ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರ್ಲೋಸ್ಕರ ಇಲೆ ಕ್ಲಿಕ್‌ ಕಂಪನಿ ಲಿ., ಬೆಂಗಳೂರ ಭಾರತದಲ್ಲಿ ಕೈಗಾರಿಕೆಯ ಉದ್ಯಮಗಳ ಬೆಳವಣಿಗೆಯು ಕಳೆದ ಹದಿನೈದು ವರ್ಷಗಳಲ್ಲಿ ಅದ್ಭುತವಾಗಿ ಬೆಳೆದಿದೆ. ೨ನೆಯ ಮಹಾಯುದ್ಧದ ಕಾಲದಲ್ಲಿ ಆಯಾತ ವ್ಯಾಪಾರಕ್ಕೆ ತೊಂದರೆಯಾಗಿ, ಅನೇಕ ಕಾರಖಾನೆಗಳು ದೇಶೀಯ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದವು, ಅಂತಹ ಹೊಸ ಪ್ರಯತ್ನಗಳಲ್ಲಿ ವಿದ್ಯುತ್ ಮೋಟಾರುಗಳನ್ನು ತಯಾರಿಸುವ ಪ್ರಯತ್ನವನ್ನು ಕಿರ್ಲೋಸ್ಕರ ಬಂಧುಗಳು ಮಾಡಿದರು. ಯುದ್ಧಾನಂತರ ಬ್ರಿಟನ್ನಿನ ಅನೇಕ ಕಾರಖಾನೆದಾರರು ಭಾರತದಲ್ಲಿಯೇ ಈ ವಸ್ತುಗಳನ್ನು ತಯಾರಿಸಲು, ಸೂಕ್ತ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸಿದರು, ಈ ಪ್ರಯತ್ನದ ಫಲವಾಗಿ ಬ್ರಿಟನ್ನಿನ ಬ್ರಷ್ ಇಲೆಕ್ಟಿಕ್ ಇಂಜನಿಯರಿಂಗ ಕಂಪನಿಗೂ ಕಿರ್ಲೋಸ್ಕರ ಸಂಸ್ಥೆಗೂ ೧೯೪೬ನೆಯ ಜುಲೈ ೨೬ರಲ್ಲಿ ಒಂದು ಒಪ್ಪಂದವಾಯಿತು. ಈ ಒಪ್ಪಂದದ ಪ್ರಕಾರ ಬೆಂಗಳೂರಿನಲ್ಲಿ ಮೋಟಾರುಗಳೂ ಟ್ರಾನ್ಸ್ಫಾರ್ಮರು ಗಳೂ ಆಲ್ಟರನೇಟರುಗಳೂ ಇತ್ಯಾದಿಯಾಗಿ ವಿದ್ಯುದುಪಕರಣಗಳನ್ನು ನಿರ್ಮಿ ಸುವ ಹೊಸ ಕಾರಖಾನೆಯೊಂದು ಸ್ಥಾಪಿತವಾಯಿತು. ಪೂಜ್ಯ ಲಕ್ಷ್ಮಣರಾವ ಕಿರ್ಲೋಸ್ಕರರು ದಿನಾಂಕ ಡಿಸೆಂಬರ ೧೯೪೭ರಲ್ಲಿ ಹೊಸ ಕಾರಖಾನೆಯ ಅಸ್ತಿಭಾರವನ್ನು ಹಾಕಿದರು. ಮೈ ಸೂರು ಸರ್ಕಾರದಿಂದ ಕೊಡಲ್ಪಟ್ಟ ೨೦ ಎಕರೆಯ ಜಮೀನಿನಲ್ಲಿ ಕೇವಲ ಎಂಟು ತಿಂಗಳಲ್ಲಿ ಈ ಹೊಸ ಕಾರಖಾನೆಯು ಕೆಲಸ ಮಾಡಲು ಪ್ರಾರಂಭಿಸಿತು, ಸಾಂಪ್ರದಾಯಿಕ ಪ್ರಾರಂಭೋತ್ಸವವು ದಿ. ೩-೭-೧೯೪೯ ರಂದು ಅಂದಿನ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್‌ರವರ ಹಸ್ತದಿಂದ ನೆರವೇರಿತು. ಇದರ ಸುಮಾರು ಹನ್ನೆರಡು ವರ್ಷಗಳ ಪ್ರಗತಿಯನ್ನು ಸೂಕ್ಷ್ಮ ವಾಗಿ ಕೆಳಗೆ ವಿವರಿಸಿದೆ. ವಿದ್ಯುತ್ ಮೋಟಾರುಗಳು:- ಈ ಯಂತ್ರಯುಗದಲ್ಲಿ ಯಾವುದೊಂದು ಶಕ್ತಿಗೂ ವಿದ್ಯುಚ್ಛಕ್ತಿಯೇ ಮೂಲವಾಗಿದೆ, ವಿದ್ಯುತ್ತನ್ನು ಶಕ್ತಿಯಾಗಿ ಪರಿವರ್ತಿಸಿ ಪ್ರಯೋಜನ ಪಡೆಯಲು ಮೋಟಾರುಗಳು ಬೇಕು. ಇದೊಂದು