ಪ್ರಧಾನವಾದ ಪ್ರತ್ಯೇಕ ಲಕ್ಷಣಗಳಿವೆ. ಇಂತಹ ಬಂಧಗಳೂ ನಮ್ಮ ಪದಸಾಹಿತ್ಯದಲ್ಲಿ ದೊರೆಯುತ್ತವೆ.
ಇದಲ್ಲದೆ, ರತಿಲೇಖಾದಿಗಳ ಗಣಗಳು ಹೆಚ್ಚು ಕಡಮೆ ಆದ ಇನ್ನೂ ನಾಲ್ಕು ಭೇದಗಳಿಗೆ 'ಛಂದಸ್ವತೀ' ಏಲೆಗಳೆಂಬ ಹೆಸರೆಂದು ಸಂಗೀತರತ್ನಾಕರದಲ್ಲಿ ಲಕ್ಷಣವಿದೆ. ಆ ಪ್ರಕಾರ ಮೂರು ಪಾದಗಳಲ್ಲಿ ಸೇರಿ, ಐದು ಕಾಮಗಣ, ಆಮೇಲೊಂದು ರತಿಗಣ, ಅದರ ಮುಂದೊಂದು ಕಾಮಗಣ. ಹೀಗೆ ಏಳು ಗಣಗಳು ನಿಂದರೆ, ಅವಕ್ಕೆ 'ಛಂದಸ್ವತೀ ಏಲೆ'ಗಳೆಂಬ ಹೆಸರು. ಆ ಲಕ್ಷಣ ಹೀಗಿದೆ :
ಪಂಚ ಕಾಮಾ ರತಿಕಾ ಕಾಮೋಂತೇ ಚರಣತ್ರಯೇ
ಪ್ರತ್ಯೇಕಂ ತಾಸು ಚೇದೇತಾಶ್ಚಂದಸ್ವತ್ಯ:|
ಹೀಗೆ ಏಳು ಗಣಗಳು ನಿಲ್ಲುವಾಗ ಬಂಧದ ಮೂರೂ ಪಾದಗಳು ಭರ್ತಿ ಆಗದೆ ಉಳಿದ ಭಾಗದಲ್ಲಿ ಬೇರೆ ಪದಗಳನ್ನಿಟ್ಟು ಪಾದ ಪೂರ್ತಿ ಮಾಡಬೇಕು. ಹಾಗೆ ಭರ್ತಿ ಮಾಡುವ ಅಂಶಕ್ಕೆ ಶಿಖಾಪದವೆಂದು ಹೆಸರು. ಅದು ಮೂರನೆಯ ಪಾದದಲ್ಲಿಯೇ ಇರಬೇಕು. ಎಂದಿರುವ ಆ ಲಕ್ಷಣ ಹೀಗಿದೆ :
ಯದೇಕ ದ್ವಯೋರಂಸ್ಮಯಾಣಾಂ ಚಾಂತತಃ ಕ್ರಮಾತ್
ಅಂಧ್ರಪೂರ್ತೃ ತದನ್ಯಚ್ಚೇತ್ ತೃತೀಯಾಂಫ್ರಿ ಮಿತಂ ಪದಂ
ಶಿಖಾಪದಂ ತತೃತೀಯೇ ತ್ವಂಫ್......
ಇದರ ವ್ಯಾಖ್ಯಾನದಲ್ಲಿ '...ಏಕಸ್ಯ ಪಾದಸ್ಯ ದ್ವಯೋಃ ಪಾದಯೋಃ ತ್ರಯಾಣಾಂ ಪಾದಾನಾಂ ಅಂತೇ ಯತ್ತಂ ಕಾಮೋಂತೇ ಚರಣತ್ರಯೇ ಇತ್ಯಂಫ್ರಿ ಪೂರ್ತೃತದ ಚ್ಚೇದಿತ್ಯನ್ವಯಂ i ........ಶಿಖಾಪದಂ ನಾಮಪದಂ ತೃತೀಯೇಂ ಕರ್ತವ್ಯ ಮಿತ್ಯರ್ಥ- ಎಂದು ಕಲ್ಲಿನಾಥನೂ ತ್ರಯಾಣಾಮಂತ್ರೀಣಾಂ ಆಂಧ್ರಪೂರ್ತ್ಯ ತೃತೀಯಾಂಘ್ರ ಪ್ರಮಾಣಂ ಪದಂ ಕ್ರಿಯತೇ ತಚ್ಛಿಖಾಪದಮುಚ್ಯತೇ | ತತ್ತು ತೃತೀಯಾಂಘ್ರ ಪ್ರಯೋಗಾತ್~ ಎಂದು ಸಿಂಹಭೂಪಾಲನೂ ಸ್ಪಷ್ಟಪಡಿಸಿದ್ದಾರೆ. ಇದರ ಅರ್ಥವೇನೆಂದರೆ, ಹಿಂದೆ ಹೇಳಿದ ರತಿಲೇಖಾದಿ ಬಂಧಗಳು ಪ್ರತಿಯೊಂದರಲ್ಲಿ ಆರಂಭದಿಂದ ಕ್ರಮವಾಗಿ ಈ ಏಳು ಗಣಗಳನ್ನಿಡಬೇಕು. ಹಾಗೆ ಇಡುವಾಗ ಆ ಬಂಧದ ಮೂರು ಪಾದಗಳಲ್ಲಿ ಮತ್ತೆಷ್ಟು ಭಾಗ ಉಳಿಯುವುದೋ ಆ ಭಾಗಕ್ಕೆ ಗಣನಿಯಮವಿಲ್ಲ. ಐಚ್ಛಿಕ ಪದಗಳಿಂದ ಅದನ್ನು ಪೂರ್ತಿಗೊಳಿಸಬೇಕು. ಹಾಗೆ ಪೂರ್ತಿಗೊಳಿಸುವ ಅಂಶವು ಮೂರನೇ ಪಾದಕ್ಕೇ ಸೇರಬೇಕು. ಅದಕ್ಕೆ ಶಿಖಾಪಾದವೆಂದು ಹೆಸರು. ಎಂದರೆ ಮೊದಲ ಎರಡು ಪಾದಗಳಲ್ಲಿ ಈ ಏಳು ಗಣಗಳೇ ನಿಲ್ಲಬೇಕು ಎಂಬ ತಾತ್ಪರ್ಯ. ಹೀಗೆ ರತಿಲೇಖೆ, ಕಾಮಲೇಖೆ, ಬಾಣಲೇಖೆ, ಚಂದ್ರಲೇಖೆ ಎಂಬವು ನಾಲ್ಕು ಛಂದಸ್ವತೀ ಭೇದಗಳಾಗುತ್ತವೆ. ಹಿಂದೆ ಹೇಳಿದ ಲಕ್ಷಣ ಪ್ರಕಾರ ಮೂವತ್ತೆರಡು ಮಾತ್ರೆಗಳಿರುವ ರತಿಲೇಖೆಯಲ್ಲಿ ಮಾತ್ರ ಈ ಏಳು ಗಣಗಳು ಮೂರೂ ಪಾದಗಳಲ್ಲಿ ನಿಶೇಷವಾಗಿ ನಿಲ್ಲುತ್ತವೆ. ಮಿಕ್ಕ ಕಾಮಲೇಖಾದಿಗಳಲ್ಲಿ ಈ ಏಳು ಗಣಗಳು ನಿಂತಲ್ಲಿಗೆ ಬಂಧ ಪೂರ್ತಿಯಾಗುವುದಿಲ್ಲ. ಅವುಗಳಲ್ಲಿ ಮಾತ್ರ ಮೇಲೆ ಹೇಳಿದಂತೆ ಶಿಖಾಪದವನ್ನು ಸೇರಿಸ ಬೇಕಾಗುತ್ತದೆ. ಆದುದರಿಂದ ಈ ರತಿಲೇಖೆಯೆ ನಮ್ಮ ಛಂದೋಗ್ರಂಥಗಳಲ್ಲಿ ಹೇಳಿದ ಏಲೆಯೆಂದು ನ್ಯಾಯವಾಗಿ ಅನುಮಾನಿಸಬೇಕಾಗುವುದು. ನಾಗವರ್ಮ ಜಯಕೀರ್ತಿಗಳು