ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮ ಮಿಂಚಿನಬಳ್ಳಿ “ನಾನು ೧೯೨೩ರಲ್ಲಿ ಮರಾಠಿ ೭ನೇ ಇಯತ್ತೆಯನ್ನು ಪಾಸಾದೆ. ಒಂದು ದಿವಸ ತಿರುಗಾಡುತ್ತ ಕಿರ್ಲೋಸ್ಕರವಾಡಿಯ ಕಡೆಗೆ ಕೆಲವು ಗೆಳೆಯ ರೊಂದಿಗೆ ಹೋದಾಗ ನಮ್ಮನ್ನು ಅನಂತರಾಯರು ನೋಡಿ “ಕೆಲಸಕ್ಕೆ ಬರುವಿರೇನು ?” ಎಂದು ವಿಚಾರಿಸಿದರು, ನಾವು ಅದಕ್ಕೆ (ಹೋ” ಎಂದು ಒಪ್ಪಿ ಮರುದಿನದಿಂದಲೆ ಕೆಲಸಕ್ಕೆ ಆರಂಭಮಾಡಿದೆವು.” “ಮುಂದೆ ಹೋಳೀಹುಣ್ಣಿವೆ ಬಂದಿತು, ಕರಿಯ ನಿಮಿತ್ಯ, ಒಬ್ಬರಿ ಗೊಬ್ಬರು ರಾಡಿ ಒಗೆಯುವದು, ಸೆರೆ ಕುಡಿಯುವದು, ಭೀಭತ್ವ ಹೊಲಸು ಮಾತಗಳನ್ನಾಡುವದು, ಅಂದು ನಡೆಯತಕ್ಕುವೆ. ಆದರೆ ಅಂದೇ ಕಾರ ಖಾನೆಯ ಹುಟ್ಟುಹಬ್ಬವಿದ್ದುದರಿಂದ ಅದನ್ನು ಬಹು ಉತ್ಸಾಹದಾಯಕ ನಾಗಿಯೂ ಮಾದರಿಯಾಗುವಂತೆಯೂ ಆಚರಿಸಲಾಯಿತು. ಆ ದಿವಸ ವಾಡಿಯಲ್ಲಿ ಬೇರೆ ಬೇರೆ ತರದ ಶರ್ಯತ್ತುಗಳು, ಚಮತ್ಕಾರಿಕ ಆಟಗಳು ನಡೆದವು. ನನಗೂ ಇಂಥ ಕಾರ್ಯಕ್ರಮವೆಂದರೆ ಬಲು ಪ್ರೀತಿ, ಆ ಮೇಲೆ ಕೇಳುವದೇನು ? ಹುಡುಗಿ ಆಟಗುಳಿ, ಬಂದದ್ದು ನಾಗರ ಪಂಚಮಿ ಹಬ್ಬ ಎಂಬಂತೆ ನನ್ನ ಅವಸ್ಥೆಯಾಯಿತು.” “ನಾನು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದೆನು. ಅಲ್ಲಿಯ ಶಿಸ್ತು ಮತ್ತು ಸುಸಂಸ್ಕೃತತನವು ನನ್ನ ಮನಸ್ಸಿನ ಮೇಲೆ ಬಹಳ ಪರಿಣಾಮ ವನ್ನುಂಟು ಮಾಡಿತು, ಮುಂದೆ ಬಹುಮಾನ ವಿತರಣ ಹಾಗೂ ಪಪ್ಪಾ ಅವರ ಭಾಷಣ ನಡೆದವು. ನಾವು ನಮ್ಮ ನಮ್ಮ ಸುಧಾರಣೆಗಾಗಿ ಯಾವ ಯಾವ ಸಂಗತಿಗಳ ಕಡೆಗೆ ಲಕ್ಷ ಹಾಕಬೇಕು ಎಂಬುದನ್ನು ಅವರು ಹೇಳಿದರು. ಅದರಂತೆ ನಡೆಯಲು ನಾನು ಯತ್ನಿಸತೊಡಗಿದೆನು.” “ಕೆಲಸಗಾರರು ಸುಖಿಗಳಾದರೆ, ಕಾರಖಾನೆಯೂ ಸುಖಿಯಾಗಿರುವದು. ಕಾಮಗಾರರು ನಿರ್ವ್ಯಸನಿಗಳಾದರೆ, ಕಾರಖಾನೆಯು ಸ್ವಚ್ಛವಾಗಿರುವದು. ಹೀಗೆ ಅವರು ಯಾವಾಗಲೂ ತಮ್ಮ ಭಾಷಣದಲ್ಲಿ ಹೇಳುತ್ತಿದ್ದರು. ಕೆಲಸ ಗಾರರಲ್ಲಿ ಸುಧಾರಣೆಯಾಗುತ್ತ ಹೋಗಿ, ಸುತ್ತಮುತ್ತಲಿನ ಹಳ್ಳಿಗಳಿಗೂ ಅದೇ ಮುದ್ರೆ ಬೀಳತೊಡಗಿತು, ಅದರಿಂದ ಕಿರ್ಲೋಸ್ಕರವಾಡಿಯು ಹಳ್ಳಿ ಗಳನ್ನು ಸುಸಂಸ್ಕೃತವನ್ನಾಗಿ ಮಾಡುವ ಕೇಂದ್ರವೆನಿಸಿಕೊಂಡಿತು.” - “ಹೀಗೆ ಕಾರಖಾನೆಯು ನಡೆದಿರುವಾಗ ೧೯೪೦ ರಲ್ಲಿ ಕೆಲವು ಸಾಮಾನ್ಯ ಮಾತುಗಳ ಬಗ್ಗೆ ಮತಭೇದವಾಗಿ ಕೆಲಸಗಾರರು ಸಂಪು ಹೂಡಿದರು, ಆದರೆ