ಊರ, ಲ್ಲಿರುವ,
ತಂದೆ, ತಾಯ್ತ, | ಕಾರು, ಬಾಲ, ಕರಿರ
ಪುಸಿಯ, ಲೈನೆ,
ಳುಸುರಿ, ನೀವ್ ಸಾ | ಹ ಸಿಗ, ಬಾಲ, ಕರಿರ
ನಗರದ ಸುಬ್ಬನ 'ರಾವಣೋದ್ಭವ'ದಲ್ಲಿ (ಇವನಿಗೆ ಅಪ್ಪಣ್ಣ ಜೋಯಿಸನೆಂದೂ ಹೆಸರಿದ್ದಂತೆ ತಿಳಿಯುತ್ತದೆ) :
ತಂತು, ಮಾತ್ರ,
ಪೇಳ್ವೆ, ನಾಮ, ತ್ಯಾಂತ, ಜಪದೊ, ಳಿರಲು
ಗುಟ್ಟೇ, ನನ್ನ,
ಕೈಯ್ಯ, ನೆಳೆದ, ಜಟ್ಟಿ, ಯಂಥ, ಪೋರ
ದುರುಳ, ರಿವರ,
ಕೃತ್ಯ,ದಲ್ಲಿ, ತೊರವು, ದಾಯ್ತು, ಧರ್ಮ
ತುಳು ಸೀಮೆಯಲ್ಲಿ ಕಿನ್ನರಿ ಜೋಗಿಗಳು ಮನೆಮನೆಗೆ ಬಂದು ಭಿಕ್ಷೆ ಬೇಡುವಾಗ ಕಿನ್ನರಿಯನ್ನು ನುಡಿಸಿಕೊಂಡು ಹಾಡುವ ಒಂದು ಮಟ್ಟು :
ಒಟ್ಟೆ, ಕೂಲಿ,
ಚೆಟ್ಟು, ಕೂಲಿ, | ತೊಟ್ಟೆ, ಬಂಜ್ಯ, ಜೋಕುಳ
(ಪಲ್ಲ)-ಜೋಕು, ಳಪ್ಪ, ಜೋಕು, ಲೋ-ಕುಪ್ಪೆ, ಬಂಜ್ಯ, ಜೋಕುಳು
ಈ ಪದಗಳು ರತಿಲೇಖೆ ಎಂಬ ಏಲೆಯ ಮೂಲ ಛಂದೋರೂಪವಾಗಿರಬಹುದೆಂದು ಅನುಮಾನಿಸಬಹುದಲ್ಲವೆ?
ಇನ್ನಿಗ ಏಲೆ, ಎಂಬ ಹೆಸರು ಹೇಗೆ ಸಿದ್ಧವಾಯಿತು? ಅದರ ಔಚಿತ್ಯವೇನಿರ ಬಹುದು? ಎಂದು ಊಹಿಸುವುದಾದರೆ- ಕೊನೆಯ ಪದದಲ್ಲಿ ಸಂಬೋಧನೆಯಿರ ಬೇಕೆಂಬುದೂ ಏಲೆಯ ನಿಯತವಾದ ಮೂಲ ಲಕ್ಷಣ ಎಂಬುದನ್ನು ಈ ಮೊದಲೇ ನೋಡಿದವಷ್ಟೆ? ಉದಾಹರಿಸಿದ ಯಾಲಪದಾದಿ ಬಂಧಗಳಲ್ಲಿ ಹಾಗಿರುವುದೂ ಸ್ಪಷ್ಟ ವಾಗಿದೆ. (ಯಾಲಪದ'ವೆಂಬುದು, ಎ ಕಾರದ ಸ್ಥಾನದಲ್ಲಿ ಯಕಾರವನ್ನು ಉಚ್ಚರಿಸುವ ಸ್ವಭಾವ ನಮ್ಮಲ್ಲಿರುವುದರಿಂದ, ರೂಢಿಯಾದ ಅಪಭ್ರಂಶ ರೂಪವೆಂಬುದರಲ್ಲಿ ವಿದ್ವಾಂಸರಿಗೆ ಸಂದೇಹವಿರದು. ಏ ಕಾರಾದಿಯಾದ ಪದಗಳಲ್ಲಿ ಸರ್ವಸಾಮಾನ್ಯವಾಗಿ ಯಕಾರವೇ ಉಚ್ಚರಿಸಲ್ಪಡುತ್ತದೆ: “ಏಲಕ್ಕಿಯು ಯಾಲಕ್ಕಿ'ಯಾದಂತೆ; “ಏಕೆ”- “ಯಾಕೆ,' 'ಏತಕ್ಕೆ-ಯಾತಕ್ಕೆ', 'ಬೇಡ-ಬ್ಯಾಡ', ಎಂದೂ ಆಗಿದೆಯಲ್ಲ?) ಈ ಜಾನಪದ ಮಟ್ಟುಗಳಲ್ಲಿಯೂ ಕೊನೆಯಲ್ಲಿ ಸಂಬೋಧನೆಯಿದೆ. ಏಕಾರವೆಂಬುದು ಸಂಬೋಧನೆಯ ಸ್ವರಾಕ್ಷರವಲ್ಲವೆ? ಏ ರಾಮ, ಏ ಕೃಷ್ಣ, ಏಲೇ, ಇತ್ಯಾದಿ ಈ ಏಕಾರ ಏ ಏ ಏ ಎಂದು ಪುನರಾವರ್ತಿತವಾಗುವಾಗ, ಪುನರುಚ್ಚಾರಣೆಯ ವ್ಯಂಜಕವಾಗಿ ಲಕಾರವು ಸೇರುವುದು ಸ್ವಭಾವ. ಆದುದರಿಂದಲೇ ಜಾನಪದ ಗೀತೆಗಳಲ್ಲಿ ಒಕ್ಕೊರಲಿನಿಂದ ಹಾಡುವ ಏ ಲೇ ಲೇ ಲೇ ಲೆಲಾಂ, ಎಲ್ಲಲಾಂ, ಲೀಲಾಂ, ಲೋಲಿ ಲಾಲೀ, ಮೊದಲಾದ ಸೋಗುಡುವ ಸೊಲ್ಲು ಗಳಲ್ಲಿ ಹೆಚ್ಚಾಗಿ ಲಕಾರವು ಭಾಕ್ಷರವಾಗಿರುವುದನ್ನು ಕಾಣುತ್ತೇವೆ. ಲಾಲಿಪದ, ಲೋಲಿಪದ, ಜಾಲಪದ, ಓವೀ, ಲೋಲೀ ಎಂದು ಮುಂತಾಗಿ ಸಂಗೀತ ಗ್ರಂಥಗಳಲ್ಲಿ ಲಕ್ಷಣೋಕ್ತವಾಗಿರುವಂತೆ ಸಹ, ಜಾನಪದ ಬಂಧ ವಿಶೇಷಗಳಿಗಿರುವ ಈ ಹೆಸರುಗಳಿಗೆ