ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ದೃಶ್ಯ ಪ್ರಯೋಗದ ಶಾಸ್ತ್ರೀಯತೆ / ೨೯

ಅಸಂಬದ್ಧ೦ ತು ಯಾಕ್ಯಂ ಅಸಂಬದ್ಧ ಮಥೋತ್ತರಂ ।
ಅಸತೃಲಾಪಿತಂ ಚೈವ ವೀಥ್ಯಾಂ ಸಮ್ಯಕ್ಷಯೋಜಯೇತ್ ।।
ಭಗವತ್ತಾಪಸಭಿಕ್ಷು ಪ್ರೋತ್ರಿಯವಿಪ್ರಾತಿಹಾಸ ಸಂಯುಕ್ತಂ ।
ನೀಚಜನಸಂಪ್ರಯುಕ್ತಂ ಪರಿಹಾಸಾಭಾಷಣ ಪ್ರಾಯಂ ।।

ಸುವಿಕೃತಭಾಷಾಚಾರಂ ವಿಶೇಷಹಾಸೋಪಹಾಸರಚಿತಪದಂ ।
ಲೋಕೋಪಚಾರಯುಕ್ತಾ ಯಾ ವಾರ್ತಾ ಯಾ ಚ ಡಂಭಸಂಯೋಗ: ।।
ತತ್ಸಹಸನೇ ಪ್ರಯೋಜ್ಯಂ ಧೂರ್ತವಿಟವಿವಾದ ಸಂಪನ್ನಂ ।v
(ಇವೆಲ್ಲ ಮುಖ್ಯ ಕಥಾರಂಭಕ್ಕೆ ಮೊದಲು ಪ್ರದರ್ಶಿಸಬೇಕಾದ ಹಾಸ್ಯಪ್ರಯೋಗಗಳು.) ಇದು ವೀಥಿ ಪ್ರಹಸನಗಳ ಸಂಕ್ಷಿಪ್ತ ಸಾಮಾನ್ಯ ಲಕ್ಷಣ, ನಮ್ಮ ಆಟದಲ್ಲಿ ಬರುವ ಸಿಂಗಿ ಸಿಂಗರಹಾಸ್ಯ ('ಶಿಂಗಕ) ಆಚಾರಿ ಭಟ್ಟನ ಹಾಸ್ಯ (ಪುರೋಹಿತನ ನಕಲಿ), ಒತ್ತೆ ಬೈರಾಗಿ ಹಾಸ್ಯ, ಹಿಂಡು ಬೈರಾಗಿ ಹಾಸ್ಯ, ಕೊರವಂಜಿ ಹಾಸ್ಯ, ಓಡಾರಿ ಹಾಸ್ಯ ಮುಂತಾದ ನಾನಾ ವಿಧದ ಹಾಸ್ಯಗಳು ನಾಟ್ಯ ಶಾಸ್ರೋಕ್ತ ಲಕ್ಷಣಕ್ಕೆ ಎಷ್ಟು ಸರಿಯಾಗಿ ಒಪ್ಪುತ್ತವೆ ಎಂಬುದನ್ನು ಗಮನಿಸಿರಿ.

ಭಾರತೀ ವೃತ್ತಿಯ ಲಕ್ಷಣ-

ಭಾರತೀ ಸಂಸ್ಕೃತಪ್ರಾಯೋ ವಾಗ್ ವ್ಯಾಪರೋ ನಟಾಶ್ರಯಃ ।
ಭೇದೈ: ಪ್ರರೋಚನಾ ಯುಕೈರ್ವೀಥೀ ಪ್ರಹಸನಾಮುಖ್ಯ: ।। ದಶರೂಪಕ
ವೃತ್ತಿ ನಿಯಮ ದಶರೂಪಕದಲ್ಲಿ :
ಶೃಂಗಾರೇ ಕೈಶಿಕೀವೀರೇ ಸಾಶ್ಚತ್ಯಾರಭಟೀ ಪುನಃ ।
ರಸೇ ರೌದ್ರೇ ಚ ಭೀಭತ್ಸ ವೃತ್ತಿ: ಸರ್ವತ್ರ ಭಾರತೀ ।

ಹಾಸ್ಯಕ್ಕೆ ವೃತ್ತಿ ನಿಯಮ ಹೇಳಿಲ್ಲ!

ಹೀಗೆ 'ಆಮುಖ'ದ ಹಾಸ್ಯ ಪ್ರಯೋಗವಾದ ಮೇಲೆ 'ಪ್ರಸ್ತಾವಕ'ನು ಬಂದು (ಅವನಿಗೆ ಕಥಾ ಪ್ರಸಂಗಿ ಎಂದೂ ಹೆಸರಿದೆ) ಮುಂದಿನ ಆಟದ ಕಥಾಭಾಗವನ್ನು ಪ್ರೇಕ್ಷಕರಿಗೆ ಹೇಳಿ ತಿಳಿಸಬೇಕೆಂದಿದೆ. ನಮ್ಮ ಆಟದಲ್ಲಿ ಈ 'ಕಥಾನುಸಾರ' ಹೇಳುವುದನ್ನು ಭಾಗವತನೇ ಮಾಡುತ್ತಾನೆ. ಆಮೇಲೆ ಯವನಿಕಾಂತರದಲ್ಲಿ ವೀರರಸದ ಪದ್ಯವೊಂದನ್ನು ಹೇಳಬೇಕು, ಅದರ ಬೆನ್ನಿಗೆ ವಾದಕರು ಶುಷ್ಕ ವಾದ್ಯಗಳನ್ನು ಬಾರಿಸಬೇಕು ಎಂದು ಶಾಸ್ತ್ರವಿಧಿ. 'ಶುಷ್ಕವಾದನ' ಎಂದರೆ ಗೀತವಿಲ್ಲದೆ ಬಾರಿಸುವುದು ಎಂದರ್ಥ, ನಮ್ಮ ಆಟದಲ್ಲಿಯೂ ಯಥಾಪ್ರಕಾರ ಭಾಗವತನು ಒಂದು ಭಾಮಿನಿಯನ್ನೂ, ವೃತ್ತವನ್ನೂ ಹೇಳಿ ಚೆಂಡೆಮದ್ದಳೆಗಳನ್ನು ತೆರೆ ಸೀರೆಯ ಹಿಂದೆ ಬಾರಿಸುತ್ತಾರೆ. ಇದಕ್ಕೆ ನಾವು ಪೀಠಿಕೆ ಹೊಡೆಯುವುದೆನ್ನುತ್ತೇವೆ. ಆ ಮೇಲೆ ವೇಷಗಳು ಬಂದು ಕ್ರಮದಂತೆ ತೆರೆಯನ್ನು ಸರಿಸಿ ರಂಗಪ್ರವೇಶ ಮಾಡಿ ಕುಣಿದು ತಮ್ಮ ಪಾತ್ರದ ಸ್ವಭಾವ ಪೌರುಷ ಪ್ರದರ್ಶನ ಮಾಡುವುದು; ಈ ಪ್ರವೇಶ ಕ್ರಮಕ್ಕೆ ನಾವು 'ಅಬ್ಬರ ತಾಳ' ಎನ್ನುತ್ತೇವೆ. ಈ ಕ್ರಮ ಮತ್ತು ಹೆಸರು ಎಲ್ಲವೂ ಶಾಸ್ರೋಕ್ತವಾದುದೇ ಆಗಿವೆ. ಭರತ ಕಲ್ಪಲತಾ ಮಂಜರಿಯ ಈ ಶ್ಲೋಕಗಳನ್ನು ಪರಿಶೀಲಿಸಿರಿ-

ಕುಶೀಲವೈರ್ಥ್ಯತ್ಮಿಯತೇ ನೃತ್ಯಾದೌ ತೂರ್ಯ ಘೋಷಣಂ ।
ತದಬ್ಬರಮಿತಿ ಪ್ರೋಕ್ತಂ ನಾಟ್ಯಶಾಸ್ತ್ರವಿಶಾರದ: ।।