ಪುಟ:ಕುರುಕ್ಷೇತ್ರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಲೇಖ್ಯಬೋಧಿನಿ ಪೋಸ್ಟಾಫೀಸಿನ ವಿಷಯ. 19. ಕಾಗದಗಳನ್ನು ಪೋಸ್ಟಾಫೀಸಿನ ಮೂಲಕವಾಗಿ ಕಳುಹಿ ಸುವಾಗ ಅವುಗಳ ತೂಕಕ್ಕೆ ಸರಿಯಾದ ಸ್ಟಾಂಪನ್ನು ಹಾಕಬೇಕು. ಪೂರ್ವದಲ್ಲಿ ಟಪಾಲಿನ ಏರ್ಪಾಡೇನೂ ಆಗದೆ ಇದ್ದಾಗ ಒಂದು ಕಾಗದ ಕ್ರೋಸ್ಕರ ಬಹಳ ದ್ರವ್ಯವನ್ನು ಖರ್ಚು ಮಾಡಿ, ಒಬ್ಬ ಆಳನ್ನೇ ಕಳು ಹಿಸಬೇಕಾಗಿತ್ತು, ಈಗ ಈ ಭರತಖಂಡದೊಳಗೆ ಎಲ್ಲಿಂದ ಎಲ್ಲಿಗೆ ಆದರೂ ಕಾಲಾಣೆ ಅಥವಾ ಅರ್ಧಾಣೆಗೆ ಕಾಗದವನ್ನು ತಲಪಿಸಬಹುದು. ಈ ರೀತಿಯ ಸೌಲಭ್ಯ ಉಂಟಾಗಿರುವುದರಿಂದ ಅನೇಕ ಲಕ್ಷ ಕಾಗದಗಳು ಪ್ರತಿ ದಿನವೂ ಊರಿಂದೂರಿಗೆ ತೆರಳುತಿವೆ ; ಮತ್ತು ಇಷ್ಟು ಕಾಗದಗಳು ಹೆಚಿ ರುವುದರಿಂದ ಅದರಲ್ಲಿ ಹುಟ್ಟುವ ಹಣದಿಂದಲೇ ಸರ್ಕಾರದವರು ಈ ಇಲಾಖೆಯನ್ನೆಲ್ಲಾ ನಪ್ಪವಿಲ್ಲದೆ ಕಾಪಾಡಬಹುದಾಗಿದೆ. 20. ಕೆಲವು ಸಂವತ್ಸರಗಳಿಂದ ಈಚೆಗೆ ಟಪಾಲೆ ಮೂಲಕವಾಗಿ ಕಳುಹಿಸುವುದಕ್ಕೆ ಕಾಲಾಣೆ ಬೆಲೆಯುಳ್ಳ “ ಪೋಸ್ಟ್ ಕಾರ್ಡಿ ” ಎಂಬ ಚೀಟಿಗಳನ್ನು ಮಾಡಿದಾರೆ. ಇದರಲ್ಲಿ ಬರೆದಿರುವ ವಿಷಯವನ್ನು ಸಿಕ್ಕಿದ ವರು ಓದಿಕೊಳ್ಳುವುದಕ್ಕೆ ಸಾಧ್ಯವಾಗಿರುವುದರಿಂದ, ರಹಸ್ಯವಾಗಿರಬೇ ಕೆಂಬ ಸಂಗತಿಗಳನ್ನು ಇಂತಾ ಚೀಟಿಯ ಮೇಲೆ ಬರೆಯಕೂಡದು. ದೊಡ್ಡ ದೊಡ್ಡ ಪೋಸ್ಟಾಫೀಸಿನಲ್ಲಿ ಇಂತವು ಅನೇಕ ಬರುವುದರಿಂದ, ಅಲ್ಲಿಯ ಉದ್ಯೋಗಸ್ಥರು ಅವನ್ನು ಓದಿಕೊಳ್ಳಲಾರರು, ಆದರೆ ಯಾವು ವಾದರೂ ಅಲ್ಪ ಸಂಗತಿಗಳನ್ನು ಮಾತ್ರವೇ ಇವುಗಳಲ್ಲಿ ಬರೆಯಬಹುದು. ಮತ್ತು ಮರ್ಯಾದೆಗೆ ಅರ್ಹರಾಗಿಯಾಗಲಿ, ನಮಗಿಂತ ಮೇಲ್ಪಟ್ಟವರಾಗಿ ಯಾಗಲಿ ಇರುವವರಿಗೂ, ನಮಗೆ ವಿಶೇಷವಾಗಿ ಪರಿಚಯವಿಲ್ಲದವರಿಗೂ ಇಂತಾ ಚೀಟಿಗಳನ್ನು ಬರೆಯುವುದು ಅನುಚಿತ, ಈ ಪೋಸ್ಟ್ ಕಾರ್ಡು ಗಳ ಮುದ್ರೆ ಇರುವ ಕಡೆಯಲ್ಲಿ ಮೇಲುವಿಳಾಸ ಬರೆಯಲ್ಪಡಬೇಕು. ಪೋಸ್ಸು ಮುದ್ರೆಯಿಲ್ಲದ ಕಾರ್ಡುಗಳಿಗೆ ಕಾಲಾಣೆಯ ಸ್ಟಾಂಪನ್ನು ಹಚಿ ಸಿ ಅವನ್ನೂ ಹೀಗೆ ಉಪಯೋಗಿಸಬಹುದು,

  • 21. ಕಾಗದಗಳ ಲಕೋಟೆಗಳಿಗೆ ಒಂದು ರೂಪಾಯಿನ ತೂಕ