ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು 31೧ ಮಾಡುತ್ತಿರಬೇಕು, ಈ ಕಾರಖಾನೆಯು ನೂರಾರು ವರ್ಷಗಳವರೆಗೆ ಸತತ ವಾಗಿ ಅಭಿವೃದ್ಧಿ ಹೊಂದುತ್ತ ನಡೆಯಲೆಂದು ನಾನು ಹಾರೈಸುವೆ ನಡೆಯುವ ದೆಂಬ ವಿಶ್ವಾಸವೂ ನನಗೆ ಇದೆ. - ನಿನ್ನು ಸತತೋದ್ಯೋಗ, ಕುಶಲತೆ, ಹಾಗೂ ಉತ್ತಮ ದರ್ಜೆಯ ಮಶಿನ್ನುಗಳ ಉತ್ಪಾದನೆಯ ಕಾರ್ಯಕ್ಕೆ, ಪ್ರಗತಿಯ ದೃಷ್ಟಿಯಿಂದ ಅವಧಿಯ ಮಿತಿಯಿಲ್ಲ. ನಿಮಗಾಗಿ ಹೇಳಬೇಕೆಂದರೆ, ನಿಮ್ಮ ಬಯಕೆಗಳು ಸಂಸ್ಥೆಯ ಬಯಕೆಗಳೊಡನೆ ಒಂದುಗೂಡಿವೆ, ಎಂದಿಷ್ಟೇ ಹೇಳಬಯಸುತ್ತೇನೆ. ಅನೇಕರು ಈ ಮಾತನ್ನೇ ಮರೆತುಬಿಡುತ್ತಾರೆ, ನಮ್ಮ ಬೆಳವಣಿಗೆಯು ನಮಗೆ ಸಂಬಂಧಿ ಸಿದ ಸಂಸ್ಥೆಯ ಬೆಳವಣಿಗೆಯನ್ನೇ ಅವಲಂಬಿಸಿರುತ್ತದೆನ್ನುವ ಮಾತು ಸತ್ಯ ಸಂಗತಿಯಾಗಿದೆ, ನಾವು ನಮ್ಮ ಕಾರಖಾನೆಯ ಪ್ರಗತಿಯನ್ನು ಹೆಚ್ಚಿಸಲು ಪ್ರಯತ್ನಿಸಿದರೆ ಮಾತ್ರ, ಖಂಡಿತವಾಗಿಯೂ ನಮ್ಮ ಪ್ರಗತಿಯು ಆಗುತ್ತದೆ. ನನ್ನನ್ನು ಈ ಸಮಾರಂಭಕ್ಕೆ ಬರಮಾಡಿಕೊಂಡ ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನೀವೆಲ್ಲರೂ ಇಲ್ಲಿ ಸೇರಿದ್ದನ್ನು ನೋಡಿದಾಗ ನನ್ನ ಹೃದಯವು ಅಭಿಮಾನದಿಂದ ತುಂಬಿ ತುಳುಕುತ್ತದೆ. ಐದು ಕಾರಖಾನೆಯ ಸದಸ್ಯ ರುಗಳೆಲ್ಲ ಒಂದೇ ಮನೆತನದ ಮಕ್ಕಳಂತೆಯೇ ಇಲ್ಲಿ ಸೇರಿದ್ದೀರಿ, ಅಜ್ಜನಂತೆ ನಿಮ್ಮ ಬಗ್ಗೆ ನನಗೆ ಪ್ರೀತಿಯುಂಟಾಗಿದೆ, ದೇವರು ನಿಮಗೆ ಕಲ್ಯಾಣವನ್ನುಂಟು ಮಾಡಲಿ ಎಂದು ಹೃದಯತುಂಬಿ, ಅಂತಃಕರಣಪೂರ್ವಕವಾಗಿ ಆತನಲ್ಲಿ. ಪ್ರಾರ್ಥಿಸುತ್ತೇನೆ, “ದೇವರು ಸ್ವಾವಲಂಬನ ಮಾರ್ಗದಲ್ಲಿರುವವರಿಗೆ ಸಹಾಯ ಮಾಡುತ್ತಾನೆ” ಎಂಬುದನ್ನು ಮತ್ತೊಮ್ಮೆ ಹೇಳಬಯಸುತ್ತೇನೆ, ಹೆಚ್ಚಿನ ಶ್ರೇಯಸ್ಸು ನಿಮಗೆ ಸಿಗುವಂತೆಯೂ ವಿಶ್ವಾಸ-ಉತ್ಸಾಹಗಳೂ ಬೆಳೆಯು ವಂತೆಯೂ ಇಂದಿನ ಐತಿಹಾಸಿಕ ಸಮಾರಂಭವಾಗಲೆಂದು ಹಾರೈಸುವೆ. ನಿಮ್ಮೆಲ್ಲರಿಗೂ ಒಳ್ಳೆಯದಾದ ದಿನಗಳನ್ನು ನಾನು ನೋಡಬಯಸುತ್ತೇನೆ. ಕಾರ್ಯೊನ್ಮುಖರಾಗಿರಿ, ಮತ್ತು ಅದನ್ನು ಸಾಧಿಸಿರಿ. -: ಜೈ ಹಿಂದ :-
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೧೪
ಗೋಚರ