ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ಖಂಚಿನಬಳ್ಳಿ ಬೇಕಾದಾಗ ಸಾಕಷ್ಟು ನೀರು ಕುಡಿಯಲಾಗುವಂತೆ ಅವುಗಳ ಹತ್ತಿರ ಸ್ವತಂತ್ರ ವಾದ ಹೌದನ್ನು ಮಾಡಿದ್ದರು. ಲಕ್ಷ್ಮಣರಾಯರ ಬೇಸಾಯ ಹೀಗೆ ನಡೆದಿರುವಾಗ ಒಂದು ದಿನ, ನಗರಕ್ಕೆ ಹಾಲು-ಪಲ್ಲೆ ಗಳನ್ನು ಒಯ್ಯುತ್ತಿದ್ದ ಅವರ ಜಟಕಾ ನಡುದಾರಿಗೇ ತಿರುಗಿ ಬಂದಿತು. ಜನಸಮೂಹವು ದಾರಿಯಲ್ಲಿ ಅದನ್ನು ತರುಬಿ, ಜಟಕಾಕ್ಕೆ ಮೂರು ಬಣ್ಣದ ಧ್ವಜವನ್ನು ಹಚ್ಚಿದಲ್ಲದೆ ಬಿಡುವುದಿಲ್ಲವೆಂದು ಹಿಂದಕಟ್ಟಿ ದ್ದರು, ರಾಷ್ಟ್ರೀಯ ಚಳವಳಿಯ ಕಾಲವದು, ಈ ಬಗೆಯ ನಿದರ್ಶನಗಳು ಎಲ್ಲ ಕಡೆಗೆ ನಡೆದಿದ್ದವು, ಈ ವಿಷಯದಲ್ಲಿ ಜನರೊಡನೆ ದರ್ಪ ನಡೆಯದೆಂದು ಅರಿತ ಲಕ್ಷ್ಮಣರಾಯರು ತ್ರಿವರ್ಣ ಧ್ವಜವೊಂದನ್ನು ತಯಾರಿಸಿ ಜಟಕಾಕ್ಕೆ ಹಚ್ಚಿ ಕಳಿಸಿದರು. - ಮುಂದೆ ೧೯೪೬ ರಲ್ಲಿ ಕಿರ್ಲೋಸ್ಕರ ಇಲೆಕ್ನಿಕ್‌ ಕಂಪನಿಯನ್ನು ಆರಂಭಿ ಸುವುದಕ್ಕಾಗಿ ಲಕ್ಷ್ಮಣರಾಯರ ಕಿರಿಯ ಮಗ ಶ್ರೀ, ರವೀಂದ್ರರು ಬೆಂಗಳೂರಿಗೆ ಬಂದರು. ಈ ಹೊತ್ತಿಗೆ ಪ್ರಭಾಕರಸಂತರಿಗೆ ಕಿರ್ಲೋಸ್ಕರ ಸೇಲ್ಸ್ ಡಿಪೋದ ವ್ಯವಸ್ಥೆಯನ್ನು ಒಪ್ಪಿಸಿದ್ದರಿಂದ ಅವರೂ ನಗರದಲ್ಲೇ ಮನೆ ಮಾಡಿದರು. ಎಲ್ಲರ ಬಿಡಾರ ಒತ್ತಟ್ಟಿಗೇ, ಲಕ್ಷ್ಮಣರಾಯರಿಗೆ ಈ ಹೊಸ ಕಾರಖಾನೆ ಯನ್ನು ಸ್ಥಾಪಿಸುವ ಮನಮೆಚ್ಚಿನ ಕೆಲಸ ಸಿಕ್ಕುತ್ತಲೇ ಅದರಲ್ಲಿ ಅವರ ವೇಳೆ ಸರಸರ ಹೋಗತೊಡಗಿತು. ಆ ಕಾರಖಾನೆಯ ಅಡಿಗಲ್ಲನ್ನು ಅವರ ಹಸ್ತ ದಿಂದಲೇ ಇಡಿಸಲಾಯಿತು. ೧೯೪೭ ರಿಂದ ಅದರಲ್ಲಿ ಇಲೆಕ್ಟಿಕ್ ಮೋಟರುಗಳು ತಯಾರಾಗಿ ಹೊರಬೀಳತೊಡಗಿದವು. ಇಷ್ಟು ಶೀಘ್ರದಲ್ಲಿ, ಇಷ್ಟು ಯಶಸ್ವಿ ಯಾಗಿ ಕಾರಖಾನೆ ಆರಂಭವಾದುದನ್ನು ಕಂಡು ಲಕ್ಷಣರಾಯರಿಗೆ ತುಂಬಾ ಸಮಾಧಾನವಾಯಿತು. ಅಷ್ಟರೊಳಗೆ ಪುಣೆಯಲ್ಲಿ ಆಯಿಲ್ ಇಂಜಿನಿನ ಕಾರಖಾನೆಯ ಆಕಾರಕ್ಕೆ ಬರತೊಡಗಿತ್ತು. ಅದರ ಸರ್ವ ವ್ಯವಸ್ಥೆ ಶಂತನುರಾಯರ ಕಡೆಗಿತ್ತು, ಕಿರ್ಲೋಸ್ಕರ ಸಂಸ್ಥೆಯ ನೇತೃತ್ವವೂ ಪರಂಪರೆಯಿಂದ ಅವರ ಕಡೆಗೇ ಬಂದಿತು. ೧೯೪೭ರ ಎಪ್ರಿಲಿನಲ್ಲಿ ಅವರು, ಪತ್ನಿ ಸೌ| ಯಮೂತಾಯಿಯೊಂದಿಗೆ ಪುಣೆಯಲ್ಲಿ ಬಂದು ವಾಸಮಾಡಿದರು. ನಡುವೆ ೩-೪ ವರ್ಷಗಳ ಹೊರತಾಗಿ ಲಕ್ಷ್ಮಣ ರಾಯರು ಇರುತ್ತಿದ್ದುದು ತಮ್ಮ ಹಿರಿಯ ಮಗನಲ್ಲಿಯೆ. ಆದುದರಿಂದ ಶಂತನು ರಾಯರು ಪುಣೆಯಲ್ಲಿ ಮನೆ ಮಾಡಿದಮೇಲೆ, ನೀವೂ ಪುಣೆಯಲ್ಲಿ ಬಂದಿರಬೇ