ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು | ಅದು ಒಂದೇ ದಿನದಲ್ಲಿಯೇ ಒಪ್ಪಂದವಾಗಿ ಕಾರಖಾನೆಯು ಸುಸೂತ್ರವಾಗಿ ನಡೆಯತೊಡಗಿತು.” “ಇಂಥ ಮತಭೇದದ ಪ್ರಕಾರಗಳು ಪುನಃ ಉದ್ಧೂತವಾಗಬಾರದೆಂದೂ ಮತ್ತು ಕಾರಖಾನೆಯಲ್ಲಿ ಈಗ ೧೭೦೦ ರ ವರೆಗೆ ಕೆಲಸಗಾರರಾಗಿರುವದರಿಂದ ಅವರ ಅನುವು-ಆಪತ್ತುಗಳನ್ನು ತಿಳಿದುಕೊಳ್ಳುವದು ಸುಲಭವಾಗಲೆಂದೂ ಚಾಲಕರು ಸ್ವತಃ ಕೆಲಸಗಾರ ಕೌನ್ಸಿಲ'ದ ಸ್ಥಾಪನೆಯನ್ನು ಮಾಡಿದರು. ಈ ಕೌನ್ಸಿಲ್‌ದಲ್ಲಿ ಕಾನಕಾರರು ಆರಿಸಿಕೊಟ್ಟ ೨೦ ಪ್ರತಿನಿಧಿಗಳು ಇದ್ದರು, ಅವರ ಹಾಗೂ ಚಾಲಕರ ಸಭೆಯು ತಿಂಗಳಿಗೊಮ್ಮೆ ಕೂಡುತ್ತಿತ್ತು, ಅಲ್ಲಿ ಕೂಲಿ ಕಾರರ ಬೇರೆ ಬೇರೆ ಪ್ರಶ್ನೆಗಳನ್ನು ಬಿಡಿಸಲಾಗುತ್ತಿತ್ತು, ಕಾಮಗಾರರ ಪ್ರಶ್ನೆ ಮಂಡಿಸುವ ಕೆಲಸವು ಮುಖ್ಯವಾಗಿ ನನಗೆ ಮಾಡಬೇಕಾದ್ದರಿಂದ ನನ್ನ ಹಾಗೂ ಚಾಲಕರ ನಿಕಟ ಸಂಬಂಧವು- ಬರತೊಡಗಿತು.” - “ಕೆಲಸಗಾರರಲ್ಲಿ ಶಿಸ್ತು ಬೇಕೆಂದು ಪ್ರತಿ ಶನಿವಾರ ಮುಂಜಾನೆ ಎಲ್ಲ ಕೂಲಿಕಾರರ ಡ್ರಿಲ್ ನಡೆಯುತ್ತಿತ್ತು. ಈ ಡ್ರಿಲ್‌ನ್ನು ಕಲಿಸುವ ಕೆಲಸವನ್ನು ಶಂಕರರಾಯರು ಮಾಡುತ್ತಿದ್ದರು, ಕೊನೆಗೆ ಶ್ರೀ ಪಪ್ಪಾ ನಮಗೆ ಶಿಸ್ತಿನ ಬಗ್ಗೆ ನಾಲ್ಕು ಮಾತು ಹೇಳುತ್ತಿದ್ದರು. ಈ ಸೈನಿಕ ಶಿಕ್ಷಣದ ಶಿಸ್ತು ೧೯೪೨ ರ ಚಳವಳಿಯಲ್ಲಿ ಉಪಯೋಗವಾಯಿತು.” (ಕೆಲಸಗಾರರಿಗೆ ಕುಸ್ತಿಯು ಬಹಳ ಸೇರುತ್ತದೆಂದು ತಿಳಿದು ರಾಯರು ಒಂದು ಗರಡೀಮನೆಯನ್ನು ಕಟ್ಟಿಸಿದರು. ಕಾರಖಾನೆಯನ್ನು ನೋಡಲು ಬಂದ ಅತಿಥಿಗಳು ನಮ್ಮ ಧೃಡಕಾಯವನ್ನು ಕಂಡು ಬಹಳ ಹಿಗ್ಗು ತ್ತಿದ್ದರು.” - *ರಾಯರ ಈ ಬಗೆಯ ಕೆಳಗಿನ ಜನರನ್ನು ಮೇಲಕ್ಕೆತ್ತುವ ಪ್ರಯತ್ನ ಗಳನ್ನು ನೋಡಿದ ನನಗೆ, ಕಾರಖಾನೆಯನ್ನು ಪಟ್ಟಣದಲ್ಲಿ ತೆರೆಯದೆ ಹಳ್ಳಿ ಗಳಲ್ಲಿ ತೆರೆದರೆ, ರಾಷ್ಟ್ರದ ಪ್ರಗತಿಯು ಭರದಿಂದ ಸಾಗುವದೆಂದು ಅನಿಸುತ್ತದೆ.” “ಮುಂದೆ ಕೂಲಿಕಾರ ಸಂಘದ ಸ್ಥಾಪನೆಯಾಯಿತು, ಅದರ ಸರ್ವ ಸೂತ್ರ ನನ್ನ ಕೈಯಲ್ಲಿದ್ದವು. ನಾನು ಕೂಲಿಕಾರರ ಮುಂದಾಳಾಗಿದ್ದರೂ ಚಾಲಕರ ಮನಸ್ಸಿನಲ್ಲಿ ನನ್ನ ಬಗ್ಗೆ ಭಿನ್ನ ಭಾವನೆ ಇರಲೇಯಿಲ್ಲ. ನನಗೆ ಪಪ್ಪಾ ಅವರು “ನಿಮಗೆ ಹಣ ಬೇಕಾಗಿದ್ದರೆ, ಬೇಡಿ ಇಸಿದುಕೊಳ್ಳಿರಿ, ಕಾರ ಖಾನೆಯು ನಿನ್ನದೆ ಇದೆ ಎಂಬುದನ್ನು ಮರೆಯಬೇಡಿರಿ, ಚಾಲಕ ಮತ್ತು