ಇದಲ್ಲದೆ, ಸಾಂಗತ್ಯವೆಂಬ ಹೆಸರಾಗಲು ಇನ್ನೂ ಒಂದು ಕಾರಣವಿದೆ. ಅನೇಕ ಗ್ರಂಥ ಗಳಲ್ಲಿ ಸಾಂಗತ್ಯಕ್ಕೆ ಚರಿತೆ ಎಂದು ಹೆಸರಿರುವುದು ಕಾಣುತ್ತದೆ. ಈ ಬಂಧದಲ್ಲಿ ರಚಿತ ವಾದ ಕಾವ್ಯಗಳನ್ನು ಹೆಚ್ಚಾಗಿ, 'ಚರಿತೆ', 'ಸಂಗತಿ' ಎಂದು ಆಯಾ ಕವಿಗಳೇ ಹೆಸರಿಸಿರು ತಾರೆ. ಉದಾಹರಣೆಗಾಗಿ-ಅಂಜನಾ ಚರಿತೆ, ಅನಂತನಾಥ ಚರಿತೆ, ಅಬ್ಬಲೂರು ಚರಿತೆ, ಕರಸ್ಥಳದ ನಾಗಲಿಂಗನ ಚರಿತೆ, ಪ್ರಭಂಜನ ಚರಿತೆ, ಕಾಮಚರಿತೆ, ಭರತೇಶ್ವರ ಚರಿತೆ, ಉದ್ಭವ ಚರಿತೆ ಇತ್ಯಾದಿ ಹೆಸರುಗಳಿರುವುವು ಕೆಲವು. ಇನ್ನು ಕೆಲವು ತ್ರಿಪುರದಹನ ಸಂಗತಿ, ನೇಮಿ ಜಿನೇಶ ಸಂಗತಿ, ಕುಮಾರರಾಮನ ಸಂಗತಿ, ಮರುಳು ಸಿದ್ದೇಶ್ವರ ಸಂಗತಿ, ಭೈರವೇಶ್ವರ ಸಂಗತಿ, ಬಸವ ಪವಾಡ ಸಂಗತಿ ಇತ್ಯಾದಿ ಹೆಸರುಗಳುಳ್ಳವು. ಏಕ ಕರ್ತೃಕವಾದ ಎರಡು ಸಾಂಗತ್ಯ ಕಾವ್ಯಗಳಲ್ಲಿ ಒಂದಕ್ಕೆ ಚರಿತೆ ಎಂದೂ ಇನ್ನೊಂದಕ್ಕೆ ಸಂಗತಿ ಎಂದೂ ಹೆಸರಿದೆ. ಶಿಶುಮಾಯಣನ ಕೃತಿಗಳಲ್ಲಿ ಒಂದು 'ಅಂಜನಾ ಚರಿತೆ', ಇನ್ನೊಂದು 'ತ್ರಿಪುರದಹನ ಸಂಗತಿ. ಹಾಗೆಯೇ ಮಂಗರಸನೂ ಒಂದನ್ನು 'ಪ್ರಭಂಜನ ಚರಿತೆ' ಎಂದೂ ಇನ್ನೊಂದನ್ನು 'ನೇಮಿ ಜಿನೇಶ ಸಂಗತಿ' ಎಂದೂ ಕರೆದಿದ್ದಾನೆ. ಈ ಸಂಗತಿಯೇ ಸಾಂಗತ್ಯವಾಗಿರುವುದೂ ಈ ಎರಡು ಹೆಸರುಗಳೇ ಆ ಬಂಧಕ್ಕೆ ಲಾಕ್ಷಣಿಕ ವಾಗಿ ರೂಡಿಯಲ್ಲಿ ಬಂದಿರುವುದೂ ಹೆಚ್ಚು ಸಂಭವನೀಯವೆಂದು ಹೇಳಬಹುದು- ದೇವರಾಜನು ತನ್ನ ಕಾವ್ಯವನ್ನು 'ಸೊಬಗಿನ ಸೋನೆ' ಎಂದು ಕರೆದಿರುವುದರಿಂದ ಆ ಕಾವ್ಯದ ಬಂಧಕ್ಕೂ ಸೊಬಗಿನ ಸೋನೆ ಎಂದು ಹೆಸರಾಗಿರುವಂತೆ.
'ಈ ಸೊಬಗಿನ ಸೋನೆ' ಎಂಬ ಬಂಧವನ್ನೇ ಪರಿಶೀಲಿಸೋಣ. ಇದು ಹೊಸತಾಗಿ ನಿರ್ಮಾಣವಾದ ಛಂದಸ್ಸೇನೂ ಅಲ್ಲ. ಹರಿದಾಸರ ಶಿವದಾಸರ ಪದ ಸಾಹಿತ್ಯಗಳಲ್ಲಿ, ಯಕ್ಷಗಾನಾದಿಗಳಲ್ಲಿ ಸಹ ಈ ಬಂಧದ ರಚನೆಗಳು ವಿಶೇಷವಾಗಿವೆ. ತ್ರಿವಿಧಿ, ತ್ರಿವುಡೆ, ತ್ರಿವದಿ ಎಂಬ ಹೆಸರುಗಳೂ ಇವಕ್ಕಿವೆ. ಸಾಂಗತ್ಯಕ್ಕೂ ಇದಕ್ಕೂ ಹೆಚ್ಚು ಅಭ್ಯಂತರ ವಿಲ್ಲವಷ್ಟೆ; ಸಾಂಗತ್ಯದ ಒಂದು ಪಾದದಲ್ಲಿ ಆರು ಕಾಮಗಣಗಳ ಮುಂದೆ ಒಂದು ರತಿಗಣವಿರುವ ನಿಯಮ; ಏಳೂ ಕಾಮಗಣಗಳಾದರೆ ತಿವದಿ ಅಥವಾ 'ಸೊಬಗಿನ ಸೋನೆ'ಯಾಗುತ್ತದೆ.
ಪ್ರತಿವಾದದಲ್ಲಿ ಏಳು ಕಾಮಗಣಗಳೂ ಏಳು ಪದಗಳೂ ಇರುವ ದೇವರಾಜನ 'ಸೊಬಗಿನ ಸೋನೆ'- ಕಾವ್ಯ ಒಂದೆರಡು ಬಂಧಗಳನ್ನು ಪರಿಭಾವಿಸಿರಿ :
ಹರಿಯನೆ, ಶಂಖ ಚ, ಕ್ರಾಂಕಿತ, ಶಿವನೆನೆ, | ಸುರಸಿಂಧು, ವಹನಬ್ಬ, ಭವನನೆ |
ಸರಸತಿ, ಯಾಣ್ಮನಿಂ, ದ್ರನೆನೆ ಬ, ಳಾಹಕ, | ಪರಿವೃತ, ಮುದ್ರ ಪೂ, ರ್ವಸಮುದ್ರ |
ಪಾರ್ತಿಸುಬ್ಬ ಕವಿಯ ಕೃಷ್ಣಚರಿತೆ ಯಕ್ಷಗಾನದ ಒಂದು ತ್ರಿವುಡೆ :
ಕಂಕಣ, ಕೈಯ ತೋ, ಳ್ಳಳ ಮುಂಗೈ, ಸರಿಗೆ ಪತ್ರ | ದ್ಮಾಂಕಿತ, ಹಸ್ತ ಕೇ, ಸರಿ ಮಧ್ಯೆ
ಕುಂಕುಮ, ಗಂಧ ಕ, ಸ್ತೂರಿ ಪರಿ, ಮಳಸರ್ವಾ, ಲಂಕಾರ, ವಾದಳಂ, ಬುಜಗಂಧಿ |
ಪರಿಶೀಲಿಸಿ ನೋಡಿದರೆ, ಪರಂಪರೆಯಿಂದ ನಮ್ಮ ಸಾಹಿತ್ಯದಲ್ಲಿ ಬಳಸಿ ಬಂದಿರುವ ಈ ಬಂಧವು ಶುದ್ಧವಾದ ಏಲೆಯೇ ಆಗಿದೆ. 'ರತಿಲೇಖಾರತಿಗಣ್ಯಃ ಕಾಮಲೇ ಖಾತು ಮಾನ್ಮಧ್ಯೆ' ಎಂದು ಹಿಂದೆ ಹೇಳಿದ ಲಕ್ಷಣಪ್ರಕಾರ ಏಳುಪದಗಳಿದ್ದು ಸಂಪೂರ್ಣ ಕಾಮಗಣಬದ್ಧವಾಗಿರುವುದು ಏಲೆಯ ಮೂಲ ಛಂದಸ್ಸುಗಳಲ್ಲಿ ಎರಡನೆಯದಾದ ಕಾಮಲೇಖೆ. ಈ ಸೊಬಗಿನ ಸೋನೆಯ ಒಂದು ಪಾದವು ಅದೇ ನಿಯಮದಲ್ಲಿರುವು ದಷ್ಟೆ? ಎರಡು ಕಾಮಲೇಖೆ ಸೇರುವಾಗ ಅದು ಸೊಬಗಿನ ಸೋನೆ ಎಂದು ಹೆಸರಾದ