ಸಾಮಾನ್ಯ ಲಕ್ಷಣವಾಗಿ ಉಳಿಯಿತು. ಗಣಗಳಿಗೆ ಸಂಮಿಶ್ರವಾಗಿದ್ದರೂ ಈ ಮಾತ್ರಾ ನಿಯಮಕ್ಕೆ ಒಳಪಟ್ಟಿರುವ ಬಂಧವು 'ರತಿಲೇಖೆ' ಎಂದೇ ಕರೆಯಲ್ಪಟ್ಟಿತು. ಕ್ರಮೇಣ ಮಾತ್ರಾ ವೃದ್ಧಿ, ಪದವೃದ್ಧಿ, ಗಣವಿಪರಾಸ ಮೊದಲಾದ ವಿಕಾರಗಳಿಂದ ಈ ರತಿಲೇಖಾದಿ ಗಳಲ್ಲಿ ಮತ್ತೆ ಕೆಲವು ಅವಾಂತರ ಭೇದಗಳಾದುವು. ಇವುಗಳೆಲ್ಲಾ 'ಛಂದಸ್ವತಿ'ಗಳೆಂಬ ಸಂಜ್ಞೆಯಿಂದ ಕರೆಯಲ್ಪಟ್ಟವು. ಈ ಛಂದಸ್ವತಿಗಳಲ್ಲಿ, ಗಣನಿಯಮ ಪ್ರಧಾನವಾದ ಒಂದು ಭೇದವೇ ನಾಗವರ್ಮ ಜಯಕೀರ್ತಿಗಳು ಹೇಳಿರುವ ಏಲೆಯಾಗಿದೆ. ಈ ಏಲೆ ಯಲ್ಲಿ ಕೊನೆಯ ಪದವು ಸಂಬೋಧನಾ ಪರವಾಗಿರಬೇಕು ಎಂಬ ನಿಯಮವನ್ನು ಸಂಗೀತ ಶಾಸ್ತ್ರ ಗ್ರಂಥಗಳಲ್ಲಿಯೂ ಕಡ್ಡಾಯವಾಗಿ ಹೇಳಿರುವುದಿಲ್ಲವೆಂಬುದನ್ನು ಲಕ್ಷಿಸಬಹುದು.
ಸಂಗೀತಗ್ರಂಥಗಳೇ ಹೇಳುವಂತೆ, ಏಲೆಯು ಕನ್ನಡ ಭಾಷೆಯೊಂದರ ಸ್ವತ್ತಲ್ಲ ತಿಳಿಯಬಹುದಾಗಿದೆ. ಆಂಧ್ರ, ದ್ರಾವಿಡ, ಲಾಟ, ಗೌಡ, ದೇಶೀಯ ಭಾಷೆ ಕರ್ನಾಟಕ ಏಲೆಗೆ ಹೇಳಿದ ಲಕ್ಷಣವೇ ಇವಕ್ಕೂ ಅನ್ವಯಸಲ್ಪಡುತ್ತದೆ, ಎಂದಿದ್ದಾರೆ. ಗಳಲ್ಲಿಯೂ ಇವೇ ಬಂಧಗಳಿದ್ದುವೆಂದು ಮತಂಗಾದಿ ಲಾಕ್ಷಣಿಕರು ಹೇಳುತ್ತಾರೆ. ಮತ್ತು ಭೇದವಿರುವುದು ಭಾಷೆಯಲ್ಲಿ ಮಾತ್ರ, ಮತಂಗ ಹೀಗೆ ಹೇಳುತ್ತಾನೆ :
ಲಾಟ ಕರ್ಣಾಟಕ ಗೌಡಾಂದ್ರ ದ್ರವಿಡಾನಾಂ ಸ್ವಭಾಷಯಾ |
ಪೃಥಕ್ ಪೃಥಕ್ ಭವಂತ್ಯೇಲಾ ಮಾರ್ಗಯುಕ್ತಾ ಮನೋಹರಾಃ ǁ
ಪ್ರಾಸೈರ್ಮನೋಹರೈರ್ದಿವ್ಯರಾದಿ ಮಧ್ಯಾಂತ ಗೋಚರೈ: |
ಏಲಾ ಕರ್ಣಾಟಕಾ ಪ್ರೋಕ್ತಾ ಲಲಿತ ಧ್ವನಿ ಸಂಯುತಾ ǁ
ಗೌಡ ಏಲೆಯಲ್ಲಿ ಪ್ರಾಸವಿಲ್ಲ. ಆಂಧ್ರ ವಿಲೆಯ ವಿಶೇಷ ಲಕ್ಷಣ ಹೀಗಿದೆ....
ಅನೇಕ ಗಮಕಾಕೀರ್ಣಾಮನೇಕ ಧ್ವನಿ ಮಿಶ್ರಿತಾಂ |
ಅನೇಕ ರಾಗ ಸಂಕೀರ್ಣಾಮೇಲಾಮಾಂದ್ರೀಂ ವಿದುರ್ಬುಧಾಃ ǁ
ದ್ರಾವಿಡ ಏಲೆಯ ವಿಶೇಷ ಲಕ್ಷಣ :
ಭಾಷಾಭಿನಯ ತಾಳಾಡ್ಯಾ ವಿಚಿತ್ರ ಧ್ವನಿ ರಂಜಿತಾ |
ಪ್ರಾಸಹೀನಾ ರಸಸ್ಥಾಚ ವಿಲಾ ದ್ರವಿಡ ದೇಶಜಾ |
ಹೀಗೆ ಸಂಗೀತದಲ್ಲಿ ಬಹುಭೇದ ಪ್ರವಿಸ್ತರವಾಗಿದ್ದು, ಕಾಲಕ್ರಮೇಣ ರೂಢಿ ಸಾಮಾನ್ಯದಲ್ಲಿ 'ಪದ'ಗಳೆಂದು ವ್ಯವಹಾರಕ್ಕೆ ಬಂದ ಈ ದೇಶಲಾಬಂಧವು, ಒಂದೇ ಮೂಲದಿಂದ ಕವಲೊಡೆದ ನಮ್ಮಿ ದ್ರಾವಿಡ ಭಾಷೆಗಳ ಸಾಹಿತ್ಯದಲ್ಲಿ ಬಹುಪ್ರಕಾರವಾಗಿ ವಿಕಾಸಗೊಂಡ ನಾನಾ ಪದ್ಯ ಜಾತಿಗಳಿಗೆ ಮೂಲವಾದ ಛಂದಸ್ಸೆಂದು ನ್ಯಾಯವಾಗಿ ಅನುಮಾನಿಸಬಹುದಾಗಿದೆ. ದ್ರಾವಿಡ ಭಾಷೆಯ ಪವಿತ್ರ ಗ್ರಂಥವಾದ ತಿರುಕ್ಕುರಳಿನ ರಚನೆಯೂ ವಿಕೃತ್ಕಲಾಪ್ರಭೇದವಾದ 'ಛಂದಸ್ವತಿ'ಯ ಲಕ್ಷಣಕ್ಕೆ ಸಮನ್ವಯವಾಗಿಯೇ ಇರುತ್ತದೆ.
ಕನ್ನಡ ಛಂದಸ್ಸುಗಳಿಗೆಲ್ಲಾ ತ್ರಿಪದಿಯೇ ಮೂಲವಾಗಿರಬೇಕೆಂದು ವಿದ್ವಾಂಸರು ಸಕಾರಣವಾಗಿಯೇ ಅಭಿಪ್ರಾಯಪಟ್ಟಿರುತ್ತಾರಷ್ಟೆ? ಸಂಗೀತ ಗ್ರಂಥಗಳನ್ನು ಪರಿಶೀಲಿಸಿ ದಲ್ಲಿ ತ್ರಿಪದಿಗಿಂತಲೂ ಏಲೆಯೇ ಪ್ರಾಚೀನವಾದ ಮೂಲ ಛಂದಸ್ಸೆಂದೂ ಅನುಮಾನಿಸ ಬೇಕಾಗುವದು. ನಿಜವಾಗಿ ನಾಲ್ಕು ಪಾದಗಳಿರುವ ತ್ರಿಪದಿಗೆ ಆ ಹೆಸರು ಸಾರ್ಥಕವಾಗಿಲ್ಲ. ನಿಜವಾದ ತ್ರಿಪದಿಯೆಂಬುದು ಏಲೆಯೇ ಸರಿ, ಜಯಕೀರ್ತಿಯ ಲಕ್ಷಣದಿಂದಲೇ ಇದು ವ್ಯಕ್ತವಾಗಿದೆ. ಏಲೆಯ ಮೂಲಕ ನಮ್ಮ ತ್ರಿಪದಿಯ ಲಕ್ಷಣವನ್ನು ಹೇಳುವುದಿದ್ದರೆ,