ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಮಿಂಚಿನಬಳ್ಳಿ ಕಿರ್ಲೋಸ್ಕರ್‌ ಇಂಜಿನನ್ನು ಅವರು ನೋಡಿ, ಆ ಕಾರಸಾಧನೆಗಾಗಿ ಎಲ್ಲರಿಗೂ ಮೆಚ್ಚಿಕೆಯ ಮಾತನ್ನಾಡಿದರು. - ಲಕ್ಷ್ಮಣರಾಯರು ಪುಣೆಗೆ ಬಂದರೂ ತಮ್ಮದೇ ಆದ ಕೆಲಸವಿಲ್ಲದಿದ್ದರೆ ಅವರೆಂತು ಸ್ವಸ್ಸ ಕುಳಿತಾರು ? ಅಂತಹದೊಂದು ಉದ್ಯೋಗವನ್ನು ಹುಡುಕಿ ಕೊಳ್ಳಲೂ ಅವರಿಗೆ ತಡವಾಗಲಿಲ್ಲ. ಇಲ್ಲಿಯ ಕಾರಖಾನೆಯ ಬದಿಯಲ್ಲಿಯೂ ಹೊಳೆ, ದೊಡ್ಡ ಬಯಲು ಸ್ಥಳ ಇತ್ತು, ಮನೆಯಲ್ಲಿ ನೋಡಿದರೆ, ರೇಶನಿಂಗಿನದೆಸೆ ಯಿಂದಾಗಿ ಎಂತಹದೋ ಅಕ್ಕಿಯ ಅಥವಾ ಗೋವಿನಜೋಳದ ನುಚ್ಚಿನ ಅನ್ನ ವನ್ನು ತಿನ್ನುವ ಪಾಳಿ ಬಂದಿತ್ತು, ಆದ್ದರಿಂದ ಇಲ್ಲಿಯೂ ಹೊಲ ಮಾಡಬೇಕೆಂಬ ವಿಚಾರವನ್ನು ಅವರು ನುಗನೆದುರು ಎತ್ತಿದರು. 'ಹೊಲ ಮಾಡುವದೇ ಆದರೆ ಬತ್ತವನ್ನು ಬೆಳೆದರೆ ಬಹಳ ಒಳ್ಳೆಯದಾಗುವುದು' ಎಂದು ಯಮೂತಾಯಿ ಎಂದಳು. “ಜೋಳ, ಗೋದಿ, ನೆಲಗಡಲೆ ಬೆಳೆಯುವುದು ನನಗೆ ಗೊತ್ತಿದೆ. ಕಿರ್ಲೋಸ್ಕರವಾಡಿಯಲ್ಲಿ ದ್ರಾಕ್ಷೆಯ ತೋಟವನ್ನೂ ಮಾಡಿದ್ದೇನೆ. ಬತ್ತ ಬೆಳೆಯುವ ಅನುಭವ ನನಗಿಲ್ಲ, ಆದರೂ ನಾನು ಮಾಡಿ ನೋಡುತ್ತೇನೆ. ಬೆಳೆದರೆ ನಿಮ್ಮದು, ಕೆಟ್ಟರೆ ನನ್ನದು.” ಎಂದರು ಲಕ್ಷ್ಮಣರಾಯರು. ಎತ್ತು-ಮಟ್ಟಿಗಳನ್ನು ಅಣಿ ಮಾಡಿಕೊಂಡು, ಆಳನ್ನು ನಿಯಮಿಸಿ ಕೊಂಡು ಅವರು ಕೆಲಸಕ್ಕೆ ತೊಡಗಿದರು. ಭಾಜೆ ಎಂಬಲ್ಲಿಯ ಶ್ರೀ. ದಾದಾ ಸಾಹೇಬ ಚಿತಳೆ ಎಂಬವರು ಈ ವಿಷಯದಲ್ಲಿ ಬಲ್ಲವರೆಂದು ಕೇಳಿ, ಅವರನ್ನು ಕಂಡು ವಿಚಾರಿಸಿ ಅವರ ಸಲಹೆಯಂತೆ ಬೀಜ ಕೊಂಡು ಬತ್ತವನ್ನು ಬಿತ್ತಿದರು. ಮೊದಲ ವರ್ಷ ಬೆಳೆ ಚೆನ್ನಾಗಿ ಬರಲಿಲ್ಲ. ಆದರೆ ಮನೆಯಲ್ಲಿ ಊಟಕ್ಕೆ ಉತ್ತಮ ಪ್ರತಿಯ ಅಕ್ಕಿಯು ಸಾಕಷ್ಟು ದೊರೆಯಿತು, ಅದರಿಂದ ಎಲ್ಲರಿಗೂ ಸುಗ್ರಾಸ ಭೋಜನದ ತೃಪ್ತಿ ಉಂಟಾಯಿತು. ದಿನಾಲು ಮುಂಜಾನೆ ಲಕ್ಷಣರಾಯರು ಶಂತನುರಾಯರೊಂದಿಗೆ ಕಾರಖಾನೆಗೆ ಹೋಗಿ ಅಲ್ಲಿ ಕೆಲ ಹೊತ್ತು ಕಳೆಯುತ್ತಿದ್ದರು: ಉಳಿದ ಹೊತ್ತ ನೆಲ್ಲ ಗದ್ದೆಯಲ್ಲಿ ಕಳೆಯುತ್ತಿದ್ದರು. ಆ ಕಾಲದಲ್ಲಿ ಭಾರತದ ಆಹಾರ ಸಮಸ್ಯೆಯನ್ನು ಬಿಡಿಸುವುದಕ್ಕಾಗಿ ಗೆಣಸಿನ ಹುಟ್ಟುವಳಿಯನ್ನು ಹೆಚ್ಚಿಸಬೇಕೆಂದು ಸರಕಾರದ ಪ್ರಚಾರ ಜೋರಾಗಿ