ದೇಶೀಯ ಛಂದಸ್ಸುಗಳ ಮೂಲ - 'ಏಲೆ' / ೩೨೧
ಯೇಲಯೋರಾದ್ಯಯೋರಂ ವ್ಯತ್ತಸ್ತಾವಯುಜಾ ವಿಷ
ಯದಾ ತಾಸು ತುರ್ಯ: ಪಾದೋ ನಿಬಧ್ಯತೇ
ಗಣಾದೇರ್ನೂನತಾಧಿಕ್ಯಾದೇಲಾಭಾಸಾ ಇಮ ಮತಾಃ
ಹಿಂದ ಹೇಳಿರುವ ಏಲಾಭಾಸದ ಲಕ್ಷಣದಂತೆ ನಾಲ್ಕು ಪಾದಗಳಿದ್ದ ರತಿಲೇಖೆಯ ಪಾದಗಳಲ್ಲಿ ಒಂದರಿಂದ ಐದರವರೆಗೆ ಮಾತ್ರೆಗಳು ಹೆಚ್ಚಿರುವ ಭೇದಗಳು 'ವಿಚಿತ್ರಾ'ದಿ ಹೆಸರುಗಳನ್ನು ನಿಯತವಾದ ಮಾತ್ರಾಸಂಖ್ಯೆ ೩೨, ನಾಲ್ಕನೆಯ ಪಾದ ಮೂರನೆಯ ಪಾದದಷ್ಟೇ ದೊಡ್ಡದಿರಬೇಕೆಂಬ ನಿಯಮವಿದೆ. ಆಗ ಹತ್ತು ಮಾತ್ರೆಗಳು ಹೆಚ್ಚಾದುವು. ಇನ್ನು ಪ್ರತಿಪಾದದಲ್ಲಿ ಐದು ಮಾತ್ರೆಗಳಂತೆ ವೃದ್ಧಿ ಆದರೆ, ಇಪ್ಪತ್ತು ಮಾತ್ರೆಗಳು ಇನ್ನೂ ಹೆಚ್ಚಾಗಿ ಒಟ್ಟು ಮಾತ್ರಗಳ ಸಂಖ್ಯೆ ೬೨ ಆಯಿತು. ಇದು 'ಚಿತ್ರ' ಎಂಬ ಏಲೆಗಿಂತ ಇದು ಸರಿಯಾಗಲಿಲ್ಲವೆ? ಇತರ ಭೇದಗಳನ್ನು ಹೀಗೆಯೇ ನೋಡಿಕೊಳ್ಳಬಹುದು. ಭಿನ್ನವಾಗಿಲ್ಲ. 'ಮಾತ್ರಾಭಿರ್ದ್ವಾಷಾ ಚಿತ್ರಾಸ್ಮಾತ್' ಎಂಬ ಜಯಕೀರ್ತಿಯ ಲಕ್ಷಣಕ್ಕೆ 'ಮದನವತಿ' ಎಂಬ ಇನ್ನೊಂದು ಛಂದಸ್ಸಿದೆಯಷ್ಟೆ? ಛಂದಸ್ವತೀ ರೂಪಗಳಲ್ಲಿ 'ಏಲಾ ಮದನವತಿ' ಎಂಬುದೊಂದು ಭೇದವೂ ಇದೆ. ಸೋಮೇಶ್ವರ ಅದಕ್ಕೆ ಕೊಟ್ಟಿರುವ ಲಕ್ಷ್ಯವು ಜಯಕೀರ್ತಿಯ ಆ ಲಕ್ಷಣ ಪದ್ಯಕ್ಕೆ ಹೊಂದಿಕೆಯಾಗಿ ಕಾಣುತ್ತದೆ. ಅದು ಪಡೆಯುತ್ತವೆ ಎಂಬ ತಾತ್ಪರ್ಯ. ರತಿಲೇಖೆಯ ಮೂರು ಪಾದಗಳಿಗೆ ಹೀಗಿದೆ:
ಅನವರತ ಭುವನ ಶರಣ (ಅವನತ) ಪ್ರಣತಜನರುದಿತ ಹರಣ
ಸಕಲ ಸುರಾಸುರ ಪೂಜಿತಪದಯುಗ (೪) ನಾರಾಯಣ
ದಿತಿಜಾಧಿಪತಿ ಬಲದಮನ ಸತತ ವಿಬುಧಭಯಶಮನ
ಪ್ರಶಸ್ತ ಶಂಖ ಚಕ್ರ ಗದಾ ಪಾಣಿ ಹರೇ (ಸದಾ) ದಾಮೋದರ
(ಈ ಪದ್ಯದಲ್ಲಿ ಕೆಲವು ಪಾಠದೋಷಗಳಿದ್ದಂತೆ ಮೂಲಗ್ರಂಥದಿಂದ ತಿಳಿಯುತ್ತದೆ.)
ಜಯಕೀರ್ತಿಯ ಲಕ್ಷಣ :
ಪ್ರಥಮಕ ಇಹಗುರು ಪರಕೃತಿ ಪರಿಮಿತ ಲಭ್ಯದಿತರೇ
ಪೃಥಪಾದಾ ರತಿಗಣ ಪದಗತಿ ಮದನಗಣಾಸ್ಯು:
ಗ್ರಥಿತ ಪದಾವಲಯಸೈದಿತಿ ಮದನವತೀ
ಪ್ರಥಿತ ಯತಿ: ಪ್ರತಿಚರಣಂ ದ್ವಾವಿಂಶತಿಮಾತ್ರಾ:
ಈ ಮಾತ್ರಾ ಸಂಖ್ಯೆಯಿಂದ, ಪ್ರಥಮ ಪಾದದಲ್ಲಿ ಲಕ್ಷಕ್ಷರಗಳಿರುವದರಿಂದ ಮತ್ತು ಒಂದೇ ಹೆಸರಿರುವದರಿಂದ ಹೀಗೆಂದು ಊಹಿಸಬಹುದಷ್ಟೆ ಹೊರತು ಇತರ ಪಾದಗಳ ಗಣಸಂಖ್ಯೆಯಲ್ಲಿ ಸಮಾನತ್ವವಿಲ್ಲ. ಹಾಗಾಗಿ, ಅದೇ ಇದು ಎಂದು ನಿಷ್ಕರ್ಷೆಯಾಗದು; ಗಣನಿಯಮವು ಶಿಥಿಲವಾದ ವಿಕೃತೈಲಾರೂಪವಾಗಿರುವುದು ಸಂಭವನೀಯ ಎಂದಿಷ್ಟೆ ಹೇಳಬಹುದು.
ವಿಶೇಷ ಗಮನಾರ್ಹವಾದ ಇನ್ನೊಂದು ಸಂಗತಿ ಎಂದರೆ, ನಾಗವರ್ಮ ಜಯಕೀರ್ತಿ ಗಳು ಹೇಳಿರುವ ಅಥವಾ ಸಂಗೀತ ಗ್ರಂಥಗಳಲ್ಲಿ ಹಿಂದೆ ಹೇಳಿದಂತೆ ಅದಕ್ಕೆ ಸದೃಶವಾದ 'ಛಂದಸ್ವತೀ ರತಿಲೇಖೆ'ಗೂ ನಮ್ಮ 'ಸಾಂಗತ್ಯ'ಕ್ಕೂ ಹೇಳಬಹುದಾದ ಭೇದವೇ ಇಲ್ಲ ಎಂಬುದು. 'ತ್ರಿಪದೀ ತೃತೀಯಾಂಘ್ರಾವಪಮುಂಚಲೇತಿ ಸುಪಠಿತಾ ಗೇಯವಿದಜನ್ಯ' ಎಂಬ ಜಯಕೀರ್ತಿಯ ಏಲಾ ಲಕ್ಷಣವು ಸಾಂಗತ್ಯದ ಅರ್ಧಭಾಗವಾಗುವದಷ್ಟೆ? ಪಾದದ