ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೭ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಕರುಗಳು ಹುಟ್ಟಿದವು. ಮುಂದೆ ಆ ಕರುಗಳು ದೊಡ್ಡ ವಾದಮೇಲೆ ಅವು ಗಳಿಗೂ ಅದೇ ಪ್ರಜೋತ್ಪಾದನ ಕ್ರಮವನ್ನು ಅನುಸರಿಸಲಾಯಿತು. ಲಕ್ಷ್ಮಣ ರಾಯರು ಅನುಸರಿಸಿದ ಈ ಆಧುನಿಕ ಪದ್ಧತಿಯು ಯಶಸ್ವಿಯಾದುದನ್ನು ಕಂಡು, ಇತರರೂ ಅವರನ್ನು ಅನುಕರಿಸತೊಡಗಿದರು. ಇದರೊಂದಿಗೇ ಅವರು ಜೇನು ಸಾಕಿದರು, ಅದಕ್ಕಾಗಿ ಮಹಾಬಳೇಶ್ವರ ದಿಂದ ಪೆಟ್ಟಿಗೆಗಳನ್ನು ತರಿಸಿ, ತಮ್ಮ ಬಂಗಲೆಯ ಸುತ್ತಲೂ ಹೊಲದಲ್ಲಿಯೂ ಇಟ್ಟರು, ಮತ್ತು ವಿಧ್ಯುಕ್ತವಾಗಿ ಜೇನುತುಪ್ಪ ತೆಗೆಯತೊಡಗಿದರು. ಸ್ವಲ್ಪದ ರಲ್ಲಿ ಹೇಳುವುದೆಂದರೆ, ಭೂಮಿ, ಅದರಲ್ಲಿಯ ಕೆಲಸ ಇದರಲ್ಲಿಯೇ ಲಕ್ಷಣ ರಾಯರ ಇಡೀ ಹಗಲು ಕಳೆಯುತ್ತಿತ್ತು, ಅವರಿಗೀಗ ೮೫ ನೆಯ ವರುಷ, ಸಹಜವಾಗಿಯೇ ಅವರೀಗ ಅತ್ಯಂತ ನಿರಿಚ್ಚರಾಗತೊಡಗಿದರು. ಯಾರಾದರೂ ಅವರನ್ನು ಕಾಣಲು ಬಂದರೆ ಆ ಪ್ರಸಂಗ ಅವರಿಗೆ ಬೇಡವೆನಿಸುವುದು, ಇತ್ತೀಚೆಗೆ ನನ್ನ ಮರೆವು ಹೆಚ್ಚಿದೆ, ಅಲ್ಲದೆ ಚೆನ್ನಾಗಿ ಕಿವಿ ಕೇಳಿಸುವುದೂ ಇಲ್ಲ, ಹೀಗಾಗಿ ನಾನು ಯಾರನ್ನಾದರೂ ಗುರುತಿಸದೆ ಹೋದರೆ ಅವರಿಗೆ ಸುಮ್ಮನೆ ಕೆಟ್ಟೆನಿಸಬಹುದು, ಆದ್ದರಿಂದ ನನ್ನ ಮೇಲೆ ಅಂತಹ ಪ್ರಸಂಗ ಯಾಕೆ ತರುತ್ತೀರಿ ? ನನ್ನ ಹೊಲ, ನನ್ನ ಆಳು ನನ್ನ ಹೋರೆ- ಇವುಗಳ ಹೊರತು ಬೇರಾವ ಗೋಜೂ ನನಗೆ ಬೇಕಾಗಿಲ್ಲ” ಎನ್ನುತ್ತಾರೆ ಅವರು. ಪುಣೆಯ ಮರಾಠಾ ಚೇಂಬರ್ ಆಫ್ ಕಾಮರ್ಸ ಆ್ಯಂಡ್ ಇಂಡಸ್ಟ್ರೀಜ ಸಂಸ್ಥೆಯು ಲಕ್ಷ್ಮಣರಾಯರಿಗೆ ತನ್ನ ಸನ್ಮಾನ್ಯ ಸದಸ್ಯತ್ವವನ್ನು ಕೊಡಬೇಕೆಂದು ನಿರ್ಣಯಿಸಿದಾಗ, ಅದು ಅವರಿಗೆ ಒಪ್ಪಿಗೆಯಾಗದಿದ್ದು ದೂ ಇದಕ್ಕಾಗಿಯೆ. ಇಂತಹ ಮಾನ-ಸನ್ಮಾನ ಮಾಡಿಸಿಕೊಳ್ಳುವ ಇಚ್ಛೆ ತಮಗೆ ಎಷ್ಟು ಮಾತ್ರವೂ ಇಲ್ಲವೆಂದು ಅವರು ಆ ಸಂಸ್ಥೆಗೆ ಸ್ಪಷ್ಟವಾಗಿ ತಿಳಿಸಿದರು, ಆದರೆ ಸಂಸ್ಥೆಯವರು ಈ ಸಮಾರಂಭದ ಸಿದ್ಧತೆಯನ್ನು ಮಾಡಿಬಿಟ್ಟರು. ಸಮಾರಂಭದ ಅಧ್ಯಕ್ಷತೆ ಯನ್ನು ಭಾರತೀಯ ನಿಯೋಜನದ ದೃಷ್ಟಾರರಾದ ಅ. ಛಾ. ಕಾರಖಾನೆದಾರ ಸಂಘದ ಅಧ್ಯಕ್ಷರಾದ ೯೩ ವರ್ಷದ ಸರ್ ಮೋಕ್ಷ ಗುಂಡಂ ವಿಶ್ವೇಶ್ವರಯ್ಯನ ವರು ವಹಿಸಲಿದ್ದು ದರಿಂದ ಅದಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಿತ್ತು. ಆದರೆ, ಲಕ್ಷ್ಮಣರಾಯರೇ ಒಪ್ಪದಿದ್ದಾಗ ಮಾಡುವುದೇನು ?