ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ೨೨೬ ಇದು ದೊಡ್ಡವರ ಬಗ್ಗೆ ಯಾಯಿತು. ಬಾಲಬಾಲಕಿಯರ ಬಗ್ಗೆ ಅವರಿಗೆ ಎಷ್ಟು ಪ್ರೇಮವೆನಿಸುತ್ತಿತ್ತೆಂಬುದನ್ನು ಶ್ರೀ ತುಕಾರಾಮ ಮೋಹಿತೆ ಎಂಬುವ ವರ ಧರ್ಮಪತ್ನಿಯಾದ ಸೌ, ಮುಕ್ತಾಬಾಯಿಯವರ ಮಾತು ಕೇಳಿರಿ “೧೯೩೫ ರಲ್ಲಿಯ ಸಂಗತಿ, ನನಗಾಗ ಹೆಣೆಯುವ ಹೌಸು ಬಹಳ. ಆದರೆ ವಾಡಿಯಲ್ಲಿಯ ಅಂಗಡಿಗಳಲ್ಲಿ ಹೆಣೆಯುವ ಸೂಜಿ ದೊರೆಯುತ್ತಿರಲಿಲ್ಲ. ಆಗ ನನಗೊಂದು ಕಲ್ಪನೆ ಹೊಳೆಯಿತು. ಕಾರಖಾನೆಯಲ್ಲಿ ಕಾಟ್ಟಿ ತಯಾರು ಮಾಡುವ ಖಾತೆಯಲ್ಲಿ ಹೋದೆನು. ಅಲ್ಲಿ ಚೆಲ್ಲಿದ್ದ ತಂತಿಯ ಎರಡು ತುಂಡುಗಳನ್ನು ತೆಗೆದುಕೊಂಡೆ. ಅಷ್ಟರಲ್ಲಿ ಸಪ್ಪಾ ಅಲ್ಲಿ ಬಂದರು. ನನ್ನ ಕೈ ಯಲ್ಲಿಯ ತಂತಿಯನ್ನು ನೋಡಿ, ಅವರು “ನಿನಗೆ ಸೂಜಿಯನ್ನು ತಯಾ ರಿಸಿ ಕೊಳ್ಳಬೇಕಾದಂತೆ ಕಾಣುತ್ತದೆ.' ಎಂದು ಕೇಳಿದರು, ಅದಕ್ಕೆ ನಾನು “ಅಹುದು' ಎಂದೆ. ಆ ಕೂಡಲೆ ಅಲ್ಲಿಯ ಫೋರನನ್ನನಿಗೆ ಹೇಳಿ, ಆ ತಂತಿಗೆ ತುದಿಯನ್ನು ಮಾಡಿಸಿಕೊಟ್ಟರು. ಆ ಸೂಜಿಯನ್ನು ನನ್ನ ಕೈಯಲ್ಲಿಡುತ್ತ ಅವರು 'ಸೈಟರ ಆದಕೂಡಲೇ ತೋರಿಸಬೇಕು ಹಾ !” ಎಂದಂದರು. ನನ್ನ ದುರ್ದೈವ, ನಾನು ಚಿಕ್ಕವಳಾದ್ದರಿಂದ ಸೈಟರನ್ನು ತಯಾರಿಸಿ ಅವರಿಗೆ ತೋರಿಸುವದಾಗಲಿಲ್ಲ. ಆದರೆ ಇಂದು ನಾನು ಎಂಥದೇ ಹೆಣಿಗೆಯ ಕೆಲಸ ಕೈ ಕೊಂಡರೆ ನನಗೆ ಪಪ್ಪಾನ ನೆನಪು ಆಗದೆ ಉಳಿಯುವದಿಲ್ಲ.” ಈ ಎಲ್ಲದರಲ್ಲಿ ಶ್ರೀ ಗೋವಿಂದರಾವ ಖೋತ ಇವರ ನಿವೇದನೆಯು ಮಹತ್ವದ್ದಾಗಿದೆ. ಶ್ರೀ ಖೋತ ಇವರು ಕಿರ್ಲೋಸ್ಕರವಾಡಿಯ ದಕ್ಷಿಣಕ್ಕೆ ೪ ಮೈಲುಗಳ ದೂರವಿರುವ ಆಮಣಾಪುರ ಎಂಬ ಊರಿನವರು, ೪೨ ರ ಆಂದೋ ಲನದಲ್ಲಿ ಪ್ರಮುಖ ಪಾತ್ರಧಾರಿಗಳು, ದಕ್ಷಿಣ ಸಾತಾರಾ ಜಿಲ್ಲೆಯ ಕಾಂಗ್ರೆಸ ಕಮೀಟಿಯಲ್ಲಿಯೂ ಸಾಕಷ್ಟು ಗೌರವವಿದ್ದ ವ್ಯಕ್ತಿಯಾಗಿದ್ದರು. ಕಿರ್ಲೊ ಸರ ಕಾರಖಾನೆಯ ಮೋಲ್ಡಿಂಗ್ ಶೆಡ್ದಲ್ಲಿ ಅವರು ಚಾರ್ಜಮನ್ ಎಂದು ಕೆಲಸ ಮಾಡುತ್ತಾರೆ, ಕೂಲಿಕಾರರ ಮುಖಂಡರು, ಅವರು ತಮ್ಮ ಹಳೆಯ ನೆನಪುಗಳನ್ನು ತೆಗೆಯುತ್ತ“ ಶ್ರೀ ಲಕ್ಷ್ಮಣರಾವಜಿ ಕಿರ್ಲೋಸ್ಕರ (ಪಪ್ಪಾ) ಇವರ ನೆನಪಾಯಿತೆಂದರೆ, ನನ್ನ ಅಂತಃಕರಣವು ತುಂಬಿಬಾರದೇ ಇರುವ ದಿಲ್ಲ, ಅವರ ಮೂಲಕವೇ ನನ್ನ ಜೀವನಕ್ಕೆ ಒಂದು ಯೋಗ್ಯ ಮಾರ್ಗವು ದೊರೆಯಿತು; ಮತ್ತು ಅದಕ್ಕಾಗಿ ನಾನು ಅವರನ್ನು ನನ್ನ ಪಿತಾಮಹರೆಂದು ನನ್ನಿಸುತ್ತೇನೆ.”
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೭೮
ಗೋಚರ