ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
"ಎಕ್ಕಲಗಾಣ"-? / ೧೦೯

'ಬೀಣೆಯ ಸರಂ ಬಿಡದಿಲ್ಲಿ' ಎಂಬ ವಾಕ್ಯಕ್ಕೆ ಪಂಡಿತ ತಿಮ್ಮಪ್ಪಯ್ಯನವರು, 'ವೀಣಾ ನಾದವು ಇಲ್ಲಿ ಎಡೆಗೊಳ್ಳದು' ಎಂದೂ ಅರ್ಥ ಕಟ್ಟಿದ್ದಾರೆ. ಈ ಅರ್ಥಗಳಾದರೂ ಹೇಗೆ ಸಮಂಜಸವೋ ನನಗರಿಯದು. ಸುಸಂಬದ್ಧವಲ್ಲದ ಯಾವುದೋ ಒಂದು ಬಗೆಯ ಹಾಡುಗಾರಿಕೆಯ ವರ್ಣನೆಯಿದು ಎಂಬ ಪೂರ್ವ ನಿಶ್ಚಿತವಾದ ಅಭಿಪ್ರಾಯವೇ ಇಂತಹ ಅರ್ಥಭ್ರಾಂತಿಯನ್ನು ಹುಟ್ಟಿಸಿರಬೇಕಲ್ಲದೆ ಬೇರೆ ಕಾರಣ ತೋರುವುದಿಲ್ಲ. 'ಸರಂ ಬಿಡದು' ಎಂಬ ಮಾತಿಗೆ, ಅವು ವ್ಯಸ್ತಪದಗಳೆಂದು ಗ್ರಹಿಸಿದರೆ (ಪಂಡಿತರು ಹಾಗೆಯೇ ಗ್ರಹಿಸಿದ್ದಾರೆಂಬುದು ಸುವ್ಯಕ್ತ.) 'ಸ್ವರವು ಬಿಡದು' ಎಂಬುದೇ ಅರ್ಥವಷ್ಟೆ. ಹಾಗಾದರೆ 'ಇಲ್ಲಿ ವೀಣೆಯ ಸ್ವರವು ಹೊರಡುವುದಿಲ್ಲ' ಎಂದಿಷ್ಟೇ ಅರ್ಥ. 'ಸರಂಬಿಡದು' ಎಂಬುದನ್ನು ಕ್ರಿಯಾ ಸಮಾಸವೆಂದು ಗ್ರಹಿಸಿದರೆ, 'ವೀಣೆಯ ಸ್ವರವನ್ನು ಬಿಡುವುದಿಲ್ಲ' ಎಂಬರ್ಥವಾಗುವುದು. ಎರಡರೊಳಗೆ ಒಂದಲ್ಲದೆ ಯಾವ ಮೂರನೆಯ ಅರ್ಥವೂ ಈ ವಾಕ್ಯಕ್ಕೆ ಹೊಂದಲಾರದು. ಎಕ್ಕಲಗಾಣನ ಹಾಡುಗಾರಿಕೆಗೆ ಯಾವ 'ವಾದ್ಯದ ಸಹಾಯವೂ ಇಲ್ಲವಾದುದರಿಂದ, ಮೊದಲನೆಯ ಅರ್ಥವೇ ಸಂದರ್ಭೋಚಿತವಾಗಿದೆ; ವ್ಯಾಕರಣ ದೃಷ್ಟಿಯಿಂದಲೂ ಅದೇ ಉಚಿತತರ. ಸಾಧಾರಣವಾಗಿ ಹಾಡುಗಾರರು ಅವಲಂಬಿಸುತ್ತಿದ್ದ ವಾದ್ಯಗಳೊಳಗೆ ಒಂದೂ ಇಲ್ಲಿ ಇಲ್ಲ ಎಂದು ಹೇಳುವುದೇ ಕವಿಯ ಉದ್ದೇಶ. ಈ ಮೊದಲು ಈ ಲೇಖನದಲ್ಲಿ ಉದಾಹರಿಸಿದ, “ವಂಶವೀಣಾ ಶರೀರಾಣಾಂ ಏಕೀಭಾವೇನ ಯೋ ಧ್ವನಿಃ | ತತ್ರ ರಕ್ತಿ ವಿಶೇಷಸ್ಯ ಪ್ರಮಾಣಂ...” ಎಂಬ ವಾಕ್ಯವನ್ನು ಇಲ್ಲಿ ಸ್ಮರಿಸಿ ಕೊಳ್ಳಬಹುದು. ಹೀಗೆ ಯಾವುದಾದರೊಂದು ವಾದ್ಯ ಸಹಾಯವಿಲ್ಲದೆಯೂ ರಂಜಿಸ ಬಲ್ಲವನಾದುದರಿಂದಲೇ ಕವಿ ಅವನನ್ನು 'ಇಂಪಾಣ'ನೆಂದು ಕರೆದಿದ್ದಾನೆ: ಹೊರತು ಶ್ರೀ ಕಾರಂತರು ಭಾವಿಸಿದಂತೆ ಅವನನ್ನು ಕುಚೋದ್ಯ ಮಾಡಲಿಕ್ಕಾಗಿ ಅಲ್ಲ. ಇನ್ನು ಎರಡನೆಯ ಅರ್ಥವನ್ನು ಅವಲಂಬಿಸಿದರೂ, 'ವೀಣೆಯ ಸ್ವರವನ್ನು ಬಿಡುವುದಿಲ್ಲ ಎಂದರೆ, ವಾದ್ಯ ಸಹಾಯವಿಲ್ಲದೆ ಹಾಡುವುದಾದರೂ, ವೀಣೆಯ ಸ್ವರಕ್ಕೆ ಸಮನಾಗಿ ಶುದ್ಧವಾಗಿದೆ' -ಎಂಬ ತಾತ್ಪರ್ಯವೇ ಹೊರಡುತ್ತದೆ. ನಮ್ಮ ಸಂಗೀತಶಾಸ್ತ್ರ ಸಂಪ್ರ ದಾಯದಂತೆ, ಸ್ವರ ಶುದ್ಧಿಗೆ ವೀಣೆಯೇ ಪ್ರಮಾಣವೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

'ತಾಳಮನಿತ್ತು ಸಮ್ಮನಿಸದು' ಎಂಬಲ್ಲಿರುವ 'ಸಮ್ಮನಿಸದು' ಎಂಬ ಪದಕ್ಕೆ ಪಂಡಿತ ತಿಮ್ಮಪ್ಪಯ್ಯನವರು 'ಸರಿಗೊಳ್ಳದು' ಎಂದೂ ಶ್ರೀ ಕಾರಂತರು 'ಸಮಗೊಳ್ಳದು' ಎಂದೂ ಅರ್ಥಮಾಡಿದ್ದಾರೆ. ಇದಕ್ಕೂ ಹಿಂದೆ ಸೂಚಿಸಿದಂತೆ ಪೂರ್ವಗ್ರಹವೇ ಕಾರಣವೆನ್ನ ಬೇಕಾಗುತ್ತದೆ. ನಿಘಂಟುಗಳಲ್ಲಿ 'ಸಮ್ಮನಿಸು' ಎಂಬುದಕ್ಕೆ ಆ ಅರ್ಥವೇ ಇಲ್ಲ! ಕಿಟ್ಟೆಲರ ಕೋಶದಲ್ಲಿ ಆ ಶಬ್ದಕ್ಕೆ ಕೊಟ್ಟ ಹಲವು ಅರ್ಥಗಳಲ್ಲಿ, ಈ ಸಂದರ್ಭಕ್ಕೆ ಉಚಿತವಾಗಿ ಅನ್ವಯಿಸುವ ಅರ್ಥ- to occur to one's mind- 'ಮನಸ್ಸಿಗೆ ಗೋಚರಿಸು' ಎಂಬುದಾಗಿದೆ. 'ತಾಳಮನಿತ್ತು ಸಮ್ಮನಿಸದು' ಎಂಬ ಪದ್ಯ ವಾಕ್ಯಕ್ಕೆ 'ಅನಿತ್ತು ತಾಳಂ ಸಮ್ಮನಿಸದು' ಎಂಬುದು ಸಹಜವಾದ ಗದ್ಯರೂಪ. 'ಅಷ್ಟೂ ತಾಳಗಳು (ಎಂದರೆ, ಇರುವ ತಾಳಗಳಲ್ಲಿ ಯಾವುದೊಂದೂ) ಇಲ್ಲಿ ಗೋಚರವಾಗುವುದಿಲ್ಲ ಎಂಬುದು ಆ ವಾಕ್ಯದ ಸರಳವಾದ ಅರ್ಥ. ತಾಳವು ಗೋಚರವಾಗದಿರುವುದಕ್ಕೆ ಎಕ್ಕಲಗಾಣನ ತಾಳ ಜ್ಞಾನಹೀನತೆ ಕಾರಣವಲ್ಲ, ಅವನು ಅಲ್ಲಿ ಮಾಡಿದ್ದು, ಗೀತವನ್ನು ಹಾಡುವುದಕ್ಕಿಂತ ಮೊದಲು ನಮ್ಮ ಸಂಗೀತಗಾರರು ಮಾಡತಕ್ಕ ..ರಾಗವಿಸ್ತಾರ ತಾಳಬದ್ಧವಲ್ಲದ ರಾಗಾಲಪ್ತಿ.

ಅಗ್ಗಳನ ಆ ಪದ್ಯದಲ್ಲಿ ...ಆಣತಿಮಾಡಿ" ಎಂಬಲ್ಲಿಗೆ, ಎಕ್ಕಲ ಗಾಣನ ರಾಗಾಲಾಪ ವನ್ನು ವರ್ಣಿಸುವ ಪೂರ್ವಕಾಲಿಕ ವಾಕ್ಯವೊಂದು (clause) ಮುಗಿಯುತ್ತದೆ: ದೀರ್ಘ