ಪುಟ:ಕುರುಕ್ಷೇತ್ರ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

106 లోకజ్యట్విధినీ ಅಂಗಡಿಗಳಲ್ಲೆಲ್ಲಾ ಇಡಬಹುದಾದ ಲೆಕ್ಕಗಳ ನಮೂನೆಯನ್ನು ಬರೆ ದಿದೆ: ಅವುಗಳಲ್ಲಿ ಸಮಯೋಚಿತವಾದ ಬದಲಾವಣೆಯನ್ನು ಮಾಡಿಕೊಂ ಡರೆ, ಯಾವ ವ್ಯಾಪಾರಕ್ಕಾದರೂ ಸಾಕಾಗಿದೆಯೆಂದು ತೋರುತದೆ. 46, ಇದರ ಕೆಳಗೆ ಮೊದಲು ತೋರಿಸಿರುವ ನಮೂನೆಗಳು ರೋಜುವಾರ ಬುಕ್ಕು ಬಂದು, ಆಸಾಮಿವಾರ ವರ್ಗದಬಕ್ಕು ಒಂದು. ಎರಡನ್ನು ಮಾತ್ರ ಇಡುವುದಕ್ಕೆ ತಕ್ಕವುಗಳಾಗಿವೆ. ನಗದು ಜಮಾ ಖರ್ಚನ್ನೂ ಜಿನಸಿಯ ಜಮಾಖರ್ಚನ್ನೂ ಬೇರೆ ಬೇರೆ ರೋಜುವಾರ ಬುಕ್ಕಿನಲ್ಲಿಯೇ ತೋರಿಸಬೇಕು, ಅಂಗಡಿಯ ಲೆಕ್ಕಗಳು ದಾವೆಗಳಿಗೆ ಬೇಕಾಗಿ ಬರುವುದರಿಂದ ಇವುಗಳಲ್ಲೆಲ್ಲಾ ಇಂಗ್ಲೀಪ ತಾರೀಖೇ ಹಾಕುವುದು ಮೇಲು, ದಿನಗಳ ಕ್ರಮಾನುಸಾರವಾಗಿ ಬರೆಯಲ್ಪಡುವ « ರೊಜೆ ” ಬುಕ್ಕಿನಲ್ಲಿ ಯಾವ ತಾರೀಖಿನ ಲೆಕ್ಕವನ್ನು ಬೇಕಾದರೂ ಜಾ ಗತೆಯಾಗಿ ಹುಡುಕುವ ಹಾಗೆ ಇರುವಂತೆ ಪ್ರತಿ ಒಂದು ಪುಟದ ತಲೆಯ ಮೇಲೆಯೂ ಅದರಲ್ಲಿರುವ ಮೊದಲನೇ ವರ್ಷ ತಿಂಗಳು ಮತ್ತು ತಾರೀ ಖನ್ನು ಸ್ಪಷ್ಮವಾಗಿ ಬರೆಯಬೇಕು, ಮಧ್ಯೆ ಹಾಕುವ ತಾರೀಖಿನ ಅಂ ಕಿಗಳು ಲೆಕ್ಕದ ಇತರ ಅಂಕಿಗಳೊಡನೆ ಕಲೆತುಕೊಂಡು ಹೋಗದಂತ ಅವನ್ನು ಬೇರೆ ಕೆಂಪು ಶಾಯಿನಿಂದ ಬರೆಯುವುದರಿಂದಲೋ ಅಥವಾ ಅವುಗಳ ಕೆಳಗೆ ಗೆರೆ ಹಾಕುವುದು (ಜನವರಿ ೧೫) ಅಥವಾ ಎರಡು ಪಾರ್ಶ್ವಗಳಲ್ಲಿಯೂ ಗೀಟು ಹಾಕುವುದು (-೫-) ಮುಂತಾದ ಮಾ ರ್ಗಗಳಲ್ಲಿ ಬೇರೆ ಕಾಣುವಂತೆ ಬರೆಯಬೇಕು, ಪುಟದ ಮೇಲ್ಗಡೆಯಲ್ಲಿ ಇಸವಿ ತಿಂಗಳು ಹಾಕಿದರೆ ಆ ತಿಂಗಳು ಮುಗಿಯುವ ವರೆಗೂ ಆ ಪುಟ ದಳ್ಳಿ ಬರೀ ತಾರೀಖಿನ ಅಂಕಿಯನ್ನು ಬರೆದರೆ ಸಾಕಾಗಿರುವುದು,