ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

St1 ಮಿಂಚಿನಬಳ್ಳಿ ಯುತ್ತಿತ್ತು, ದೊಡ್ಡ ದೊಡ್ಡವರ ಆಶ್ರಯವೂ ಸಿಕ್ಕಿತ್ತು. ಭೂಗತರಿಗೆ ದೊಡ್ಡವರ ಸಹಾಯವಿತ್ತೆಂಬುದರಲ್ಲಿ ಔಂಧ ಸಂಸ್ಥಾನದ ಗಣನೆಯನ್ನೂ ಮಾಡದೆ ಬಿಡುವ ಹಾಗಿರಲಿಲ್ಲ. ಸಂಸ್ಥಾನದ ಧೋರಣೆಯೂ, ಕಾರಖಾನೆಯ ಧೋರಣವೂ ಸುಮಾ ರಾಗಿ ಒಂದೇ. ಆದ್ದರಿಂದಲೇ ಕೆಲವು ಭೂಗತರು ನಾಡಿಯಲ್ಲಿ ಆಶ್ರಯ ಪಡೆ ದರು, ಅವರನ್ನು ಪೋಲೀಸರ ವಶಕ್ಕೆ ಹೇಗೆ ಕೊಡುವದು ? ಸದ್ಯದ ಮುಂಬಯಿ ಸರಕಾರದ ಮುಖ್ಯ ಮಂತ್ರಿ ಯಶವಂತರಾವಜಿ ಚವ್ಹಾಣ ಮತ್ತು ಇನ್ನುಳಿದ ಕೆಲವು ಕಾರಕರ್ತರು ಆಗ- ಕೆಲವೊಂದು ದಿವಸ ಕಿರ್ಲೋಸ್ಕರ ವಾಡಿಯಲ್ಲಿ ಅಜ್ಞಾತವಾಸವನ್ನು ಕಳೆದರು. ಈಗ ಇದನ್ನು ಬಹಿರಂಗಪಡಿಸ ಲಡ್ಡಿಯಿಲ್ಲ. ಅಚ್ಯುತರಾವ ಪಟವರ್ಧನರೂ ಆಗಾಗ ಬರುತ್ತಿದ್ದರು.

  • ಭೂಗತರ ಶೋಧ ಪೋಲೀಸರಿಗೆ ತೀರ ಹತ್ತದೆ ಇರುತ್ತಿದ್ದಿಲ್ಲ, ಚಳುವಳಿ ಯವರನ್ನು ಹಿಡಿದುಕೊಡಲು ಕಾರಖಾನೆಯವರಿಗೆ ಪೋಲೀಸರು ಬಹಳ ಗಂಟುಬಿದ್ದ ರು. ನಾನಾತರದ ಆಸೆಗಳನ್ನು ತೋರಿಸಲೂ ಹಿಂದೆ ಮುಂದೆ ನೋಡಲಿಲ್ಲ, ಯಾವ ಸಹಕಾರವೂ ಸಿಗದ್ದರಿಂದ ಕಾರಖಾನೆಯ ಮೇಲೆ ಹಲ್ಲು ಕಡಿಯುತ್ತಿದ್ದರು. ಈ ತಾಟಸ್ಥ ಧೋರಣೆಯು ತಂತಿಯ ಮೇಲಿನ ಕುಣಿತವಿದ್ದಂತೆ, ಅದು ಎಷ್ಟು ದಿವಸ ಹೀಗೆಯೇ ನಡೆದೀತು! ಎಂದಾದರೂ ಅದರ ಸೋಕ-ಮೋಕ್ಷವಾಗಿಯೇತೀರಬೇಕು. ಆ ದಿನವೂ ಬಂದಿತು, ಚಾಲ ಕರು ಯಾವ ರೀತಿಯಿಂದಲೂ ತಮಗೆ ಅನುಕೂಲವಿಲ್ಲೆಂದು ಪೋಲೀಸರು “ಇಂದ್ರಾಯ ತಕಕಾಯ ಸ್ವಾಹಃ' ಎಂಬ ಮಂತ್ರದ ಉಪಯೋಗ ಮಾಡಿ ಕೊಳ್ಳಲು ನಿಶ್ಚಯಿಸಿದರು.
  • ಕಿರ್ಲೋಸ್ಕರವಾಡಿಯ ಚಾಲಕರು ಪಿಸ್ತೂಲು ತಯಾರಿಸಿ ಈ ಭೂಗ | ತರಿಗೆ ಒದಗಿಸುತ್ತಿದ್ದಾರೆಂದು ನಿಶ್ಚಯಿಸಿ ಅವರಿಗೂ ಸೆರೆಮನೆಯ ಗಾಳಿ ತಿನಿಸು ಬೇಕೆಂಬ ಒಂದು ಕುಟಿಲ ಹಂಚಿಕೆಯನ್ನು ಅವರು ಹಾಕಿದರು. ಇದನ್ನು ಸಾಧಿಸಲು ಇಂಥ ಉದ್ಯಮವನ್ನು ಬಲ್ಲ ಒಬ್ಬ ಪ್ರಸಿದ್ಧ ವ್ಯಕ್ತಿಯನ್ನು ಕೈಯಲ್ಲಿ ತೆಗೆದುಕೊಂಡರು. ಅವರು ಹಳ್ಳಿಯ ಕಂಬಾರನಿಂದ ಎರಡು ದೇಶೀ ಪಿಸ್ತೂಲು ಗಳನ್ನು ತಯಾರಿಸಿಕೊಂಡರು. ಅವುಗಳಲ್ಲಿ ಒಂದನ್ನು ಕಾರಖಾನೆಯ ಮೇಲಿಂಗ್ ಶೆಡ್ಡಿನ ಎದುರು ಉಸುಕಿನ ಪಂಪಿನಲ್ಲಿ ಹುಗಿದಿಡುವಂತೆ ವ್ಯವಸ್ಥೆ ಯನ್ನು ಮಾಡಿದರು.