ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೇಶೀಯ ಛಂದಸ್ಸುಗಳ ಮೂಲ - 'ಏಲೆ' / ೩೧೧

ಹೀಗೆ ಪದನಿಯಮವೊಂದೇ ಲಕ್ಷಣವಾಗಿದ್ದ ಏಲೆಯ ಮೂಲಸ್ವರೂಪಕ್ಕೆ ಅಂಶ ಗಣಾನ್ವಯವಾದ ಛಂದಸ್ಸಂಸ್ಕಾರದಂತೆ ರತಿಲೇಖೆ, ಕಾಮಲೇಖೆ ಇತ್ಯಾದಿ ಹೆಸರಾಯಿತು. ಆ ಲಕ್ಷಣದಂತೆ ಮೂರು ಪಾದಗಳಲ್ಲಿ ಒಟ್ಟು ಆರು ಅಥವಾ ಏಳು (ಎಂಟು ಎಂಬ ಮತ ಭೇದವೂ ಇದೆ) ಪದಗಳಿದ್ದ ಆ ಬಂಧವು ರತಿಗಣಬದ್ದವಾಗಿರಬೇಕು ಎಂಬುದಾಗಿ ಮೂಲ ಲಕ್ಷಣವಿದ್ದರೂ ಕ್ರಮೇಣ ಲಕ್ಷ್ಮಮಾರ್ಗದಲ್ಲಿ ಇತರ ಗಣಗಳೂ ಮಿಶ್ರವಾಗುತ್ತ ಬಂದುವು. ಪದಸಂಖ್ಯಾನಿಯಮವು ಶಿಥಿಲವಾಯಿತು. ಅಂಶಗಣಾನ್ವಯವಾದ ಈ ಬಂಧಕ್ಕೆ ನಿಬದ್ಧ ಗಾನ ಕ್ರಮದಲ್ಲಿ ಒಂದು ಸ್ಥಿರವಾದ ಸ್ವರೂಪವನ್ನು ಉಳಿಸುವ ಪ್ರಯತ್ನವಾಗಿ ಗಣನಿಯಮದೊಂದಿಗೆ ಮಾತ್ರಾನಿಯಮವೂ ಅವಶ್ಯವೆಂದು ವಿಧಿಸಲ್ಪಟ್ಟಿತು. ಈ ಅಂಶಗಳಲ್ಲಿ ಮಾತ್ರಾ ಸಂಖ್ಯೆಯು ಹೆಚ್ಚು ಕಡಿಮೆಯಾಗಿರುತ್ತದೆ. ಎಂದರೆ, ಬ್ರಹ್ಮಗಣದಲ್ಲಿ (ರತಿಗಣ) ಮೂರು ಅಥವಾ ನಾಲ್ಕು ಮಾತ್ರೆಗಳಿರಬಹುದು; ವಿಷ್ಣುಗಣದಲ್ಲಿ (ಕಾಮಗಣದಲ್ಲಿ) ನಾಲ್ಕು, ಐದು ಅಥವಾ ಆರು ಮಾತ್ರೆಗಳಿರುತ್ತವೆ; - ರುದ್ರಗಣದಲ್ಲಿ (ಬಾಣಗಣದಲ್ಲಿ) ಹೆಚ್ಚೆಂದರೆ ಎಂಟು, ಕಡಿಮೆ ಎಂದರೆ ಐದು ಮಾತ್ರೆಗಳಿರುತ್ತವೆ. ಹಾಗಾಗಿ ಗಣನಿಯಮವು ಸರಿಯಾಗಿರುವ ಪದ್ಯಗಳಲ್ಲಿ ಅಥವಾ ಪಾದಗಳಲ್ಲಿ ಮಾತ್ರಾಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತದೆ. ಮಾತ್ರಾಸಂಖ್ಯೆ ಹೆಚ್ಚು ಕಡಿಮೆ ಯಾದರ ತಾಳಕ್ಕೆ ವಿಷಮವಾಗುತ್ತದೆ. ಹಾಗಾಗಿ ಪ್ರತಿ ಪಾದದಲ್ಲಿ ಇಂತಿಷ್ಟೇ ಮಾತ್ರೆಗಳಿರ ಬೇಕೆಂದು ವಿಧಿಸುವುದು ಅನಿವಾರ್ಯವಾಯಿತು. ಹಾಗೆನ್ನುವಾಗ ಇಲ್ಲಿ ಒಂದು ಸಂದೇಹ ಬರಬಹುದು. ಏನೆಂದರೆ ಮುಂದೆ ಹೇಳುವಂತೆ ರತಿಲೇಖೆಯ ಪಾದಗಳಲ್ಲಿ ೧೧ರಂತೆ ಮಾತ್ರೆಗಳಿರಬೇಕೆಂಬ ಲಕ್ಷಣವಿದೆ, ಈ ಹನ್ನೊಂದು ಮಾತ್ರೆಗಳು ಸರಿಹೊಂದುವ ತಾಳವಿದೆಯೇ ಎಂದು. ಅದಕ್ಕೆ ಸಮಾಧಾನವೇನೆಂದರೆ: ಹನ್ನೊಂದು ಮಾತ್ರೆಗಳು ತಾಳಕ್ಕೆ ವಿಷಮವೆಂಬುದು ನಿಜ. ಇಲ್ಲಿ ಉದ್ದೇಶಪೂರ್ವಕವಾಗಿಯೇ ಹನ್ನೊಂದು ಮಾತ್ರೆಗಳನ್ನಿ ಟ್ಟಿರುವುದಾಗಿದೆ. ಕಾರಣ, ಏಲಾಬಂಧಗಳನ್ನು ಅತೀತ ಅಥವಾ ಅನಾಗತ ಗ್ರಹ ಗಳಲ್ಲಿಯೇ ಹಾಡಬೇಕೆಂಬ ನಿಯಮವಿರುವುದರಿಂದ ಇಲ್ಲಿ ತಾಳಕ್ಕೆ ವೈಷಮ್ಯವುಂಟಾಗು ವಂತಿಲ್ಲ. ಅನಾಗತ ಗ್ರಹವೆಂದರೆ ಗೀತಕ್ಕೆ ಮೊದಲೇ ತಾಳದ ಘಾತ ಬೀಳುವುದು; ಅತೀತ ಗ್ರಹವೆಂದರೆ ಗೀತಾರಂಭವಾದ ಮೇಲೆ ತಾಳಾರಂಭವಾಗುವುದು. 'ಗೀತಾತೀತೇತ್ವತೀತಃ ಸ್ಮಾತ್ತಾಳಾತೀತೇತ್ವನಾಗತಃ' ಅತೀತಗ್ರಹವಾದರೆ ತಾಳಕ್ಕೆ ಸಿಕ್ಕುವ ಮಾತ್ರೆಗಳು ೧೦. ತಾಳದ ಪೆಟ್ಟು ಬಿದ್ದ ಮೇಲೆ ಗೀತವನ್ನು ಎತ್ತುವ ಅನಾಗತಗ್ರಹದಲ್ಲಿಯಾದರೆ ತಾಳಕ್ಕೆ ಸಿಕ್ಕುವ ಮಾತ್ರೆಗಳು ೧೨. ಆದುದರಿಂದ ೧೧ ಮಾತ್ರೆಗಳ ನಿಯಮವನ್ನು ಇಲ್ಲಿ ಉದ್ದೇಶಪೂರ್ವಕವಾಗಿಯೇ ವಿಧಿಸಿರುವುದೆಂದು ತಿಳಿಯಬಹುದು.

ಸಂಗೀತರತ್ನಾಕರದ ಆ ಗ್ರಹಲಕ್ಷಣವು ಹೀಗಿದೆ :
ಗೇಯೋ ವಾಗ್ಗೇಯಕಾರಣಸ್ತಾಭಿಧಾನ ವಿಭೂಷಿತ:|
ಪುನರ್ಗೀತ್ವಾ ಧ್ರುವೇ ತ್ಯಾಗೋ ಗ್ರಹಸ್ತು ವಿಷಮೋ ಭವೇತ್ ǁ

ಕಲ್ಲಿನಾಥನ ವ್ಯಾಖ್ಯಾನ : ಗ್ರಹಃ ಸಮಾತೀತಾವಾಗತ ಭೇದೇನ ತ್ರೇಧಾ ವಕ್ಷತೇ, ತುಶಬ್ದಃ ಪ್ರಬಂಧಾಂತರಾದನ್ಯವಿಶೀಪುದ್ಯೋತನಾರ್ಥ: | ಪ್ರಬಂಧಾಂತರೇಷು ಗ್ರಹಾ ಣಾಮನಿಯಮಃ ಅತ್ರ ನಿಯಮ ಇತಿ ವಿಶೇಷಃ | ವಿಷಯೋಭವೇದಿತಿ | ವಿಷಮಃ ಸಮಾರನ್ನೂ ಅತೀತಾನಾಗತಯೋರೇಕತರ ಇತ್ಯರ್ಥಃ | ವಾಗ್ಗೇಯಕಾರೇಚ್ಛಯಾ ಅತೀತೋ ವಾ ಅನಾಗತೋ ವಾ ಗ್ರಹಃ ಕರ್ತವ್ಯ ಇತ್ಯುಕ್ತಂ ಭವತಿ ǁ ಕ್ರಮಶಃ ಸಂಗೀತ ದಲ್ಲಿ ಮಾತ್ರಾನಿಯಮವೇ ಮುಖ್ಯವಾಗಿ ಉಳಿದು ಬಂದು ಗಣಾದಿ ನಿಯಮಗಳು