ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಲೇಖ್ಯಬೋಧಿಸಿ ಕಾಗದಗಳಿಗೆಲ್ಲಾ ಎಲ್ಲಿಗೆ ಹೋಗಬೇಕೊ ಅಲ್ಲಿಯ ಭಾಷೆಯಲ್ಲಾಗಲಿ, ಇಂಗ್ಲಿಷಿ ಭಾಷೆಯಲ್ಲಾಗಲಿ ಮೇಲು ವಿಳಾಸವನ್ನು ಬರೆಯಬೇಕು. ಟಪಾಲೆ ಆಫೀಸುಗಳ ಉದ್ಯೋಗಸ್ಥರಿಗೆ ಅನೇಕ ಲಕೋಟೆಗಳನ್ನು ನೋಡಿ ವಿಂಗಡಿಸುವ ತೊಂದರೆ ಇರುವುದರಿಂದ ಅವರಿಗೆ ಬಹು ಜಾಗ್ರ ತೆಯಾಗಿ ತಿಳಿಯುವಂತೆ ಮೇಲುವಿಳಾಸವನ್ನು ಎಷ್ಟು ಪರಿಷ್ಕಾರವಾಗಿ ಬರೆದರೆ ಅಷ್ಟು ಒಳ್ಳೇದು. ಕುಶಲ. ಸ್ಟಂಪು. ಲಕ್ಷ್ಮೀನೃಸಿಂಹದೇವಸ್ಥಾನದ ಬಳಿ ಇರುವ ವೇ! ನರಸಿಂಹ ಭಟ್ಟರ ಸ| ಕ್ಕೆ: (ಮೈಸೂರು ಡಿ) ತಿರಮಕೂತ್ತು ನರ್ಸಿಪುರ. ಮೇಲೆ ಸುಮಾರು ಅರ್ಧಸ್ಥಳವನ್ನು ಬರಿದಾಗಿ ಬಿಟ್ಟಿರಬೇಕು. ಇದು ಕಣ್ಣಿಗೆ ಅಂದವಾಗಿ ಕಾಣುವುದಲ್ಲದೆ ಸ್ಟಾಂಪು ಹತ್ತಿಸುವುದಕ್ಕೂ ಪೋಸ್ಟಾಫೀಸಿನ ಮುದ್ರೆ ಒತ್ತುವುದಕ್ಕೂ ಅನುಕೂಲವಾಗಿರುವುದು. ಊರಿನ ಹೆಸರು ಕೆಳಗೆ ಹಾಕುವುದರಿಂದ ಪೋಸ್ಟಾಫೀಸಿನವರಿಗೆ ಕಾಗದ ವನ್ನು ಕಳುಹಿಸತಕ್ಕ ಸ್ಥಳದ ಹೆಸರು ಸುಲಭವಾಗಿ ಗೊತ್ತಾಗುವುದು ; ಕಾಗದ ತಲಪದೆ ಹೋಗುವುದಕ್ಕೆ ಕಾರಣ ಕಡಮೆಯಾಗುವುದು. ಪೋಸ್ಟಾಫೀಸಿನವರಿಗೆ ಸುಲಭವಾಗಿ ಕಾಣುವಂತೆ ಸ್ಟಾಂಪನ್ನು ಯಾವಾ ಗಲೂ ಮೇಲುವಿಳಾಸ ಬರೆದ ಕಡೆಯೇ ಹಚ್ಚಿ ಸಬೇಕು.