ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ورد ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ನೇನು ವರ್ಣಿಸುವದು ? ಅದರಲ್ಲಿ ಆ ಭೂಗತ ಚಳುವಳಿಯ ಸೂತ್ರಧಾರರಾದ ಶ್ರೀ ನಾನಾ ಪಾಟೀಲರ ದರ್ಶನಕ್ಕೆಂದು ಅಪೂರ್ವ ಜನಸಮೂಹ ನೆರೆಯಿತು. ಅವರೀಗ ಒಬ್ಬ ಐತಿಹಾಸಿಕ ಪುರುಷರೇ ಆಗಿದ್ದಾರೆ. ಕಿರ್ಲೋಸ್ಕರವಾಡಿಗೆ ಈ ಕ್ರಾಂತಿವೀರನ ಆಗಮನವು ೧೨-೫-೧೯೪೬ ನೇ ದಿನ ಆಯಿತು. ಅವನ ಸ್ವಾಗತಕ್ಕಾಗಿ ಸಾವಿರಾರು ಜನರು ನೆರೆದರು.

  • ಈ ಮಂಡಳಿಯ ಸ್ವಾಗತವಾದಮೇಲೆ ನಾನಾ ಪಾಟೀಲರು ತಮ್ಮ ಕಾರ್ಯಕ್ಕೆ ಜನತೆಯು ಯಾವ ರೀತಿಯಿಂದ ನೆರವಾಯಿತೆಂಬದನ್ನು ಸ್ವಲ್ಪದ ರಲ್ಲಿಯೇ ವಿವರಿಸಿ ಹೇಳಿದರು. ತಮ್ಮ ಸತ್ಕಾರ ಮಾಡಿದವರ ಆಭಾರವನ್ನು ಮಾಡಿದರು. ಆ ಮೇಲೆ ತನ್ನ ಸಹಕಾರಿಗಳೆಲ್ಲರನ್ನು ಕರೆಕರೆದು ಅವರವರ ಪರಿಚಯವನ್ನು ಮಾಡಿಕೊಟ್ಟರು. ಅವರು ಮಾಡಿತೋರಿಸಿದ ಪರಾಕ್ರಮದ ವರ್ಣನೆಯನ್ನು ಸ್ವಲ್ಪದರಲ್ಲಿಯಾದರೂ ಚನ್ನಾಗಿ ವರ್ಣಿಸಿ ಹೇಳಿದರು, ಆದ ರಲ್ಲಿ ಧುಳೆಯ ಖಜಾನಿಯ ಲೂಟಿ, ಲೋಣಂದ ಬ್ಯಾಂಕಿನ ದರೋಡೆ, ಶಹೋಲಿ ಸ್ಟೇಶನದ ಹತ್ತಿರವಿರುವ ಸೇ, ಸ್ಪೇಶಲ್ದ ಲೂಟಿ, ಸುರಲಯಖಂಡಿಯಲ್ಲಿ ಮಾಡಿದ ಕೆಲಸ, ಪೋಲೀಸರ ಶಸ್ತ್ರಾಸ್ತ್ರಗಳನ್ನು ಮುತ್ತಿದುದು, ರಹದಾರಿ ದಾರಿಯ ಬಂಗಲೆಯನ್ನು ಸುಡುವದು- ಇತ್ಯಾದಿಗಳ ಸಂಗತಿಗಳನ್ನು ವಿವರಿಸಿದರು. ನಂತರ ಕಾರಖಾನೆಯ ಚಾಲಕರು, ಈ ಕಾರ್ಯಕರ್ತರ ಕೊರಳಲ್ಲಿ ಮಾಲೆಯನ್ನು ಹಾಕಿ, ಕೈಗೆ ಗುಚ್ಛವನ್ನು ಕೊಟ್ಟರು. ಕರತಾಡ ನವು ಒಂದೇಸವನೆ ನಡೆದೇ ಇತ್ತು.

ಈ ಪರಿಚಯದ ವಿಧಿಯು ನಡೆದಿರುವಾಗ ಒಬ್ಬ ಹೊಸ ನೀರನು ಮುಂದೆ ಬಂದನು, ಅವನ ಕಡೆಗೆ ನೋಡುತ್ತ ನಾನಾ ಪಾಟೀಲರು 'ಈ ಸ್ವಾರಿಯ ಪರಿಚಯವನ್ನು ನಿಮಗೆ ಯಾತಕ್ಕಾಗಿ ಮಾಡಿಕೊಡಬೇಕು ? ಅವರು ನಿಮ್ಮೊಳಗಿನವರೇ, ಅವರು ತಮ್ಮ ಕೆಲಸವನ್ನು ನಿಮ್ಮ ಕಣ್ಮುಂದೆಯೇ ಇಲ್ಲಿಯೇ ಮಾಡಿ ತೋರಿಸಿದ್ದಾರೆ ? ಚಾಲಕರು ಅವರ ಮುಖದ ಕಡೆಗೆ ನೋಡಿದರು....ಅವರು ಕಿರ್ಲೋ ಸ್ಮರವಾಡಿಯ ಬ್ಯಾಂಕಿನ ಸಿಪಾಯಿಯಮೇಲೆ ಹಾಡೇಹಗಲೇಮುತ್ತಿ ೨,೫೦೦ ರೂಪಾಯಿಗಳನ್ನು ಲೂಟಿಮಾಡಿದ ಕೆಲಸಗಾರನೇ ಅವರ ಮುಂದೆ ನಿಂತ ವನು ! ಅವನ ಕಡೆಗೆ ನೋಡಿ ಚಾಲಕರು ಸ್ವಲ್ಕು ನಕ್ಕರು, ಅವರು ಅವನ ಕೊರಳಲ್ಲಿಯೂ ಮಾಲೆಯನ್ನು ಹಾಕಿದರು.