೩೩೨ | ಕುಕ್ಕಿಲ ಸಂಪುಟ
ತರುವುದೆಂದಿಲ್ಲ. ಆಯಾ ಸ್ವರಗಳು ಯಾವ ಯಾವ ಹಂತಗಳಲ್ಲಿ ಸ್ಥಿರವಾಗಿರುತ್ತವೆಯೋ
ಅವೇ ಸ್ಥಾನಗಳಿಂದಲೇ ಪ್ರತಿಯೊಂದು ಮೂರ್ಛನೆಗಳನ್ನು ಮಾಡುವುದಾಗಿದೆ.
ಆದುದರಿಂದ ಆ ಮೂರ್ಛನೆಗಳು ಕ್ರಮಶಃ ಹಿಂದಿನ ಸ್ವಾಯಿಗೆ ಅತಿಕ್ರಮಿಸುತ್ತವೆ.
ಗ್ರಾಮಗಳಲ್ಲಿಯೂ (ಪ್ರಾಯಶಃ) ಮಧ್ಯಮಗ್ರಾಮ ಒಂದು ಮಾತ್ರ ಸಮಗ್ರ ಒಂದು
ಸ್ಥಾನದ ವ್ಯಾಪ್ತಿಯಲ್ಲಿರುವುದು ಹೊರತು ಉಳಿದೆರಡು ಗ್ರಾಮಗಳು ಮಂದ್ರ-ಮಧ್ಯ
ಮತ್ತು ಮಧ್ಯ-ತಾರವೆಂದು ಎರಡೆರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿರುತ್ತವೆ.
ಮಧ್ಯಮವು ಒಂದೇ ಸ್ಥಾನ ನಿಯಾಮಕ ಸ್ವರವಾದುದರಿಂದ ಅದಕ್ಕೆ ಸಾಮಗಾನದಲ್ಲಿ
ವಿಶೇಷ ಪ್ರಾಧಾನ್ಯವಮನ್ನು ಕೊಡಲಾಗಿದೆ ಎಂದು ತಿಳಿಯಬಹುದು. ಸಾಮಗಾನದ
ಆರಂಭವನ್ನು ಆ ಸ್ವರದಿಂದಲೇ ಮಾಡಬೇಕೆಂಬ ನಿಯಮ ವಿರುವುದಲ್ಲದೆ, ತಾನ
ಮೂರ್ಛನಾದಿ ಸ್ವರವಿಸ್ತಾರದ ಯಾವ ಸಂದರ್ಭದಲ್ಲಿಯೂ ಅದನ್ನು ಲೇಪಿಸಬಾರ
ದೆ೦ದೂ ಹೇಳಿದೆ.
ಗಾಂಧರ್ವದಲ್ಲಿ ಸ್ಥಾನಗಳು ಇಂಥ ಸ್ವರದಿಂದಲೇ ಆರಂಭವಾಗಬೇಕೆಂಬ ನಿಯಮ
ವಿರುವುದಲ್ಲ. ಮತ್ತು ಸ್ಥಾನಾರಂಭದ ಯಾವ ಸ್ವರವಾದರೂ ಅದು ಶಾರೀರದಲ್ಲಿ
ಇಂತಿಷ್ಟೇ ಏರಿನ ಹಂತದಲ್ಲಿರಬೇಕೆಂಬ ಸ್ಥಾನ (Pitch) ನಿರ್ಣಯವೂ ಇರುವುದಿಲ್ಲ.
ಗ್ರಾಮಗಳಲ್ಲಾದರೂ ಇಷ್ಟೆ, ಷಡ್ಜದಿಂದ ಷಡ್ಡದವರೆಗೆ ವ್ಯಾಪ್ತಿಯಿರುವುದು ಅಥವಾ
ಷಡ್ಜದಿಂದ ಆರಂಭವಾಗುವುದು ಎಂಬುದರಿಂದ ಅದಕ್ಕೆ ಸಾಮಗಾನದಲ್ಲಿ ಷಡ್ಡಗ್ರಾಮ
ವೆಂಬ ಹೆಸರು ಸಾರ್ಥಕವಾಗಿ ಬಂದಿರುವುದಾದರೂ ಗಾಂಧರ್ವದಲ್ಲಿ ಅದು ಹಿಂದ
ಹೇಳಿದಂತೆ ಜಾತಿ ಭೇದಗಳಲ್ಲಿ ಹಾಗೂ ಮೂರ್ಛನಾವಶವಾಗಿ ಇತರ ಯಾವುದೇ
ಸ್ವರದಿಂದ ಆರಂಭವಾಗಬಹುದು. ಮಧ್ಯಮ ಗ್ರಾಮದಲ್ಲಿಯೂ ಇದೇ ರೀತಿ, ಸ್ವರಗಳ
ಆನುಪೂರ್ವಿಯೂ ಸ್ವರದಿಂದ ಸ್ವರಕ್ಕಿರುವ ಉಚ್ಚನೀಚ ಪ್ರಮಾಣವು ವ್ಯತ್ಯಾಸವಾಗ
ಬಾರದೆಂಬ ನಿಯಮವೊಂದೇ ಕಟ್ಟುನಿಟ್ಟಾಗಿ ಪಾಲಿಸಲ್ಪಡಬೇಕಾಗಿರುವುದು. ಸಾಮಗಾನ
ದಲ್ಲಿ ಷಡ್ಜಾದಿ ಸ್ವರಗಳಿಗೆ ಶಾರೀರದಲ್ಲಿ ನಿಶ್ಚಿತವಾದ ಸ್ಥಾನಗಳಿದ್ದು ಪ್ರತಿಯೊಂದರ
ಸ್ವರೂಪವೂ ಸ್ಥಿರವಾಗಿರುವುದರಿಂದ ಅವಕ್ಕೆ ಕ್ರಮವಾಗಿ ನವಿಲು, ಎತ್ತು, ಆಡು,
ಕ್ರೌಂಚಪಕ್ಷಿ, ಕೋಗಿಲೆ, ಕುದುರೆ, ಆನೆ ಎಂಬ ಏಳು ಪ್ರಾಣಿಗಳ ಧ್ವನಿಗಳಲ್ಲಿ ಸಾದೃಶ್ಯವಿದೆ
ಎಂದು ಶಿಕ್ಷಾಶಾಸ್ತ್ರದಲ್ಲಿ ಹೇಳಲಾಗಿದೆ. ಮತ್ತು ಕಂಠ ತಾಲ್ವಾದಿ ವರ್ಣೋತ್ಪತ್ತಿ ಸ್ಥಾನಗಳ
ಸ್ವರ್ಶದಿಂದಲೂ ಪ್ರತಿಯೊಂದು ಸ್ವರದ ಉಚ್ಚಾರವು ವಿಶಿಷ್ಟ ಸ್ವರೂಪದಲ್ಲಿರುವುದೆಂಬ
ಲಕ್ಷಣಗಳನ್ನು ಕೊಡಲಾಗಿದೆ.
ಗಾಂಧರ್ವದಲ್ಲಿ ಪ್ರತಿಯೊಂದು ಸ್ವರವೂ ಹಿಂದೆ ಹೇಳಿದಂತೆ ಸ್ಥಾಯಿಯ ಬೇರೆ ಬೇರೆ
ಸ್ಥಾನಗಳಲ್ಲಿ ಭಿನ್ನಸ್ವರೂಪಗಳನ್ನು ಪಡೆಯುವುದರಿಂದ ಶಿಕ್ಷಾಗ್ರಂಥಗಳಲ್ಲಿ ಹೇಳುವ
೧. ಕಠಕಾಲಪ್ರವೃತ್ತೇಷು ತೈತ್ತಿರ್ಯಾಗ್ಯರಕೇಷು ಚ
ಋಗ್ವದೇ ಸಾಮವೇದೇ ಚ ವಕ್ತವ್ಯಃ ಪ್ರಥಮಃ ಸ್ವರಃ || -ನಾ.ಸಿ
ಸರ್ವಸ್ವರಾಣಾಂ ಲೋಪಸ್ತು ವಿಹಿತಥ ಜಾತಿಮು
ಮಧ್ಯಮಸ್ಯ ವಿಲೋಪೋ ಹಿ ನ ಕರ್ತವ್ಯ: ಕದಾಚನ |
ಸರ್ವಸ್ವರಾಣಾಂ ಪ್ರವರೋಹ್ಯವಿನಾಶೀತು ಮಧ್ಯಮಃ |
ಗಾಂಧರ್ವಕಭಿಮತಃ ಸಾಮಸ್ವಪಿಚ ಮಧ್ಯಮಃ ||