ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೪ / ಕುಕ್ಕಿಲ ಸಂಪುಟ

ಇವೆ. ಇದನ್ನು ವೆಂಕಟಮಖಿಯ ಚತುರ್ದಂಡಿ ಪ್ರಕಾಶಿಕೆಯಲ್ಲಿ ಕಾಣಬಹುದು. (೨೪-೨೫)

೭. ಒಂದು ಸ್ವರವನ್ನು ಎಳೆಯುವುವಾಗ ನಾದವನ್ನು ಸಣ್ಣಗೆ ಮತ್ತು ದೊಡ್ಡದಾಗಿ ಮಾಡುವ ಒಂದು ಕ್ರಮಕ್ಕೆ ಅಲಂಕಾರವೆಂದು ಕರೆಯುತ್ತಾರೆ. ಇದು ಏಳು ವಿಧ. ಶಾಂತ ಮತ್ತು ಗಂಭೀರ ಈ ಏಳು ವಿಧವಾಗಲು ಸಾಧ್ಯ. ಇತ್ಯಾದಿ (೨೭) ೮. 'ಯತ್ತು ತಂತ್ರಿ, ಕೃತಂ ಪ್ರೋಕ್ತಂ ನಾನಾಂತೀದ್ಯಂ ಸಮಾಶ್ರಯಂ' (?) ಅರ್ಥ- 'ಯಾವ ಗೀತವು ತಂತೀವಾದ್ಯಗಳ ಜೊತೆಗೆ ಹಾಡಲ್ಪಡುತ್ತಿತ್ತೋ ಅದು ಗಾಂಧರ್ವ, ಪ್ರಾಚೀನ ಮಾರ್ಗ ಸಂಗೀತವನ್ನು ವೀಣಾದಿ ವಾದ್ಯಗಳ ಜೊತೆಗೆ ಹಾಡುತ್ತಿದ್ದರು. ಈಗಿನ ದಿನಗಳಲ್ಲಿ ವೀಣೆಯ ಅಗತ್ಯವಿಲ್ಲ. ತಂಬೂರಿ ಶ್ರುತಿಯಿಂದ ಹಾಡುತ್ತೇವೆ (ಆದ್ದರಿಂದ ಇದು ದೇಶಿ), (ಪುಟ ೩೮-೩೯) ೯. ಮತಂಗನು ಬೃಹದ್ದೇಶಿಯಲ್ಲಿ 'ಏಷಾಂ ಶ್ರುತಿಸ್ವರ ಗ್ರಾಮ ಜಾತ್ಯಾದಿ ನಿಯಮೋ ನಹಿ'- ಅಂದರೆ, ಶ್ರುತಿ, ಸ್ವರ, ಗ್ರಾಮ, ಜಾತಿ ಇತ್ಯಾದಿಗಳ ನಿಯಮವಿಲ್ಲವೋ ಅದು ದೇಶಿ ಎಂದು ತಿಳಿಸಿದ್ದಾನೆ. (೩೯) ೧೦. ವಾಕ್ಯಾರ್ಥವನ್ನು ಹೊಂದಿರುವ ಶಬ್ದ ಧ್ವನಿಯೆನಿಸಿಕೊಳ್ಳುತ್ತದೆ. ಶಬ್ದ ಅಥವಾ ಸಪ್ಪಳ ಧ್ವನಿಯಿಂದ ಭಿನ್ನವಾಗಿರುತ್ತದೆ. ಅಲ್ಲದೆ ಅದು ಶ್ರವಣ ಯೋಗ್ಯ ವಾಗಿರುವುದಿಲ್ಲ. (೧೬) ೧೧. ಅನಾಹತನಾದದ ಅನುಭವವು ಸಂಗೀತದಿಂದ ಸಾಧ್ಯವಾಗುತ್ತದೆ. ಆದರೆ ಅದಕ್ಕೆ ಸ್ವಲ್ಪ ಭೌತಶಾಸ್ತ್ರದ ಪರಿಚಯವು ಬೇಕು. ಇತ್ಯಾದಿ (ಪುಟ ೧೯) ೧೨. ಆದಿ, ರೂಪಕ, ಮಿಶ್ರಛಾಪು, ಖಂಡಛಾಪು ತಾಳಗಳ ಪ್ರಮಾಣವಾದರೂ ಸರ್ವಲಘು, ಸರ್ವಲಘು ಎಂದರೆ ತಾಳದ ಪ್ರತಿಘಾತಕ್ಕೆ ಮಧ್ಯೆ ಬರುವ ಅಕ್ಷರಗಳು ೩, ೪-೫, ೭-೯ ಆಗಿದ್ದರೂ ೩-೪-೫-೭-೯ ಹೀಗೆ ಬರುವುದಕ್ಕೆ ಸರ್ವಲಘುವೆಂದು ಹೆಸರು (೫೫) ತಾಳದಲ್ಲಿ ಧ್ರುತಕಾಲ, ಆದಿತಾಳ, ದೇಶಾದಿ ತಾಳ ಎರಡೂ ಎಂಟು ಏಟುಗಳಿರುವ ತಾಳ (೫೭) ೧೩. ಭರತನ ನಾಟ್ಯಶಾಸ್ತ್ರದಲ್ಲಿ ಯಜುರ್ವೇದದಿಂದ ತಾಳವನ್ನು ತೆಗೆದುಕೊಳ್ಳಲಾಗಿದೆ. ಗಾಯನದಲ್ಲಿ ಸಾಹಿತ್ಯ, ಸ್ವರ, ತಾಳ, ರಸ ಎಂಬ ನಾಲ್ಕು ಪ್ರಭೇದಗಳುಂಟು ಈ ನಾಲ್ಕನ್ನು ನಾಲ್ಕು ವೇದಗಳಿಂದ ಗ್ರಹಿಸಲಾಗಿದೆ (೫೧) ೧೪. ರಾಮಾಯಣದಲ್ಲಿ ಭಿನ್ನಭಿನ್ನರಾಗಿಣಿಗಳು ಇವೆ (ಪುಟ ೬), ಅಮರಕೋಶದ ಟೀಕಾಕಾರನಾದ ಕ್ಷೀರಸ್ವಾಮಿಯು ಗಾಂಧರ್ವದ ಬಗೆಗೆ ಬರೆಯುತ್ತಾ 'ಗಂಧರ್ವ ಸುಂಬುರು ಪ್ರಧೃತಯೋ ದೇವನಾಯಕಾ' ದೇವತೆಗಳ ನಾಯಕರು ತುಂಬುರು ಮುಂತಾದವರು ಎಂದು ಹೇಳಿದ್ದಾನೆ. (ಪುಟ ೩೮) ೧೫. ೭೦೦ ವರ್ಷಗಳಿಂದ ೭೨ ಮೇಳಕರ್ತರಾಗಗಳನ್ನೇ ಆಧಾರವಾಗಿರಿಸಿಕೊಂಡು ಸಂಗೀತದ ವಿಚಾರ ಮಾಡಲಾಗಿದೆ (೫೮) ಸಂಗೀತ ರತ್ನಾಕರದಲ್ಲಿ ೩೦ ಗ್ರಾಮ ರಾಗಗಳು. ೧೬. ವೈದಿಕ ಸಂಗೀತವನ್ನು ಪ್ರಸ್ತಾ, ಹುಂಕಾರ, ಉದ್ದೀಯ, ಪ್ರತಿಹಾರ, ಉಪದ್ರವ, ನಿಧಾನ, ಪ್ರಣವ ಎಂದು ಏಳು ವಿಧದಲ್ಲಿ ವಿಂಗಡಿಸಲಾಗಿತ್ತು. (ಪುಟ ೪)