ಪುಟ:ಕುರುಕ್ಷೇತ್ರ.djvu/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


94 ಲೇಬೇದಿನಿ ನಮ್ಮ ಕುಟುಂಬದ ಆಸ್ತಿಯಲ್ಲಿ ಚಿನ್ನ ಬೆಳ್ಳಿ ನಾಣ್ಯ ನಗದಾಗಿ ಇರುವ ಐದುಸಾವಿರ ರೂಪಾಯಿನಿಂದ ತೀರಿಸತಕ್ಕದ್ದು, ಎರಡನೇ ಪಟ್ಟಿಯಲ್ಲಿ ಕಂಡಿರುವಂತೆ ಸದರೀ ರಾಮಾಭಟ್ಟರಿಗೆ ಆರು ಸಾವಿರ ರೂಪಾಯಿ ಸಾಲಗಳು ಬರಬೇಕಾಗಿವೆ. ಈ ಮೊಬಲ ಗನ್ನು ನಮ್ಮಲ್ಲಿ ಹಿರಿಯನಾದ ರಾಮಣ್ಣನು ರಾಜೇ ದಾವಾ ಮುಂತಾದ ಉಚಿತವಾದ ಮಾರ್ಗಗಳಲ್ಲಿ ವಸೂಲಾಡತಕ್ಕದ್ದು, ಆತನ ಹೆಸರಿಗೆ ವಾರಸು ಸರ್ಟಿಫಿಕೇಟನ್ನು ಪಡೆದುಕೊಳ್ಳತಕ್ಕದ್ದು, ಇದಕ್ಕೆಲ್ಲ ಖರ್ಚಿಗಾಗಿ ನಗದು ಹಣದಿಂದ ಒಂದು ಸಾವಿರ ರೂಪಾಯಿಯನ್ನು ಆತನ ವಶಕ್ಕೆ ಕೊಡಬೇಕು, ವಸೂಲಾದ ಹಣವನ್ನು ನಾವು ಸಮವಾಗಿ ಹಂಚಿಕೊಳ್ಳುವುದು. ನಮ್ಮ ಚಿಕ್ಕತಾಯಿಯಾದ ಪಾರ್ವತಮ್ಮನವರಿಗೆ ಜೀವನಾಂಶ ಕ್ಯೂ ಆಕೆಯ ಮಗಳು ಸೀತಮ್ಮನ ಮದುವೆಗೂ ಎರಡು ಸಾವಿರ ರೂಪಯನ್ನು ಅವರ ವಶಕ್ಕೆ ಕೊಟ್ಟುಬಿಡುವುದು, ಆ ಮೊಬಲಗನ್ನು ಅವರು ಹೇಗೆ ಖರ್ಚುಮಾಡಿಕೊಂಡರೂ ನಮ್ಮ ಅಡ್ಡಿ ಇಲ್ಲ, ನಾವು ಆ ಖರ್ಚುಗಳ ಭಾರವನ್ನು ಮುಂದಕ್ಕೆ ವಹಿಸತಕ್ಕದ್ದಿಲ್ಲ. ಒಡವೆ ಪಾತ್ರೆ ಪದಾರ್ಥ ಮುಂತಾದ ಚರಸತನ್ನು ಸಮಾಂಶ ವಾಗಿ ಪಂಚಾಯತರು ಬೆಲೆ ಕಟ್ಟಿ ಪಟ್ಟಿಗಳನ್ನು ಮಾಡಿಕೊಟ್ಟಿದ್ದನ್ನು ನಾವೆಲ್ಲರೂ ಅಂಗೀಕರಿಸಿ, ಅವುಗಳ ಪ್ರಕಾರ ನಮ್ಮ ನಮ್ಮ ಪಾಲಿಗೆ ಬಂದ ಆರು ಸಾವಿರ ರೂಪಾಯಿನ ಸೊತ್ತನ್ನು ನಾವುನಾವು ಬೇರೇ ತೆಗೆ ದುಕೊಂಡಿದ್ದೇವೆ ; ನರಸಿಂಹನ ಸುತ್ತನ್ನು ಅವನ ತಾಯಿ ಪಾರ್ವತಮ್ಮ ನಾದ ನಾನು ಪಡೆದುಕೊಂಡಿದೇನೆ. ಮನೆ ಹೊಲ ಗದ್ದೆ ತೋಟಗಳು ಮುಂತಾದ ಸ್ಥಿರಸ್ಸತ್ತನ್ನು ಕೆಳಗೆ ಸೇರಿಸಿರುವ ಪಟ್ಟಿಗಳ ಪ್ರಕಾರ ಪ್ರತಿ ಒಬ್ದ ರೂ ಹತ್ತು ಸಾವಿರ ರೂಪಾಯಿ ಬಾಳುವ ಆಸ್ತಿಯನ್ನು ಪಡೆದಿದೇವೆ. ಈ ಪ್ರಕಾರದಲ್ಲಿ ನಾವೆಲ್ಲರೂ ಮನಃಪೂರ್ವಕವಾಗಿ ಒಪ್ಪಿ ನಮಗೆ ಇದುವರೆಗೂ ಇದ್ದ ಸಮಷ್ಟಿಯಾಗಿದ್ದ ಅರ್ಥ ಸಂಬಂಧವನ್ನು ತಪ್ಪಿಸಿ