ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ನಮ್ರವಾಗಿದ್ದವು, ಕ್ರಿಕೆಟ್ ಆಟಗಾರರೆಂದೂ ಹೆಸರಾಗಿದ್ದರು. ನಾಡಿಗೆ ಬಂದಮೇಲೆ ಅವರು ಸವಿತಾದೇವಿಯೊಡನೆ ವಿವಾಹಿತರಾಗಿದ್ದರು. ಅವರಿಗೆ ಅದೇ ಒಂದು ಗಂಡು ಮಗುವು ಹುಟ್ಟಿತ್ತು, ಈ ಆನಂದಕ್ಕಾಗಿ ಅವರು ಪೇಢ ಹಂಚಿದ್ದ ರು. ೧೨ನೇ ದಿವಸದ ಸಲುವಾಗಿ ಅವರು ಅಂದಿನ ರಾತ್ರಿಯೇ ನಾಗಪುರಕ್ಕೆ ಹೋಗುವವರಿದ್ದರು. ಕಾರಖಾನೆಯವರ ಜೊತೆಗೆ ಈ ಪಂದ್ಯಾನು ತಾಸಗಾವಿಗೆ ಹೋಗಿ ಮೆರವಣಿಗೆಯಲ್ಲಿ ಸೇರಿಕೊಂಡನು, ಮೆರವಣಿಗೆ ಮುಗಿಸಿಕೊಂಡು ಸಾಯಂ ಕಾಲ ವಾಡಿಗೆ ತಿರುಗಬೇಕೆಂದು ಮಾಡಿದ್ದನು, ಆದರೆ ದುಷ್ಟ ಕಾಲನು ಅವನ ಮೇಲೆ ಜಪ್ಪಿಸಿ ಕುಳಿತಿದ್ದನು. ಅವನನ್ನು ವಿಚಾರಿಸುವವರು ಯಾರು ? - ಮೆರವಣಿಗೆಯು ಮುಂದೆ ಮುಂದೆ ಬರುವದನ್ನು ನೋಡಿ ಡಿ, ಎಸ್, ಪಿ. ಯು ಮುಂದೆ ಬರಕೂಡದೆಂದು ಆಜ್ಞಾಪಿಸಿದನು, ಮುಂದೆ ಬಂದರೆ ಗುಂಡು ಹಾರಿಸಲು ಪೋಲೀಸರಿಗೆ ಆಜ್ಞೆ ವಿಧಿಸಿದನು. ಹವೆಯಲ್ಲಿ ಗೋಳೀಬಾರು ನಡೆ | ಯಿತು. ಅಷ್ಟಕ್ಕೆ ಮೆರವಣಿಗೆ ಹಿಂದಿರುಗದ್ದರಿಂದ ಮುಂದಾಳುಗಳನ್ನು ಕರೆಸಿ ಕೊಂಡನು. ಪಂಡ್ಯಾನು ಅವನಲ್ಲಿಗೆ ಹೋದನು. ಪಂಡ್ಯಾನು ಅವನ ಹತ್ತಿರ ಬಂದೊಡನೆ ಕೈಯಲ್ಲಿದ್ದ ಛಡಿಯಿಂದ ಅವನನ್ನು ಜೋರಿನಿಂದ ಥಳಿಸತೊಡಗಿದನು, ಪಂಡ್ಯಾನು ಗಡಿಬಿಡಿಯಿಂದ ತಿರುಗಿ ಹೊರಟನು. ಈ ಪರಿಣಾಮದಿಂದ ಜನರು ಸಿಟ್ಟಿಗೆದ್ದು ಪೋಲೀಸರ ಮೇಲೆ ಕಲ್ಲು ತೂರತೊಡಗಿದರು. ಯೆಟ್ಟನಿಗೆ ಅಷ್ಟೇ ನಿಮಿತ್ತ ಬೇಕಾಗಿತ್ತು, ಅವನು ಪಿಸ್ತೂಲಿನಿಂದ ಹಿಂದಿರುಗಿ ಹೋಗು ತಿದ್ದ ಪಂಡ್ಯಾನಿಗೆ ಹೊಡೆದನು. ಎರಡನೇ ಗುಂಡಿಗೆ ಮತ್ತೊಬ್ಬನು ಆಹುತಿ ಯಾದನು. ಜನರು ಅವರ ಹತ್ತಿರ ಧಾವಿಸತೊಡಗಿದರು, ಆದರೆ ಅವರ ಮೇಲೆಯೂ ಪಿಸ್ತೂಲು ಹಿಡಿದದ್ದರಿಂದ ಹಿಂದಕ್ಕೆ ಸರಿದರು. ಎಲ್ಲ ಕಡೆಗೂ ಹಾಹಾಕಾರವೆದ್ದಿತು, ಸಮುದಾಯವು ಚದುರಿತು, ಮಧ್ಯಾಹ್ನ ೩ ಗಂಟೆಗೆ ವಾಡಿಗೆ ತಾರು ಬಂದಿತು. “ನಿಮ್ಮ ಇಂಜನಿಯರ ಪಂಡ್ಯಾನು ಇಸ್ಟಾಮಪುರದ ದಂಗೆಯಲ್ಲಿ ಮರಣಹೊಂದಿದನು. ಹೆಣವನ್ನು ಒಯ್ಯಬಹುದು' ಎಂದು ಡಿ. ಎಸ್‌, ಸಿ.ಯು ತಾರು ಕೊಟ್ಟನು, ಅದರಂತೆ ಪಂಡ್ಯಾನ ಶವವನ್ನು ಮರುದಿನ ಮುಂಜಾನೆ ನಾಡಿಗೆ ತರಲು, ಅಲ್ಲಿ ಹಾಹಾಕಾರ ಉಂಟಾಯಿತು. ತನ್ನ ಗಂಡನ ದಾರಿಯನ್ನು ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದ ಸಂಗ್ಯಾನ ಹೆಂಡತಿಗೆ, ಪತಿದೇವನ ಮರಣ ವಾರ್ತೆಯಿಂದ ಸಿಡಿಲು ಬಡಿದಂತಾ