ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಗಳನ್ನು ಒದಗಿಸಿಕೊಟ್ಟು, ರಾಷ್ಟ್ರದ ಅಮೌಲ್ಯ ಸೇವೆಯನ್ನು ಈ ಕಾರ ಖಾನೆಯು ಸಲ್ಲಿಸಿದ್ದಕ್ಕಾಗಿ, ಸರಕಾರವು ಶ್ರೀ. ಜಾಂಬೇಕರರಿಗೆ ರಾವಬಹಾದೂರ ಪದವಿಯನ್ನಿತ್ತು ಸನ್ಮಾನಿಸಿದೆ. ಶಾಂತಿಕಾಲದಲ್ಲಿ ಒಕ್ಕಲಿಗರಿಗೆ ಉಪಯುಕ್ತ ಸಾಧನೆಗಳನ್ನೂ ಯುದ್ಧ ಕಾಲದಲ್ಲಿ ಯುದ್ಧೋಪಕರಣಗಳನ್ನೂ ಸಲ್ಲಿಸಿ ಕಿರ್ಲೋಸ್ಕರ ಸಂಸ್ಥೆಯು ರಾಷ್ಟ್ರದ ಗೌರವ ಹಾಗು ರಕ್ಷಣೆಯನ್ನು ಮಾಡಿ ಅದು ರಾಷ್ಟ್ರದ ಸ್ವತ್ತೆಂದು ಸಿದ್ದವಾಗಿದೆ. ಸಾಮಾನ್ಯವಾಗಿ ಪ್ರತಿಯೊಂದು ಕಾರಖಾನೆಯು ಒಳ್ಳೇ ಅಗತ್ಯದ ಸರಕುಗಳನ್ನು ನಿರ್ಮಿಸಿ, ಯೋಗ್ಯ ಬೆಲೆಗೆ ಮಾರುವ ದೃಷ್ಟಿಯನ್ನಿಟ್ಟು ಕೊಂಡಿ ಗುತ್ತದೆ, ನಮ್ಮ ಕಾರಖಾನೆಯು ಸಮಾಜದ ಪ್ರಗತಿಯ ಮುಖವಾಗುವಂತೆ ನಾವೂ ಯತ್ನಿಸುತ್ತಿದ್ದೇವೆ, ಕೂಲಿಕಾರರೇ ನಮ್ಮ ಚಟವಟಿಕೆಯ ಅಡಿಗಲ್ಲು, ಈ ದೃಷ್ಟಿಯಿಂದ ಅವರ ಹಿತಸಂಬಂಧಗಳನ್ನು ರಕ್ಷಿಸಿ, ಅವರ ಆರ್ಥಿಕ ಸುಧಾರಣೆ ಗೆಂದು ಬೋನಸ್ಸ ಹಂಚಲಾಗುವದು, ಅಸ್ಪಶ್ಯ ಕೆಲಸಗಾರರ ಏಳಿಗೆಗಾಗಿ ವಿಶೇಷ ದಕ್ಷತೆ ವಹಿಸಲಾಗಿದೆ. ಅದರಂತೆಯೇ ಚಿಕ್ಕ ಚಿಕ್ಕ ಉದ್ಯಮಗಳು ಬೆಳೆಯ ಬೇಕೆಂಬ ದೃಷ್ಟಿಯಿಂದ ಅವುಗಳಿಗೆ ಮಶಿನ್‌ಟೂಲ್ಸಿ ಹಾಗು ಇತರ ಸಲ. ಕರಣೆಗಳ ಸಹಾಯನೀಡುವ ಧೈಯವನ್ನು ಈ ಸಂಸ್ಥೆಯು ಇಟ್ಟು ಕೊಂಡಿದೆ. ದೊಡ್ಡ ಔದ್ಯಮಿಕ ಕೇಂದ್ರದಿಂದ ಚಿಕ್ಕ ಉದ್ದಿಮೆಗಳಿಗೆ ಸಹಾಯ ಸಹಕಾರ ಗಳು ದೊರಕುವದು ಅಗತ್ಯವೆಂದು ನನ್ನ ಸ್ಪಷ್ಟ ಅಭಿಪ್ರಾಯವಿದೆ. ಅದರಂತೆ, ಜನಾಂಗದಲ್ಲಿ ಪ್ರೀತಿ ವಿಶ್ವಾಸಗಳೂ ಐಕ್ಯತೆಯೂ ಬೆಳೆಯಬೇಕಾಗಿದೆ. ಶೈವ ವೈಷ್ಣವರ ಐಕ್ಯತೆಯ ಚಿನ್ನವಾಗಿ, ತುಂಗಭದ್ರೆಯ ಧಡದಲ್ಲಿ ಶ್ರೀ ಹರಿಹರೇಶ್ವರನು ಮೂರಿ ಮಂತಾಗಿ ನಿಂತಿದ್ದಾನೆ. ಇಂದು ನಮ್ಮ ಕಾರಖಾನೆಯು ಅದೇ ಸಂದೇಶವನ್ನು ಜನಾಂಗಕ್ಕೆ ಬೀರುತ್ತ ಇಲ್ಲಿಯೇ ನಿಂತಿದೆ. ಕರ್ನಾಟಕ ಮಹಾರಾಷ್ಟಗಳೆರಡೂ ಈ ಸಂಸ್ಥೆಯ ಮುಖಾಂತರ ನಾವೆಲ್ಲರೂ ಭಾರತೀಯರು ಎಂಬ ಸಂದೇಶವನ್ನು ಆಶಿಸುವಂತಾಗಿದೆ, ನಮ್ಮ ಪ್ರಗತಿಗೆ ಇವೆಲ್ಲವೂ ಕಾರಣ ಗಳಾಗಿವೆ. ಈ ಹರಿಹರ ಕಾರಖಾನೆಯು ನಿಜವಾಗಿಯೂ ಪ್ರಗತಿದಾಯಕವಾದ ಬಗ್ಗೆ ನನಗೆ ಅಭಿಮಾನವೆನಿಸುತ್ತದೆ. ಆದರೆ ಇಷ್ಟಕ್ಕೇ ತೃಪ್ತಿ ಹೊಂದಕೂಡದೆಂದು ನಾನು ಎಚ್ಚರಿಸಬಯಸುತ್ತೇನೆ. ಯಾವ ಕ್ಷಣವು ಪ್ರಗತಿಯಲ್ಲಿ ಮಂದವಾಗು ವದೋ ಅದೇ ಕ್ಷಣವು ಅವನತಿಯ ದಾರಿಯನ್ನು ಹಿಡಿಯುವದು, ಆದ್ದರಿಂದ