ಹಿಂಬದಿಯ ಪುಟದಲ್ಲಿಯ ಮರಾಠಿ ಸಂದೇಶದ ಕನ್ನಡ ಅನುವಾದ ಭಾರತೀಯ ತರುಣರಿಗೆ ಲಕ್ಷ್ಮಣರಾಯರ ಹಸ್ಸಾ ಕರ ಸಂದೇಶ ತರುಣರು ಯಾರಾದರೂ ಬಂದು ನನ್ನನ್ನು ಕೇಳಿದರೆ, 'ತಮ್ಮಗಳಿರಾ! ಮಾತನಾಡದೆ ಮನಃ ಪೂರ್ವಕ ಕೆಲಸಮಾಡಿರಿ, ಮಾತನಾಡುವಶಕ್ತಿಯನ್ನು ಮಾಡುವದರಲ್ಲಿ ಬಳಿಸಿರಿ. ಗುಡುಗಿನ ಧ್ವನಿಯಲ್ಲಿ ಮಿಂಚಿಹೋಗುವ ವಿದ್ಯುತ್ತು ಪ್ರಕಾಶವನ್ನು ಕೊಡಬಲ್ಲದೆ ? ಅದನ್ನೇ ಯಂತ್ರದಲ್ಲಿ ಹಿಡಿದಿಟ್ಟ ವಿದ್ಯುತ್ತು ಗದ್ದಲವಿಲ್ಲದೆ ಪ್ರಕಾಶವನ್ನು ಕೊಡುವದಿಲ್ಲವೇ ? ಅದರಂತೆ, ನೀವೂ ಕಲಿಯಬೇಕು, ಮಾತಿಲ್ಲದೆ ಕಾರ್ಯಮಾಡಿದ ಮೇಲೆ, ಅದು ಜಗತ್ತಿಗೆ ತಿಳಿಯಬೇಕು. ಹೇಗೆ ಎಂಬ ವಿಚಾರಮಾಡುವ ಕಾರಣವಿಲ್ಲ. ನಾವು ನಮ್ಮ ಕೆಲಸವನ್ನು ಆನಂದದಿಂದ ಕುಶಲತೆಯಿಂದ ಮಾಡು. ತಿದ್ದರೂ ಕೂಡ ಅನೇಕ ವಿಘ್ನ ಪರಂಪರೆಗಳು ಬಂದು ನನ್ನು ಧೈರ್ಯದ ಸೈರ್ಯದ ಪರೀಕ್ಷೆಯನ್ನೆ ಮಾಡುತ್ತದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗದಿದ್ದರೆ, ನಾವು ನಮ್ಮ ಧೈಯದಿಂದ ದೂರವಾದವೆಂದೇ ತಿಳಿಯಬೇಕು, ಆದ್ದರಿಂದ ಕೆಲಸವೇ ಕರ್ತವ್ಯವೆಂದು ತಿಳಿದು ಕಾರ್ಯಮಾಡುತ್ತ ಹೋಗಿರಿ, ಕಾರ್ಯಮಾಡುವದರಿಂದ ಜಗತ್ತಿನಲ್ಲಿ ನಮ್ಮ ಬೆಲೆ ಹೆಚ್ಚುತ್ತದೆ. ಈ ಜಗತ್ತಿನಲ್ಲಿ ನೀವು ಯಶಸ್ವಿಯಾಗಬೇಕೆಂದು ಬಯಸುತಿದ್ದರೆ ನಿನ್ನನ್ನು ಮರೆ ಕಾರ್ಯಮಾಡು, ಎಂದೇ ನನ್ನ ಉತ್ತರ. ಲಕ್ಷಣ ಕಾಶೀನಾಥ ಕಿರ್ಲೋಸ್ಕರ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೦೭
ಗೋಚರ