ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

واد ಮಿಂಚಿನಬಳ್ಳಿ ದಿಂದ ೨೨ ಲಕ್ಷ ರೂ. ಗಳು ಬಂದವು, ಮತ್ತು ಎರಡನೇವರ್ಷ ಅಂದರೆ ಈ ವರ್ಷ ಮೊದಲಿನ ಹತ್ತು ತಿಂಗಳಲ್ಲಿಯೇ ಕಂಪನಿಯು ಒಂದು ಕೋಟಿ ರೂಪಾಯಿಯ ಗುರಿಯನ್ನು ಮುಟ್ಟಿದೆ, ಮತ್ತು ಒಟ್ಟು ಮಾರಾಟವು ೧-೨೫ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗುವದೆಂದು ನಿರೀಕ್ಷಿಸಲಾಗಿದೆ. “ ಕಿರ್ಲೋಸ್ಕರ-ಬೂಮವಾಡ ” ದಿಂದ ಉತ್ಪಾದಿಸಲಾಗುವ ವಸ್ತುಗಳ ಮಾರಾಟವನ್ನು ಹಂಚಿಕೆದಾರರಾದ ಮೆಸರ್ಸ ವೋಲ್ವಾಸ ಲಿಮಿಟೆಡ್ ಇವರೇ ನೋಡಿಕೊಳ್ಳುತ್ತಾರೆ. ೩, ಕೆಲಸಗಾರರ ಸಂಖ್ಯಾಬಲ:--- ಕಂಪನಿಯಲ್ಲಿ ೫೦೦ ಕ್ಕೂ ಮೇಲ್ಪಟ್ಟು ಕೆಲಸಗಾರರಿದ್ದಾರೆ. - ೪, ನಿರ್ಯಾತ (Export):- ಕಂಪನಿಯ ಸರಕುಗಳಿಗೆ ನೆರೆ ರಾಷ್ಟ್ರಗಳಲ್ಲಿರುವ ಬೇಡಿಕೆಗಳನ್ನು ಅನುಲಕ್ಷಿಸಿ ಆಯಾ ದೇಶಗಳಿಗೆ ಸರಕುಗಳನ್ನು ನಿರ್ಯಾತ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ೯ , ಬೆಳವಣಿಗೆ (Expansion):- ಮೇಲೆ ಹೇಳಿದಂತೆ ಅನೇಕ ವರ್ಗಗಳ ರೆಸಿಪೋಕೇಟಿಂಗ ಕಾಂಪ್ರೆಸರುಗಳನ್ನು ಉತ್ಪಾದಿಸುವದಲ್ಲದೆ ಕಂಪನಿಯು ಬ್ರೆಕರ್ ( Breakers ), ಡ್ರಿಲ್‌ಲೆಗ್ನ (Drill, legs ), ಗೋಂಡರ್ಸ (Grinders), ಮೊದಲಾದ ವಾಯುವಿಜ್ಞಾನದ ಸರಕುಗಳ ಮತ್ತು ರೋಟರಿ ವೈ ಬ್ರೆಟರ (Rotary Vibrator), ಸಂಪ ಪಂಪುಗಳ (Sump Pumps) ತಯಾರಿಕೆಯನ್ನು ಕೈಕೊಳ್ಳಲಿರುವದು, ಇವುಗಳ ತಯಾರಿಕೆಗೆ ಬೇಕಾಗುವ ಪರವಾನಿಗೆಯನ್ನು ಸರಕಾರದಿಂದ ಈಗಾಗಲೇ ಪಡೆದುಕೊಳ್ಳಲಾಗಿದೆ. ಒಂದು ಪ್ರಸಿದ್ದಿ ಪರದೇಶಿ ಕಂಪನಿಯೊಡನೆ, ಭಾರತದಲ್ಲಿ ಅವರ ಪರವಾನಿಗೆಯಿಂದ ೧ು ಅಶ್ವಶಕ್ತಿಯುಳ್ಳ ಏಅರ ಕಂಡಿಶನಿಂಗ ಯುನಿಟ್ಟುಗಳನ್ನು ತಯಾರಿಸಲು ಮಾತುಕತೆ ನಡೆದಿದ್ದು ಅದು ಕೊನೆಯ ಘಟ್ಟದಲ್ಲಿದೆ. ಇದಲ್ಲದೆ ಮತ್ತೊಂದು ಯುರೋಪಿಯನ ಕಂಪನಿಯೊಡನೆ ಭಾರತದಲ್ಲಿ ರೆಫ್ರಿಜಿರೇಟಂಗ ಕಾಂಪ್ರೆಸರಗಳನ್ನು ಉತ್ಪಾದಿಸಲು ಪರವಾನಿಗೆಯ ಮಾತುಕತೆಗಳ ಬಗ್ಗೆ. ಚರ್ಚೆ ನಡೆದಿರುತ್ತದೆ.