ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು 314 ಆವಶ್ಯಕ ಯಂತ್ರ, ಬೆಂಗಳೂರು ಕಾರಖಾನೆಯಲ್ಲಿ ೧೯೪೮ ರಿಂದ ೧೯೬೦ ರ ವರೆಗೆ ೧೦,೫೦,೦೦೦ ಅಶ್ವಶಕ್ತಿಯ ೧,೨೬,೦೦೦ ಮೋಟಾರುಗಳು ತಯಾರಾಗಿವೆ. ಮೂರನೆಯ ಪಂಚವಾರ್ಷಿಕ ಯೋಜನೆಯಲ್ಲಿ ವರ್ಷಕ್ಕೆ ೪೦೦೦೦೦ ಅಶ್ವಶಕ್ತಿಯ ಮೋಟಾರುಗಳನ್ನು ತಯಾರಿಸಲು ಯೋಜಿಸಲಾಗಿದೆ. ಈ ತಯಾರಿಕೆಯಲ್ಲಿ ೯ ಅಶ್ವಶಕ್ತಿಯಿಂದ ೫೦೦ ಅಶ್ವಶಕ್ತಿಯ ವರೆಗೆ ಎಲ್ಲ ವಿಧದ ಮೋಟಾರುಗಳನ್ನೂ ಮಾಡಲು ಏರ್ಪಾಡಾಗಿದೆ. ಭಾರತದ ಎಲ್ಲ ಕಾರಖಾನೆಗಳ ತಯಾರಿಕೆಯ ಸುಮಾರು { ಭಾಗದಷ್ಟು ಬೆಂಗಳೂರಿನ ಕಿರ್ಲೊಸ್ಕರ ಕಾರ ಖಾನೆಯಲ್ಲಿ ತಯಾರಾಗುತ್ತಿದೆ. ಟ್ರಾನ್ಸ್ ಫಾರಗಳು:- ವಿದ್ಯುತ್ತಿನ ಸರಬರಾಜಿನ ವ್ಯವಸ್ಥೆಯಲ್ಲಿ ಮುಖ್ಯವಾಗಿ ಬೇಕಾದ ಮತ್ತೊಂದು ಯಂತ್ರವೆಂದರೆ ಟ್ರಾನ್ಸ್‌ಫಾರರ್. ವಿದ್ಯುತ್ತಿನ ಒತ್ತಡವನ್ನು ಹೆಚ್ಚು ಕಡಿಮೆಮಾಡಿ ಪ್ರವಾಹಕ್ಕೆ ಅನುಕೂಲವಾದ ಒತ್ತಡವನ್ನು ಹೊಂದಲು ವಿವಿಧ ಶಕ್ತಿಯ ಟ್ರಾನ್ಸ್ಫಾರ್ಮರುಗಳನ್ನು ಉಪಯೋಗಿಸಲಾಗುತ್ತದೆ, ವಿದ್ಯುತ್ತಿನ ಉಪಯೋಗ ಹೆಚ್ಚಾದಂತೆ ಟ್ರಾನ್ಸ್ ಫಾರರು ಗಳ ಬಳಿಕೆಯೂ ಹೆಚ್ಚುತ್ತಿದೆ. ೧೯೫೪ ರಲ್ಲಿ ಈ ತಯಾರಿಕೆಯು ಬೆಂಗಳೂರು ಕಿರ್ಲೋಸ್ಕರ ಕಾರಖಾನೆಯಲ್ಲಿ ಪ್ರಾರಂಭವಾಗಿ ೧೯೫೮ ರ ಹೊತ್ತಿಗೆ ವರ್ಷಕ್ಕೆ ೨,೦೦೦೦೦ ಕೆ. ವಿ. ಎ. ಅಷ್ಟು ಟ್ರಾನ್ಸ್ಫಾರ್ಮರುಗಳು ಸಿದ್ಧವಾದವು. ೫ ಕೆ. ವಿ. ಎ. ಯಿಂದ ೫೦೦೦ ಕೆ. ವಿ. ಎ. ವರೆಗೆ, ೨೨ ಕೆ. ವಿ. ಎ. ಒತ್ತಡದ ಟ್ರಾನ್ಸ್ಫಾರ್ಮರುಗಳನ್ನು ತಯಾರಿಸಲು ಎಲ್ಲ ಅನುಕೂಲತೆಗಳೂ ಈ ಕಾರಖಾನೆಯಲ್ಲಿವೆ. ಭಾರತ ದೇಶದ ನಾನಾ ಪ್ರಾಂತ್ಯ ಎಲಿಸ್ಟಿಸಿಟಿ ಬೋರ್ಡು ಗಳು ಈ ಕಾರಖಾನೆಯ ತಯಾರಿಕೆಗೆ ವಿಶೇಷ ಮನ್ನಣೆಯಿತ್ತು, ಕಿರ್ಲೋಸ್ಕರ ಟ್ರಾನ್ಸ್ಫಾತ್ಮರುಗಳನ್ನು ಬಳಸುತ್ತಿದ್ದಾರೆ. ಆಲ್ವರ್ ನೇಟರುಗಳು (Alternators):- ದೇಶದಲ್ಲಿ ದೊಡ್ಡ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರಗಳು ಹೆಚ್ಚಿದಷ್ಟೂ ಜನಕ್ಕೆ ವಿದ್ಯುತ್ತಿನ ಬಳಿಕೆಯ ಬಗ್ಗೆ ಅನುಭವ ಹೆಚ್ಚುತ್ತಲಿದೆ, ದೊಡ್ಡ ಪಟ್ಟಣಗಳು ಕೈಗಾರಿಕೆಯ ಕೇಂದ್ರಗಳು ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ತನ್ನು ಬಳಸಬಹುದು. ಆದರೆ ನಮ್ಮ ನಾಡಿನ ಹಳ್ಳಿಹಳ್ಳಿಗೂ ವಿದ್ಯುತ್ ಬೇಕಾದರೆ, ಯಾವ ರೀತಿಯ ಸರಬರಾಜು ಮಾಡುವುದು ? ಅನೇಕ ತಾಂತ್ರಿಕ ಕಾರಣಗಳಿಂದ ನಮ್ಮ ದೇಶದಲ್ಲಿ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೧೬
ಗೋಚರ