ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಮಿಂಚಿನಬಳ್ಳಿ ಶ್ರೀ. ಕಾಂಬಳೆ- ಇವರೆಲ್ಲ ಲಕ್ಷಣರಾಯರ ವಿವಿಧ ಗುಣವರ್ಣನೆಮಾಡಿ ಅವ ರಿಗೆ ತಮ್ಮ ಶ್ರದ್ದಾಂಜಲಿಯನ್ನರ್ಪಿಸಿದರು. ಲಕ್ಷಣರಾಯರ ಮೂವರು ಮಕ್ಕಳಾದ ರಾಜಾರಾಮಪಂತ, ಪ್ರಭಾಕರಸಂತ ಮತ್ತು ರವೀಂದ್ರರು ಚಿತೆಗೆ ಅಗ್ನಿ ಕೊಟ್ಟರು. ಹೀಗೆ ಲೋಕೋತ್ತರರೀತಿಯಲ್ಲಿ ಲಕ್ಷ್ಮಣರಾಯರು ತಮ್ಮ ಇಹಲೋಕ ಯಾತ್ರೆಯನ್ನು ಪೂರೈಸಿದರು! ಲಕ್ಷ್ಮಣರಾಯರ ನಶ್ವರಶರೀರವನ್ನು ಕಣ್ಣೆದುರಿನಲ್ಲಿ ಅಗ್ನಿಯು ಆಹುತಿ ಗೊಳ್ಳುತ್ತಿದ್ದ. ಆದರೆ, ಆ ಹೊಗೆಯೊಳಗಿಂದ, ಆ ಜ್ವಾಲೆಗಳೊಳಗಿಂದ, ಲಕ್ಷ್ಮಣರಾಯರ ನವ್ಯ ಭವ್ಯಮೂರ್ತಿಯೊಂದು ಹೊರಗೆಬಂದು ಎಲ್ಲರಿಗೂ ದಿವ್ಯ ಸಂದೇಶವನ್ನು ಕೊಡುತ್ತಿದ್ದಿತೋ ಏನೋ, ನಿಸರ್ಗ ಕ್ರಮವನ್ನನುಸರಿಸಿ ಅಕ್ಷಣರಾಯರ ದೇಹವೂ 'ಮಣ್ಣು ಮಣ್ಣಲ್ಲಿ ಕೂಡಿತು' ಎಂಬಂತೆ ಅಂತರ್ಧಾನವಾಗುತ್ತಿತ್ತು. ಆದರೆ, ಮಣ್ಣಲ್ಲಿ ಹೊನ್ನು ತೆಗೆದು ತೋರಿದವರ ಜೀವನಮಂತ್ರವು ಮಾತ್ರ ಆ ಮಣ್ಣಲ್ಲಿ ನೇರದೆ, ಪ್ರತಿಯೊಬ್ಬರ ಅಂತಃಕರಣ ದಲ್ಲಿ ಪ್ರತಿಧ್ವನಿಗೊಡುತ್ತಲಿತ್ತು. “ಕೆಲಸ ಮಾಡುತ್ತ ಹೋಗಿರಿ, ಸತತವಾಗಿ ಮುಂದಡಿಯಿಡುವದಕ್ಕೆ ಹೆಣಗಿರಿ; ಎಂದರೆ ಗೆಲವಿನ ಹಣ್ಣು , ನಿಮ್ಮ ಉಡಿಯಲ್ಲಿ ಬೀಳದಿರುವುದಿಲ್ಲ.” ಇದೇ ಆ ಯಂತ್ರಯೋಗಿಯ ಜೀವನಮಂತ್ರ !