ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨le ಮಿಂಚಿನಬಳ್ಳಿ ಸಣ್ಣ ಉತ್ಪಾದನಾ ಕೇಂದ್ರಗಳೂ ಬೇಕಾಗುತ್ತವೆ. ಈ ಉತ್ಪಾದನಾ ಕೇಂದ್ರಗಳಿಗೆ ಅನುಕೂಲವಾದ ಜನರೇಟರುಗಳನ್ನು ಬೆಂಗಳೂರು ಕಾರಖಾನೆಯಲ್ಲಿ ತಯಾ ರಿಸಲಾಗುತ್ತಿದೆ. ೩ ಕೆ. ವಿ. ಎ. ಶಕ್ತಿಯಿಂದ ಹಿಡಿದು ಸುಮಾರು ೨೫೦ ಕೆ. ವಿ ಎ. ಶಕ್ತಿಯ ವರೆಗಿನ ಯಂತ್ರಗಳ ತಯಾರಿಕೆ ಸಾಗುತ್ತದೆ. ಈ ಎಲ್ಲ ಯಂತ್ರಗಳ ಉತ್ಪಾದನೆಗೆ ಬೇಕಾದ ತಾಂತ್ರಿಕ, ಆರ್ಥಿಕ ಮತ್ತು ಮಾನವ ಸಂಪತ್ತು ಬೆಂಗಳೂರ ಕಾರಖಾನೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಬೆಳೆದು ಬಂದಿದೆ. ದೇಶೀಯ ಇಂಜಿನಿಯರ್‌ಗಳೂ ಕಾರ್ಮಿ ಕರೂ ಯಾವ ಕಾರ್ಯವನ್ನಾದರೂ ಸಾಧಿಸಬಲ್ಲರು, ಎಂಬುದಕ್ಕೆ ಬೆಂಗಳೂರು ಕಾರಖಾನೆಯು ಒಂದು ನಿದರ್ಶನ, ಸುಮಾರು ಒಂದು ಸಾವಿರ ಕೆಲಸಗಾರರು ತಿಂಗಳಿಗೆ ಇಪ್ಪತ್ತು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಿದ್ಯುತ್‌ ಸಾಮಾನು ಗಳನ್ನು ತಯಾರಿಸುತ್ತಿದ್ದಾರೆ. ಕಾರಖಾನೆಯಲ್ಲಿ ಒಂದು ಪ್ರತ್ಯೇಕ ಇಂಜನಿಯರಿಂಗ್ ಮತ್ತು ಡೆವಲಪ್ಮೆಂಟ್ ವಿಭಾಗವೂ ಪರಿಶೋಧನಾ ವಿಭಾಗವೂ ಇದೆ, ಈ ಎರಡೂ ವಿಭಾಗಗಳಲ್ಲಿ ನುರಿತ ಯಂತ್ರತಜ್ಞರು ಇಂದಿನ ಸಾಮಾನುಗಳ ಗುಣಗಳನ್ನು ಇನ್ನೂ ಹೆಚ್ಚು ಉತ್ತಮಪಡಿಸಲೂ ಹೊಸ ಸಾಮಾನುಗಳ ತಯಾರಿಕೆಗೆ. ಹೊಸ ಡಿಸೈನುಗಳನ್ನು ತಯಾರು ಮಾಡುತ್ತಲೂ ಹೊಸ ಸಾಮಾನುಗಳ ಗುಣ ವಿಶೇಷಗಳನ್ನು ಪರಿಶೀಲಿಸಿ ಅದನ್ನು ಕಾರಖಾನೆಯಲ್ಲಿ ಉಪಯೋಗಿ ಸಲೂ ಆಮದು ಪದಾರ್ಥಗಳ ಬದಲು ದೇಶೀಯ ಕಚ್ಚಾಮಾಲುಗಳನ್ನು ಉಪಯೋಗಿಸುವುದರಲ್ಲಿಯೂ ಉಪಯುಕ್ತ ಪರಿಶೋಧನೆ ನಡೆಸುತ್ತಿದ್ದಾರೆ. ಕಾರ್ಮಿಕರ ಯೋಗಕ್ಷೇಮವೂ ಬೆಂಗಳೂರು ಕಾರಖಾನೆಯಲ್ಲಿ ವಿಶೇಷ ಗಮನ ಪಡೆದಿದೆ. ಅತ್ಯುತ್ತಮ ಕ್ಯಾಂಟೀನ್, ವೈದ್ಯಕೀಯ ಸಹಾಯ ವಿಹಾರ ಮತ್ತು ಆಟ-ಪಾಟಗಳ ಕೂಟುಗಳು, ಇತ್ಯಾದಿ ಅನೇಕ ಸೌಲಭ್ಯ ಗಳಿವೆ. ಬೆಂಗಳೂರು ಕಾರಖಾನೆಯಲ್ಲಿ ಒಬ್ಬ ಕಾರ್ಮಿಕನ ಸರಾಸರಿ ತಿಂಗಳ ಸಂಬಳ ಸುಮಾರು ಇನ್ನೂರು ರೂಪಾಯಿಗಳಾಗುತ್ತದೆ, ನೌಕರರ ಉತ್ಪಾದನಾ ಶಕ್ತಿಯನ್ನನುಸರಿಸಿ ಅವರಿಗೆ ಬೋನಸ್ ಕೊಡಲಾಗುತ್ತದೆ. ಹದಿನಾಲ್ಕು ವರ್ಷಗಳ ಹಿಂದೆ ಶ್ರೀ. ಕಿರ್ಲೋಸ್ಕರ ಲಕ್ಷಣರಾಯರವರ ಆಶೀರ್ವಾದ ದಿಂದ ಕೇವಲ ೨೫ ಲಕ್ಷ ಬಂಡವಾಳದಿಂದ ಪ್ರಾರಂಭವಾದ ಈ ಸಂಸ್ಥೆಯು ಇಂದ