೧೪ / ಕುಕ್ಕಿಲ ಸಂಪುಟ
ಪ್ರೇಕ್ಷಾ ಕರ್ತುಮಹಾನ್ ಧರ್ಮೋ ಭವತು ಬ್ರಹ್ಮಭಾವಿತಃ ।
ಕಾವ್ಯಕರ್ತುರ್ಯಶಃಾಸ್ತು ಧರ್ಮಶ್ಚಾಪಿ ಪ್ರವರ್ಧತಾ೦ ।।
ಇಜ್ಯಯಾ ಚಾನಯಾ ನಿತ್ಯಂ ಪ್ರೀಯತಾಂ ದೇವತಾ ಇತಿ ।
ನಾಂದೀ ಪದಾಂತರೇಷ್ಟೇಷು ಹೈವಮತಿ ನಿತ್ಯಶಃ ।
ವದೇತಾಂ ಸಮ್ಯಗುಕ್ಕಾಭಿರ್ಗೀಭಿ್ರಸ್ ಪಾರಿಪಾರ್ಶ್ವಕೌ ।। ಇತ್ಯಾದಿ.
ಇನ್ನು ಸಭಾಲಕ್ಷಣದಲ್ಲಿರುವ ಮೇಳಲಕ್ಷಣ ಶ್ಲೋಕ ಹೀಗಿದೆ :
ನರ್ತಕೋ ನಾಟ್ಯಕಾರ ಸಾಂಗೀತಿಸ್ತಾಳಧಾರಿಣೇ ।
ಮರ್ದಳಶ್ರುತಿ ಹಾಸ್ಯಕಾರಾ ಇತ್ಯೇತನ್ ಮೇಳಲಕ್ಷಣಂ ।।
ಪೂರ್ವರಂಗದಲ್ಲಿ ಹಾಡುವವನು ಹಿಂದೆ ಹೇಳಿದಂತೆ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಹೊಂದಿದವನಾಗಿರಬೇಕೆಂಬುದು ಇಲ್ಲಿ ಲಕ್ಷಿಸಬೇಕಾದ ಮುಖ್ಯಾಂಶ, ಭರತನ ನಾಟ್ಯಶಾಸ್ತ್ರದಲ್ಲಿಯೂ ಪೂರ್ವರಂಗದ ಹಾಡುಗಾರಿಕೆಗೆ ಗಾಂಧರ್ವವೆಂದೂ ಗಾಂಧರ್ವ ಗಾನಪರಿಣತನಾದ ಬೇರೇ ಒಬ್ಬ ಭಾಗವತನು ಶಾಸ್ರೋಕ್ತ ಮಾರ್ಗದಲ್ಲಿ ಪೂಜಾಸ್ತುತಿ, ಕೀರ್ತನೆಗಳನ್ನು ಮಾರ್ಗರಾಗವಿಧಾನದಂತೆ ಹಾಡತಕ್ಕದ್ದೆಂಬ ಲಕ್ಷಣ ಹೀಗಿದೆ :
ಪೂರ್ವರಂಗ ಪ್ರಯೋಗೇ ತು ಕರ್ತವೋ ರಾಗಜೋ ವಿಧಿಃ ।
ದೇವ ಪೂಜಾಧಿಕಾರನ್ನು ತತ್ರ ಸಂಪರಿಕೀರ್ತಿತಃ ।।
ಪೂರ್ವರಂಗೇ ತು ಗಾಂಧರ್ವಂ... ಇತ್ಯಾದಿ.
ಎಂದರೆ ಗಾಂಧರ್ವ ಎಂಬುದು ದೇವಸ್ತುತ್ಯಾಶ್ರಯವಾಗಿದ್ದು ಅದೃಷ್ಟ ಫಲಪ್ರದಾಯಕ ವಾದ ಶಾಸ್ತ್ರೀಯ ಗಾನವಿಧಾನ, ವೇದಮಂತ್ರಗಳನ್ನು ಹೇಗೋ ಹಾಗೆ, ಹಾಗೆ, ಆಯಾ ಗ್ರಾಮರಾಗಕ್ಕೆ ನಿರ್ದಿಷ್ಟವಾದ ಸ್ವರ, ಸ್ಥಾನಗಳಲ್ಲಿ 'ಅಗ್ನಿಷ್ಟೋಮ', 'ಉತ್ತರಮಂದ್ರಾದಿ' ತಾನಮೂರ್ಧನಾ ವಿಸ್ತಾರಗಳಿಂದ ಹಾಡಬೇಕೆಂಬ ತಾತ್ಪರ್ಯ.
ಮುಖ್ಯ ಕಥಾರಂಭವಾದ ಮೇಲಿನ ನೃತ್ಯನಾಟ್ಯ ಪ್ರಯೋಗದಲ್ಲಿ ಹಾಡುವ ಗೀತ ಗಳಾದರೆ ದೇಶೀರಾಗಗಳಲ್ಲಿ, ದೇಶೀತಾಳಗಳಲ್ಲಿ ರಾಗಾಲಾಪನೆ ಇಲ್ಲದೆ ಹಾಡತಕ್ಕದ್ದು ಎಂಬ ನಾಟ್ಯಶಾಸ್ತ್ರದಲ್ಲಿರುವ ಅದೇ ಪರಂಪರೆ ನಮ್ಮ ಯಕ್ಷಗಾನದಲ್ಲಿ ನಡೆದು ಬಂದಿರುವುದನ್ನು ಗಮನಿಸಬೇಕು. ಪ್ರಸಂಗದ ಪದಗಳು ರಾಗಬದ್ಧವಾದ ರಚನೆ ಗಳಾದರೂ ಅವನ್ನು ರಸಾನುಗುಣವಾಗಿ ಅರ್ಥಪ್ರಧಾನವಾಗಿ, ಸ್ಪಷ್ಟ ಉಚ್ಚಾರಣೆಯಿಂದ, ಸಂಧಿದೋಷವಿಲ್ಲದೆ, ರಾಗವಿಸ್ತಾರ ರಾಗವಿಸ್ತಾರ ಮಾಡದೆಯೇ ಹಾಡಬೇಕೆಂಬುದನ್ನು ಭಾಗವತರು ಚೆನ್ನಾಗಿ ಲಕ್ಷಿಸಬೇಕೆಂದು ವಿಜ್ಞಾಪಿಸುತ್ತೇನೆ. ನಮ್ಮ ಬಾಲ್ಯದಲ್ಲಿದ್ದ ಹಳೆಯ ನಮ್ಮ ಭಾಗವತರು ಸಾಂಪ್ರದಾಯಿಕವಾಗಿ ಪ್ರಸಂಗ ಹೇಳುತ್ತಿದ್ದುದಕ್ಕೂ ಈಗಿನವರು 'ನವಸುಧಾರಣೆ' ಎಂದು ವಿಕೃತರಾಗ ವಿಸ್ತಾರದಲ್ಲಿ ಹಾಡುವುದಕ್ಕೂ ಅಜಗಜಾಂತರ ಕಂಡುಬರುತ್ತದೆ. ಕಛೇರಿ ಸಂಗೀತದಂತೆ ಪ್ರಸಂಗದ ಪದಗಳನ್ನು ಹಾಡಿದರೆ ಅದನ್ನು ಯಕ್ಷಗಾನವೆನ್ನಬಹುದೇ? ಕೇಳುವ ಕಿವಿಯುಳ್ಳ ಶೋತೃಗಳೇ ಇದನ್ನು ಹೇಳಬೇಕು.
ನಮ್ಮ ಬಯಲಾಟದಲ್ಲಿ ಹಾಸ್ಯಗಾರನಿಗೆ ಹೆಚ್ಚಿನ ಪ್ರಾಶಸ್ತ್ರ ಹಾಗೂ ಸ್ವಾತಂತ್ರ ಇರುವುದೂ ನಾಟ್ಯಶಾಸ್ತ್ರ ಸಂಪ್ರದಾಯವೇ ಆಗಿದೆ. ಭರತನ ನಾಟ್ಯಶಾಸ್ತ್ರದಲ್ಲಿ ಹಾಸ್ಯಕಾರನು ಪೂರ್ವರಂಗದಲ್ಲಿ ಮಾತ್ರವಲ್ಲ, ಕಥಾಪ್ರಯೋಗದಲ್ಲಿ ಕೊನೆಯ ವರೆಗೂ ರಂಗಸ್ಥಳದಲ್ಲಿ ಎಲ್ಲ ಪಾತ್ರಗಳೊಂದಿಗೆ ಹೊಗಳುವ ಸೇವಕ, ದೂತ ಮುಂತಾದ ಬೇರೆ ಬೇರೆ ತರದ ವಿಕೃತ ವೇಷಗಳಲ್ಲಿ ಬಂದು ತನ್ನ ಅಸಂಬದ್ಧ ಪ್ರಲಾಪ, ಕಪಿಚೇಷ್ಟೆಗಳಿಂದ