ಪುಟ:ಕುರುಕ್ಷೇತ್ರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಲೇಖ್ಯಬೋಧಿನಿ ದವರೆಗೆ ಅರ್ಧಾಣೆ, 1 ರೂಪಾಯಿನ ಮೇಲೆ 10 ರೂಪಾಯಿನ ತೂಕದ ವರೆಗೆ 1 ಆಣೆ, ಅದರ ಮೇಲೆ ಪ್ರತಿ 10 ರೂಪಾಯಿನ ತೂಕಕ್ಕೂ 1 ಆಣೆಯಂತೆ, ಸ್ಟಾಂಪುಗಳನ್ನು ಹಚ್ಚ ಬೇಕು, ತೂಕದಲ್ಲಿ ವಿಷಮವಾಗಿ ರೂಪಾಯಿನ ಭಿನ್ನಾಂಶ ಉಳಿದರೆ, ಆದನ್ನು 1 ರೂಪಾಯಿನಂತೆ ಭಾವಿಸಬೇಕು. 22, ಕಾಗದಗಳಿಗೆ ತಕ್ಕ ಸ್ಟಂಪನ್ನು ಹಾಕದಿದ್ದರೆ, ಅವನ್ನು ಪಡೆಯುವವರು ಎರಡರಷ್ಟು ಹಾಸಲನ್ನು ಕೊಡಬೇಕಾಗುವುದು, ಪರ ಜನರಿಗೆ ಕಾಗದಗಳನ್ನು ಬರೆಯುವಾಗ ಎಂದಿಗೂ ಸ್ಟಾಂಪನ್ನು ಸರಿಯಾ ಗಿ ಹಾಕದೆ ಕಳುಹಿಸಕೂಡದು, ಅರ್ಧಾಣೆಯನ್ನು ಖರ್ಚು ಮಾಡು ವುದು ಬಹಳ ದೊಡ್ಡದೆಂದು ಎಣಿಸುವವರು, ನಾವು ಓದಿಕೊಂಡರೆ ನಮಗೆ ಪ್ರಯೋಜನಕ್ಕೆ ಬರುವ ಸಂಗತಿಗಳನ್ನು ಕಾಗದದಲ್ಲಿ ಬರದಿರ ಲಾರರೆಂದು, ಯಾರಾದರೂ ಊಹಿಸಿಕೊಳ್ಳಬಹುದು, ಅದಲ್ಲದೆ, ಬರೀ ಲಕೋಟನ್ನು ಕಳುಹಿಸುವಾತನು ಅರ್ಧಾಣೆಗೆ ಗತಿಯಿಲ್ಲದವನೆಂತಲೆ ಅದನ್ನು ಓದಿಕೊಳ್ಳುವವನು ಬರೆದಿರುವವನ ಗಣನೆಯಲ್ಲಿ ಅರ್ಧಾಣೆ ಬಾಳಲಾರನೆಂತಲೋ, ಅರ್ಥವಾಗುವುದು, ಗುರ್ತಿಲ್ಲದವರಿಂದ ಯಾವ ಸಂಗತಿಯನ್ನಾದರೂ ತಿಳಿದುಕೊಳ್ಳಬೇಕೆಂದು ಕಾಗದ ಬರೆದರೆ, ಪ್ರತ್ಯು ತರಕ್ಕೋಸ್ಕರ ಒಂದು ಅರ್ಧಾಣೆಯ ಸ್ವಾಂಸನ್ನಾಗಲಿ, ತಮ್ಮ ಮೇ ಲುವಿಳಾಸವನ್ನು ಬರೆದಿರುವ ಅರ್ಧಾಣೆಯ ಲಕೋಟನ್ನಾಗಲಿ ಅದರೊ ಡನೆ ಇಟ್ಟು ಕಳುಹಿಸಬೇಕು. ಪೋಸ್ಟು ಕಾರ್ಡುಗಳು ಎರಡು ಜತೆ ಯಲ್ಲಿರುವವುಗಳನ್ನು ಹೀಗೆ ಕಳುಹಿಸಬಹುದು. 23. ಪೋಸ್ಟಾಫೀಸಿನ ಮೂಲಕ ಇಷ್ಟು ಕಾಗದಗಳು ಹೋ ಗುತ್ತಿದ್ದರೂ, ಸರಿಯಾಗಿ ತಲಪದೆಹೋಗುವ ಕಾಗದಗಳು ಬಹಳ ಕೊಂಚವಾಗಿವೆ. ಆದರೂ ತಲಪುವುದನ್ನು ನಿಕ ಯಪಡಿಸಿಕೊಳ್ಳಬೇ ಕಾದವರು, 2 ಆಣೆಯನ್ನು ಹೆಚ್ಚಾಗಿ ಕೊಟ್ಟು, ಕಾಗದಗಳನ್ನು ರಿಜಿ ಸ್ವ5 ಮಾಡಿಸಬಹುದು. ರಿಜಿಸ್ಟರ ಹಾಡಿಸಿದ ಕಾಗದಗಳಲ್ಲಿಯ ನೋಟು ಮುಂತಾದುವನ್ನಿಟ್ಟಿದ್ದು ಅವು ಕಳೆದು ಹೋದರೆ, ಪೋಸ್ಟಾಫೀಸಿನವರು ಅದಕ್ಕೆ ಜವಾಬ್ದಾರರಾಗುವುದಿಲ್ಲ. ಆದರೆ ಇಂತಾ ಕಾಗದಗಳನ್ನು ಈ ಉ ೧