ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚುಬಳ್ಳಿ ಸರಕಾರವು ತೆಗೆದುಕೊಳ್ಳತೊಡಗಿದೆ. ಅವರಿಗೆ ಕಾಯಿದೆಯಿಂದಲೇ ಅನೇಕ ಸವಲತ್ತುಗಳೂ ಮಹತ್ವದ ಹಕ್ಕುಗಳೂ ದೊರೆತಿವೆ. ಇದು ಒಳ್ಳೆಯದೇ ! ಅದರಿಂದಲೂ ಕೂಲಿಕಾರರ ನಿಜವಾದ ಕಲ್ಯಾಣವು ಆಗಲು ಶಕ್ಯವಿಲ್ಲ ಎಂಬುದು ತಿಳಿದು ಬಂದಮೇಲೆ ಲಕ್ಷಣರಾಯರು ಬಹಳ ವಿಚಾರಪರರಾದರು. ಮೊದಲು ಕಾಮಗಾರನಿಗೆ ಅಪಘಾತದಿಂದ ನೋವು ಆಗಿದ್ದರೆ ಸಹಾನು ಭೂಶಿಯಿಂದ ಅವನನ್ನು ನಿರುದ್ಯೋಗದಿಂದ ರಕ್ಷಿಸುವ ದಾರಿಯನ್ನು ಚಾಲ ಕರು ತೆಗೆಯುತ್ತಿದ್ದರು. ಆದರೆ ಈಗ ಕಾಯದೆಯಂತೆ ನುಕಸಾನು ಭರಪಾಯಿ ಆದರೆ ಆ ಪ್ರಶ್ನೆ ಮುಗಿಯಿತು, ಯಾವನಾದರೊಬ್ಬ ಕೂಲಿಕಾರನು ಬೇನೆ ಯಿಂದ ಸತ್ತರೆ, ಅವನ ಕುಟುಂಬ ಪೋಷಣೆಯನ್ನು ಮಾಡಲು ಚಾಲಕರು ಮುಂದಾಗುತ್ತಿದ್ದರು. ಈಗ ಹಾಗೆ ಸಹಾನುಭೂತಿ ತೋರಿಸಲು ಅವಕಾಶವೇ ಇಲ್ಲ, ಯಾಕಂದರೆ ಒಬ್ಬನಿಗೆ ಔದಾರ್ಯ ತೋರಿಸಿದರೆ ಇನ್ನೊಬ್ಬನು ಹಕ್ಕಿ ನಿಂದ ಬೇಡುವಂಥ ಕಾಯಿದೆಗಳು ಬಂದವು. ಒಟ್ಟಿನಲ್ಲಿ ಈ ಕಾಯಿದೆಗಳು ಮಾನವತ್ವದ ಮೊದಲನೆಯ ಆಹುತಿಯನ್ನು ತೆಗೆದುಕೊಂಡವು. ಕಾರಖಾನೆಯಲ್ಲಿ ಈಗ ವಕೀಲರ ಪ್ರಸ್ಥವು ಬಹಳ ಬೆಳೆದಿದೆ, ಯಾವುದೇ ಪ್ರಶ್ನೆಯನ್ನು ಕಾಯ್ದೆಗಳಿಂದಲೇ ಬಿಡಿಸಬೇಕಾದ ಪ್ರಸಂಗ ಬಂದು ಕುಳಿತಿದೆ. ಕೇಸು ನಡೆಯದ ಒಂದು ದಿನವೂ ಇಲ್ಲ. - ತಮ್ಮ ಕೈಕೆಳಗಿನ ಜನರೊಡನೆ ಒಡೆಯನು ಹೇಗೆ ನಡೆದುಕೊಳ್ಳಬೇಕು. ಎಂಬ ಬಗ್ಗೆ ತುಕಾರಾಮ ಮಹಾರಾಜರ ಒಂದು ಸುಂದರ ಅಭಂಗವಿದೆ. ಅವರು ಅನ್ನುತ್ತಾರೆ. “ದಯಾ ಕರೀ ಪುತ್ರಾಸಿ, ತೇಚಿ ದಾಸಾ ಆಣಿ ದಾಸೀ” ಎಂದು. ಆದರೆ ಈ ತತ್ವವು ಇಂದು ಯಾವ ಕೆಲಸದ್ದು ! ಏಕೆಂದರೆ ಇಂದು ಕೂಲಿ ಕಾರರಿಗೆ ದಯೆ ಬೇಕಾಗಿಲ್ಲ, ಅವರಿಗೆ ಬೇಕಾದುದು ಹಕ್ಕು, ಅವರು ಕೃತಜ್ಞತೆಗೆ ಬೆಲೆ ಕೊಡಲಾರರು. ಹೀಗಾದಮೇಲೆ ಚಾಲಕರ ಸಹಾನುಭೂತಿಯ ಅವಶ್ಯ ಕತೆಯಾದರೂ ಅವರಿಗೆಲ್ಲಿ ಬೇಕಾಗಿದೆ ? ಲಕ್ಷ್ಮಣರಾಯರು ಹಳ್ಳಿಯಲ್ಲಿ ಹೋಗಿ ಅಲ್ಲಿಯ ಜನತೆಯ ಕಲ್ಯಾಣ ಕ್ಯಾಗಿ ಎಷ್ಟು ಶ್ರಮಿಸಿದರೆಂಬುದನ್ನು ನೀವು ನೋಡಿದ್ದೀರಿ, ಅವರು ಅವ ರೊಡನೆ ಅತ್ಯಂತ ಆತ್ಮೀಯತೆಯಿಂದ ವರ್ತಿಸುತ್ತಿದ್ದರು, ಅದರಿಂದ ಅಲ್ಲಿಯ ರೈತನೊಬ್ಬನು ಅವರ ಬಗ್ಗೆ ಪ್ರಮೋದ್ಧಾರಗಳನ್ನು ತೆಗೆದನು: “ಒಡೆಯನು ನಮ್ಮ ಕೃಷ್ಣ, ನಾವೆಲ್ಲರೂ ಗೋಪಾಲಕರು'