2೫೭ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಮಹತ್ವದಪಾತ್ರವನ್ನು ವಹಿಸುತ್ತವೆಂದು ನಾನು ಯಾವಾಗಲೂ ಭಾವಿಸು ತೇನೆ. ಆಟಗಾರಿಕೆಯಲ್ಲಿಯ ಅದೇ ಉತ್ಸಾಹ, ಅದೇ ಸಾಂಘಿಕ ಪ್ರಯತ್ನ ಗಳನ್ನು, ಕಾರಖಾನೆಯ ಕಾರ್ಯದಲ್ಲಿಯೂ ನೀವು ತೋರುತ್ತಿರುವ ದೃಶ್ಯವನ್ನು ಈ ಹರಿಹರದಲ್ಲಿ ಕಂಡು ನಾನು ಉತ್ತೇಜಿತನಾಗಿದ್ದೇನೆ ಇಲ್ಲಿ ನಮ್ಮ ಕನಸು ನನಸಾಗಿದೆ. ನಾನು ೫೦ ವರ್ಷಗಳ ಹಿಂದೆ, ಬೆಳಗಾವಿಯಲ್ಲಿ ಅಲ್ಪ ಸಾಧನಗಳಿಂದ ಪ್ರಾರಂಭಿಸಿದ ಕಾರಖಾನೆಯ ನೆನಪು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಆಗ ನನ್ನ ಹತ್ತಿರ ಬಂಡವಲು ಇರದಿದ್ದರೂ ಉದಾತ್ತವಾದ ಧೈಯ ಹಾಗೂ ಅದರ ಬಗ್ಗೆ ದುಡಿಯಬೇಕೆಂಬ ಮಹತ್ವಾಕಾಂಕ್ಷೆ ಮಾತ್ರ ಇತ್ತು. ದೇವರು ಸ್ವಾವಲಂಬಿಗಳಿಗೆ ಸಹಾಯ ನೀಡಬಲ್ಲನೆಂಬ ವಿಶ್ವಾಸವಿತ್ತು. ಆ ವಿಶ್ವಾಸವೇ ಇಂದು ಈ ರೂಪಗೊಂಡಿದೆ, ಬೆಳಗಾವಿಯಲ್ಲಿಯ ಚಿಕ್ಕ ಕಾರಖಾನೆಯು ಇಂದು ಭವ್ಯ ಸ್ವರೂಪವನ್ನು ತಾಳಿ, ಕಿರ್ಲೋಸ್ತರವಾಡಿ, ಹರಿಹರ, ಪುಣೆ, ಬೆಂಗಳೂರ ಮತ್ತು ಲೋಣಾವಳಗಳಲ್ಲಿಯೂ ತನ್ನದೇ ಆದ ವಿವಿಧ ವಸ್ತುಗಳ ಉತ್ಪಾ. ದನೆಯ ಕಾರವನ್ನು ಮಾಡುತ್ತ ದೇಶದ ಅಭಿವೃದ್ಧಿಗೆ ಕಾರಣವಾಗಿದೆ. ಈ ಹರಿಹರ ಕಾರಖಾನೆಯ ಹುಟ್ಟು ಹೇಗಾಯಿತೆಂಬುದನ್ನು ನಿಮ್ಮಲ್ಲಿ ಅನೇಕರು ಬಲ್ಲಿರಿ. ಇದರ ಹುಟ್ಟು ಕಿರ್ಲೋಸ್ಕರವಾಡಿಯಲ್ಲಿಯೇ ಆಗಿದೆ. ಒಕ್ಕಲು ತನದ ನೂತನ ಉಪಕರಣಗಳ ಮೂಲಕ ಕಿರ್ಲೋಸ್ಕರವಾಡಿಯು ದೇಶದಲ್ಲೆಲ್ಲ ಚಿರಪರಿಚಿತವಾಗಿದೆ. ಒಕ್ಕಲಿಗರಿಗೆ ಸೇವೆಯನ್ನು ಸಲ್ಲಿಸುವಾಗ ಜನಾಂಗದ ಜೀವನದಲ್ಲಿ ಆಗುವ ಮಹತ್ವದ ಬದಲಾವಣೆಗಳನ್ನು ನಾವು ಎಚ್ಚರಿಕೆಯಿಂದ ನಿರೀಕ್ಷಿಸಿದ್ದೇವೆ, ನೂತನ ಔದ್ಯೋಗಿಕ ಬೆಳವಣಿಗೆಯ ಕಾಲದಲ್ಲಿ ಎಲ್ಲಿ ನೋಡಿ ದಲ್ಲಿ ನಮ್ಮ ಜನಾಂಗವು ತೋರುತ್ತಿರುವ ಯಂತ್ರತತ್ಪರತೆಯನ್ನು ನಾವು ಕಂಡುಕೊಂಡಿದ್ದೇವೆ. ಈ ವಿಚಾರವೇ ನಮ್ಮನ್ನು ಈ ಕಾರ್ಯಕ್ಕೆ ಪ್ರೇರಿಸಿದೆ. ಶೀಘ್ರದಲ್ಲಿಯೇ ದೇಶಕ್ಕೆ ಲೇಥ, ಡ್ರಿಲಿಂಗ ಮಶಿನ್, ಚಿಕ್ಕ ಇಂಜನಗಳು ಬೇಕಾ ಗುವವೆಂದೆನಿಸಿ ಆ ಸಂಶೋಧನೆಯಲ್ಲಿ ನಾವು ಮಗ್ನರಾದೆವು. ಯುರೋಪದಲ್ಲಿ ೨ನೇ ಮಹಾಯುದ್ಧವು ಪ್ರಾರಂಭವಾಯಿತಷ್ಟೆ ! ಆ ನಂತರ ಜಪಾನ, ಅಮೇರಿಕೆಗಳೂ ಅದರಲ್ಲಿ ಧುಮುಕಿದವು. ಈ ಪಾಶ್ಚಾತ್ಯ ರಾಷ್ಟ್ರಗಳಿಂದ ಬರುತ್ತಿದ್ದ ಯಂತ್ರ ಸಾಮಗ್ರಿಗಳ ಆಯಾತವು, ಯುದ್ದದ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೧೦
ಗೋಚರ