳುವಾಗಿದ್ದರು, ಲಾಠಿಪೆಟ್ಟು ತಿಂದವರು ಓಡಿಬಂದು ತಮ್ಮ ಸುದ್ದಿಯನ್ನು ಅವರಿಗೆ ತಿಳಿಸಿದರು. ಇದನ್ನು ಕೇಳಿ ತಾವು ಮುಂದೆ ಹೋಗಬೇಕೋ ಇಲ್ಲವೆ ಹಿಂದಿರುಗಬೇಕೋ ಎಂಬ ಪ್ರಶ್ನೆ ಅವರನ್ನು ಬಾಧಿಸತೊಡಗಿತು. ಪೋಲೀಸರ ಹಲ್ಲೆಯನ್ನು ಕೇಳಿ ಸಮು ದಾಯವೂ ಸಿಟ್ಟಿಗೆದ್ದಿತು. ಪೋಲೀಸರ ಸೊಕ್ಕನ್ನಡಗಿಸಿಯೇ ಹೋಗಬೇಕೆಂದು ಕೂಡಿದ ಜನರ ಅಭಿಪ್ರಾಯವಾಯಿತು. ಪೋಲೀಸರ ವಶದಲ್ಲಿದ್ದ ಪಾಂಡೂ ಮಾಸ್ತರರನ್ನು ಬಿಡಿಸಬೇಕೆಂದೂ ಕೂಗಿದರು. ಇದರ ಪರಿಣಾಮವೇನಾದೀ ತೆಂಬುದರ ವಿಚಾರ ಮಾಡುವ ತಾಳ್ಮೆ ಯಾರಿಗಿತ್ತು ? ಈ ಮೆರವಣಿಗೆಯ ಮುಂಭಾಗದಲ್ಲಿ ಕಿರ್ಲೋಸ್ಕರ ಕಾರಖಾನೆಯ ಇಂಜಿ ನಿಯರಾದ ಉಮಾ ಶಂಕರ ಪಂಡ್ಯಾ ಎಂಬವರಿದ್ದರು, ಅವರು ಎರಡು ವರುಷ ಗಳ ಹಿಂದೆ ಬನಾರಸ ಹಿಂದೂ ಯುನಿವರ್ಸಿಟಿಯಿಂದ ಪದವಿ ಪಡೆದು ವಾಡಿ ಯಲ್ಲಿ ಕೆಲಸ ಕೈಕೊಂಡಿದ್ದರು. ಅವರ ಸ್ವಭಾವ ಗುಣಗಳು ಬಹಳ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೬೧
ಗೋಚರ