ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮ ಖಂಚಿನಬಳ್ಳಿ ಗಳಲ್ಲಿ ಮಧ್ಯ ಪ್ರಾಚ್ಯ, ಮತ್ತು ದೂರ ಪ್ರಾಚ್ಯ ದೇಶಗಳಿಗೆ ಇಂಜಿನ್ನುಗಳನ್ನು ನಿರ್ಯಾತ ಮಾಡಲಾಯಿತು, ಮತ್ತು ಕಳೆದ ಕೆಲವು ವರ್ಷಗಳಿಂದ ನ್ಯೂಝಲಂಡ, ಆಸ್ಟ್ರೇಲಿಯಾ ಹಾಗೂ ಲ್ಯಾಬಿನ್ ಅಮೇರಿಕೆಗೂ ಇಂಜಿನ್ನು ಗಳನ್ನು ರಷ್ಯ ಮಾಡಲಾಗಿದೆ. ಒಂದು ಅಭಿವೃದ್ದಿಯ ಯೋಜನೆಯನ್ನು ತಯಾರಿಸಿ, ಮೊದಲಿನಕ್ಕಿಂತ ಒಂದೂವರಿಪಟ್ಟು ದೊಡ್ಡದಾದ ಕಾರಖಾನೆಯ ಕಟ್ಟಡವನ್ನು ಕಟ್ಟಲಾಯಿತು. ಭವಿಷ್ಯಕಾಲದಲ್ಲಿ ಪ್ರಸಿದ್ದವಾದ M. A, N. ಇಂಜಿನ್ನುಗಳನ್ನು ತಯಾರಿಸ ಲಾಗುವದು, ೧೦೦ ರಿಂದ ೧೦೦೦ ಅಶ್ವಶಕ್ತಿಯ ಈ ಇಂಜಿನ್ನುಗಳು ಭಾರತದಲ್ಲಿಯೇ ತಯಾರಾದ ಇಂಜಿನ್ನುಗಳಲ್ಲಿ ಅತಿ ದೊಡ್ಡವು. ಇದಲ್ಲದೆ ಮುಖ್ಯವಾಗಿ ಒಕ್ಕಲುತನಕ್ಕೆ ಉಪಯೋಗವಾಗಲಿರುವವು ೩ ಅಶ್ವಶಕ್ತಿ ಯುಳ್ಳ ಒಂದು ಚಿಕ್ಕ ಇಂಜಿನ್ನನ್ನು ತಣ್ಣಗಾಗುವ (Air-Cooled) AVA-1 ಪ್ರಕಾರದ ಇಂಜಿನ್ನುಗಳನ್ನು ತಯಾರಿಸುವ ಯೋಜನೆ ಇದೆ. ಈ ರೀತಿ ವೃರ್ಟಿಕಲ್ ಇಂಜಿನ್ನುಗಳನ್ನು ತಯಾರಿಸುವ ಕಂಪನಿಯ ಸಾಹಸದ ಹಾಗೂ ಧೈರ್ಯದ ಧೋರಣೆಯು ಅನೇಕ ವಿರೋಧಗಳನ್ನೆದುರಿಸಿ ಭಾರತವನ್ನು , ಡಿಜೆಲ್ ಇಂಜಿನ್ನುಗಳನ್ನು ನಿರ್ಯಾತ ಮಾಡುವ ದೇಶವ ಸ್ನಾಗಿ ಮಾಡುವದರಲ್ಲಿ ಅತ್ಯಂತ ಯಶಸ್ವಿಯಾಯಿತು, ಈ ಸಾಧನೆಯಿಂದ ಕಂಪನಿಯು, ಮೂಲಶೋಧಕರೆಂಬ ಸಮೂಹದ ಕೀರ್ತಿಗೆ ತನ್ನ ಅಳಿಲು ಸೇವೆಯನ್ನು ಸಲ್ಲಿಸಿದೆ.