ಪುಟ:ಕುರುಕ್ಷೇತ್ರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

163 ಲೇಖ್ಯಬೋಧಿನಿ 44, ಮೇಲೆ ತೋರಿಸಿರುವಂತೆ ಆಯಾ ದಿನ ನಡೆಯುವ ಜಮಾ ಖರ್ಚುಗಳನ್ನು ತೋರಿಸುವ ಲೆಕ್ಕವನ್ನು ರೋಜೆವಾರ ಬುಕ್ಕು ಅಥ ವಾ ದಿನಗಟ್ಟೆಯ ಲೆಕ್ಕದ ವಹಿ ಎಂದು ಹೇಳುತ್ತಾರೆ, ಇದರಲ್ಲಿ ದಿನಗಳ ಕ್ರಮಾನುಸಾರವಾಗಿ ನಡೆಯುವ ಲೇವಾದೇವಿಗಳನ್ನೆಲ್ಲಾ ತೋರಿಸ ಬೇಕು, ಮನೆಯ ಖರ್ಚಿಗೋಸ್ಕರ ಹಣಕೊಟ್ಟು ತೆಗೆದುಕೊಂಡ ಪದಾರ್ಥಗಳ ವಿಷಯವಾಗಿ ಬೇರೆ ಯಾವ ಲೆಕ್ಕದ ದಾಖಲೆಯ ಬೇ ಕಾಗುವುದಿಲ್ಲ. ಮೇಲಿನ ನಮೂನೆಯನ್ನು ನೋಡಿಕೊಂಡರೆ ಕೆಲವು ಸಾಲ ಕೊಟ್ಟಿರುವುದು, ಸಾಲ ತಂದಿರುವುದು ಈ ಪ್ರಮೇಯಗಳಿವೆ. ಇಂತಾ ವಿಷಯಗಳನ್ನು ಮಾತ್ರ ಬೇರೆ ಬುಕ್ಕಿನಲ್ಲಿ ಆಯಾ ಆಸಾಮಿಗಳ ಹೆಸರಿನ ಲೇವಾದೇವಿಯು ಬೇರೆ ಕಾಣುವಂತೆ ಬರೆದಿಟ್ಟರೆ ಸಾಕಾಗಿರು ವುದು, ನಗದು ಹಣ ಬಂದುದನ್ನು ಎಡಗಡೆಯ ಪಕ್ಕದಲ್ಲ, ನಗದು ಹಣ ಖರ್ಚಾದುದನ್ನು ಬಲಗಡೆಯ ಪಕ್ಕದಲ್ಲಿ ಬರೆದಿದೆ. ಶು, ೪ರಲ್ಲಿ ಅಂಗಡಿಯಲ್ಲಿ ಸಾಲವಾಗಿ ಪಂಚೆಯನ್ನು ತರಿಸಿಕೊಂಡಿರುವುದು ನಗದು ಜಮಾಖರ್ಚಲ್ಲವಾದುದರಿಂದ ಅದರ ಬೆಲೆಯನ್ನು ಈ ಸಾಲುಗಳಲ್ಲಿ ತೋರಿಸಿಲ್ಲ. ಲೆಕ್ಕದ ಕೊನೆಯಲ್ಲಿ ತೋರಿಸಿರುವಂತೆ ತಿಂಗಳಿಗೊಂದು ಸಲ ಗೋಪಾರೆಯನ್ನು ಬರೆದಿಟ್ಟರೆ, ಇಂತಿಂತಾ ಖರ್ಚು ಇಪ್ಪಾಗಿದೆ ಎಂದು ಸುಲಭವಾಗಿ ತಿಳಿಯಬರುತದೆ. ಆಸಾಮಿಗಳ ಹೆಸರಿನ ಮೇಲೆ ಇಡತಕ್ಕ ಖಾಸಗೀ ಲೆಕ್ಕದ ನಮೂನೆಯನ್ನು ಮುಂದೆ ತೋರಿಸಿದೆ.