ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಎರಡು ವಿಮರ್ಶೆಗಳು / ೩೦೫

೧೭. ಛಾಂದೋಗ್ಯದಲ್ಲಿ ಅನಿರುಕ್ತ, ನಿರುಕ್ತ, ಮೃದು ಮತ್ತು ಕೌಂಚ ಎಂಬ ಸ್ವರಗಳನ್ನು ಹೇಳಿದ. (೪) ಇತ್ಯಾದಿ.
ಇನ್ನು ಮುಂದಿನ ಅಧ್ಯಾಯಗಳಲ್ಲಿ ಶಾಸ್ತ್ರೀಯ ಲಕ್ಷಣಗಳಿಲ್ಲದಿದ್ದರೂ, 'ವೆಂಕಟ ಮಖಿಯ ಮೇಳಪದ್ಧತಿಯು ಸಂಗೀತಕ್ಕೆ ಒಂದು ಶಾಸ್ತ್ರ ಲಕ್ಷಣವನ್ನು ಕೊಡಲು ಮಾತ್ರ ಪ್ರಯೋಜನವಾಯಿತು.' (ಪುಟ ೬೦) 'ಹರಿಕಾಂಭೋಜಿ ರಾಗವನ್ನು ಹಾಡಿದರೆ ಸ್ವಾರಸ್ಯ ವಿಲ್ಲ' (೬೦) ಎಂದು ಮುಂತಾಗಿ ಈ ಗ್ರಂಥಕರ್ತರು ಕೊಡುವ ವಿಮರ್ಶನ ವಿಚಾರಗಳನ್ನು ವಿದ್ವಾಂಸರು ಮನ್ನಿಸಬಹುದೇ ಎಂಬ ಶಂಕೆಯುಂಟಾಗುತ್ತಿದೆ.
ಇದಲ್ಲದೆ ಈ ಗ್ರಂಥಕರ್ತರು ಕೊಟ್ಟಿರುವ ಪಾರಿಭಾಷಿಕ ಪದಗಳೂ ಸಂಸ್ಕೃತ ಶ್ಲೋಕಗಳೂ ಬಹಳ ವಿರೂಪವಾಗಿ ಕಾಣುತ್ತವೆ. ಇದು ಪ್ರಾಯಶಃ ಮುದ್ರಣ ದೋಷವಿದ್ದರೂ ಇರಬಹುದು. ಏನಿದ್ದರೂ ಈ ಕೆಲವು ಶಬ್ದಗಳಿಗೆ ಅರ್ಥವಾಗುವಂತಿಲ್ಲ: ಔದುಪಾತ್ತಂ, ಗ್ರಾಮಣೀಗಾನ, ತೇರವಂ, ದುರ್ಮರಪರ್ಣವ, ಕರಾಕಾಲಾಪ್ರವೃತ್ತೇಷು, ಏತೇರ್ಭವೇಸ್ತುಗಾಯಂತಿ, ಭೂಮಿಷ್ಠಾತಿ ಸ್ವರೇಷುಚುನಾಮಾನಿ, ತುಲಗಾಕವಿ, ಪ್ರತೀಕಾರಂ ಪುನಃ ಗಂಧರ್ವಾಣಾಂ, ಆತಮೋಡಿಗಲದ ಧ್ರುತಕಾಲ, ನಾಟ್ಯಂ ಚವಿವಿಧಾಶ್ರವತ್, ತೇರವಂಜನ, ಇತ್ಯಾದಿ ಇತ್ಯಾದಿ.
'ಸ್ವರ ಸಂಕೇತ ಶಾಸ್ತ್ರ'ವೆಂಬ ಕೊನೆಯ ಅಧ್ಯಾಯದಲ್ಲಿ, 'ಸಂಕೇತಗಳ ವಿವರಣೆ ಯನ್ನು ಮೂರನೆ ಅನುಬಂಧದಲ್ಲಿ ವಿವರಿಸಲಾಗಿದೆ' ಎಂದು ಸೂಚಿಸಿದ್ದಾರೆ. ಆದರೆ ನಮಗೆ ದೊರೆತ ಪ್ರತಿಯಲ್ಲಿ ಎರಡನೇ ಮೂರನೇ ಅನುಬಂಧಗಳಿರುವುದಿಲ್ಲ. ಆ ಅನುಬಂಧಗಳ ವಿಷಯವೇನೆಂದೂ ತಿಳಿಯದು.
ಪ್ರಸ್ತಾವನೆಯಲ್ಲಿ ಗ್ರಂಥಕರ್ತರು 'ಈ ಗ್ರಂಥವು ಉಪಯುಕ್ತ ವಿಷಯವನ್ನೊಳ ಗೊಂಡಿದ್ದು ಸಂಗೀತ ಅಭ್ಯಾಸಿಗಳಿಗೆ-ವಿದ್ವಾಂಸರಿಗೆ ಉಪಯುಕ್ತವಾದರೆ ನನ್ನ ಶ್ರಮ ಸಾರ್ಥಕ. ಸಹೃದಯರು ಗುಣದೋಷವನ್ನು ವಿಮರ್ಶೆ ಮಾಡಿ ದೋಷಗಳನ್ನು ತಿಳಿಸಿದರೆ ಮುಂದೆ ಅವುಗಳನ್ನು ತಿದ್ದಿಕೊಳ್ಳಲಾಗುವುದು' ಎಂದು ವಿನಯದಿಂದ ಭಿನ್ನವಿಸಿರುವುದು ಇವರ ಸಹಜ ವಿನಮ್ರ ಸ್ವಭಾವದ ಹಾಗೂ ಸರಳ ಸೌಜನ್ಯದ ದ್ಯೋತಕವಾಗಿದೆ.





20(ಮಾನವಿಕ ಕರ್ನಾಟಕ, ಸಂ. ೨, ಸಂಚಿಕೆ ೩.)