ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೨ / ಕುಕ್ತಿಲ ಸಂಪುಟ

ಬರೆದಿರುವ ಪೀಠಿಕೆ ಸುಬ್ಬನ ದೃಷ್ಟಿಯಿಂದಲೂ ಯಕ್ಷಗಾನದ ದೃಷ್ಟಿಯಿಂದಲೂ ಮೌಲಿಕ ವಾದದ್ದು. ನಾಗವರ್ಮನ 'ಛಂದೋಂಬುಧಿ' (೧೯೭೫ ಪ್ರ. ಡಿವಿಕೆ. ಮೂರ್ತಿ, ಮೈಸೂರು) ಕುಕ್ಕಿಲರ ಇನ್ನೊಂದು ಮಹತ್ವದ ಗ್ರಂಥ. ತುಂಬ ಶ್ರಮವಹಿಸಿ ಅವರು ಈ ಛಂದಸ್ಸಿನ ಕೃತಿಯನ್ನು ಸಂಪಾದಿಸಿದ್ದಾರೆ. ಅವರ ಅನೇಕ ತಿದ್ದುಪಡಿಗಳನ್ನು, ಉಳಿಸಿ ಕೊಂಡ ಪಾಠಗಳನ್ನೂ ಎಲ್ಲರೂ ಒಪ್ಪದಿರಬಹುದು. ಆದರೆ ಆ ವಿಷಯದಲ್ಲಿ ಅವರು ವಹಿಸಿರುವ ಶ್ರದ್ಧೆ ವಿಶೇಷವಾದುದು. ಕೆಲಸ ಮಾಡುವವರಿಗೆ ಎಷ್ಟೋ ಹೊಳವುಗಳು ಇಲ್ಲಿ ದೊರೆಯುತ್ತವೆ. ಕೃಷ್ಣಭಟ್ಟರ ಬರವಣಿಗೆ ವಿಶ್ಲೇಷಣಾತ್ಮಕವಾದುದಲ್ಲ. ಅನೇಕ ಸಲ ಅವರ ಉಪಯುಕ್ತ ಸಾಮಗ್ರಿಯನ್ನು ಅನ್ವಯಿಸಿಕೊಳ್ಳುವುದಕ್ಕೆ ಶ್ರಮಪಡಬೇಕಾಗು ತ್ತದೆ. ಆದರೆ ಆ ಶ್ರಮಕ್ಕೆ ಪ್ರತಿಫಲವೂ ಇರುತ್ತದೆ.

ಪಾರ್ತಿಸುಬ್ಬ, ಯಕ್ಸಗಾನಕಲೆ, ಛಂದಸ್ಸಿನ ತತ್ವಗಳು, ಸಂಗೀತದೊಡನೆ ಅದರ ಹೋಲಿಕೆ-ಹೊಂದಾಣಿಕೆಗಳು-ಇವೇ ಮೊದಲಾದ ವಿಷಯಗಳಲ್ಲಿ ಅವರು ಮಾಡಿರುವ ಕೆಲಸ ವಿಶೇಷ ಉಲ್ಲೇಖಕ್ಕೆ ಅರ್ಹವಾದದ್ದು. ಅವರಿಗೆ 'ನಾಟ್ಕಶಾಸ್ತ್ರ'ದ ಮೇಲೆ ಹೆಚ್ಚಿನ ಪ್ರೀತಿಯಿತ್ತು. ಅದನ್ನು ಅನುವಾದ, ವ್ಯಾಖ್ಮಾನ, ಟಿಪ್ಪಣಿಗಳೊಡನೆ ಕನ್ನಡದಲ್ಲಿ ಪ್ರಕಟಿಸಲು ಅವರು ಆಶಿಸಿದ್ದರು. 'ಶಿಲಪ್ಪದಿಗಾರಂ' ಅನುವಾದಿಸುತ್ತಿದ್ದರು. ದ್ರಾವಿಡ ಛಂದಸ್ಸಿನ ಬಗೆಗೆ ಒಂದು ಪುಸ್ತಕ ಬರೆಯಲು ಆಲೋಚಿಸಿದ್ದರು. ಕುಮಾರವ್ಕಾಸ ಭಾರತ ವನ್ನು ಸಂಪಾದಿಸುತ್ತಿದ್ದರು. ಇದೆಲ್ಲ ಅವರು ತೀರಿಕೊಳ್ಳುವಾಗ ಯಾವಯಾವ ಹಂತ ಗಳಲ್ಲಿದ್ದವೋ ತಿಳಿಯದು. ಅವರ ಬಿಡಿಬರಹಗಳ ಸಂಖ್ಶ್ಕೆ ಒಂದು ಸಂಕಲನಕ್ಕೆ ಸಾಕಾಗು ವಷ್ಟಿದೆ. ಯಾರಾದರೂ ಈ ಪುಸ್ತಕಗಳ ಪ್ರಕಟಣೆಗೆ ಮುಂದೆ ಬಂದರೆ ಸಾಹಿತ್ಕಾಭ್ಕಾಸಿ ಗಳಿಗೆ ತುಂಬ ಉಪಕಾರ ಮಾಡಿದಂತಾಗುತ್ತದೆ. ಕುಕ್ಕಿಲರ ನೆನಪಿಗೆ ಮಾಡಬಹುದಾದ ಒಂದು ಕರ್ತವ್ಯದ ಕೆಲಸವೂ ಆಗುತ್ತದೆ.

ಕುಕ್ಕಿಲ ಕೃಷ್ಣಭಟ್ಟರು ವಿಶ್ವವಿದ್ಕಾನಿಲಯಗಳಲ್ಲಿ ಓದಲಿಲ್ಲ. ಅಧ್ಯಾಪಕ ವೃತ್ತಿ ನಡೆಸಲಿಲ್ಲ. ತೆಗೆದುಕೊಂಡ ಸಂಬಳಕ್ಕಾಗಿಯೋ, ವಾರ್ಷಿಕ ವರದಿಯ ಪುಟಗಳನ್ನು ತುಂಬುವುದಕ್ಕಾಗಿಯೋ ಸಂಶೋಧನೆ ಕೆಲಸವನ್ನು ಮಾಡಲಿಲ್ಲ. ಸ್ವಂತ ಆಸಕ್ತಿ, ಪ್ರೀತಿ ಗಳಿಂದ ತಮಗೆ ತೋರಿದ ರೀತಿಯಲ್ಲಿ ತಮ್ಮ ಪಾಲಿನ ಕೆಲಸವನ್ನು ಮಾಡಿದರು. ಸಾರ್ಥಕ ಜೀವನವನ್ನು ನಡೆಸಿದರು.


(ಪ್ರಜಾವಾಣಿ : ಆಗಸ್ಟ್‌ ೨೧, ೧೯೮೮)