ಪುಟ:ಕುರುಕ್ಷೇತ್ರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬ್ಯಬೋಧಿನಿ 19 ಹುಟ್ಟಿದ ದಿವಸ ತಲಪತಕ್ಕ ಕಾಗದ. ಶ್ರೀಮದಖಂಡಿತ ಲಕ್ಷಲಂಕೃತರಾದ ಮಿತ್ತಜನ ಮನೋರಂಜಕರಾದ. ತಮ್ಮ ಪ್ರಿಯಮಿತ್ರ ಸದಾನಂದನ ವಿಜ್ಞಾಪನೆ. ಉಭಯ ಕುಶಲೋಪರಿ.......ಈ ಶುಭದಿವಸಕ್ಕೆ ಮಿತ್ರದಿಜೃಂಡ ಲಕ್ಕೆ ಅಷ್ಟು ತಾಂತುವಿನೋಪಾದಿಯಲ್ಲಿ ತಾವು ಉದಯಿಸಿ ೫ ವರ್ಷ ಗಳು ಮುಗಿದವು. ಈ ಮಹೋತ್ಸವಕಾಲದಲ್ಲಿ ತಮ್ಮ ಹಿತಚಿಂತಕನಾ ದ ಸೇವಕನನ್ನು ಸ್ಮರಿಸಿಕೊಳ್ಳಲು ಇದರೊಡನೆ ಕಳುಹಿಸಿರುವ ಪುಸ್ತಕ ವನ್ನು ಸ್ವೀಕರಿಸಬೇಕೆಂದು ಬೇಡುವೆನು. ಇದರ ಮಲ್ಯವನ್ನು ರೂಪಾಯಿಗಳಲ್ಲಿ ಗಳಿಸಿದರೆ ಬಹಳ ಅಲ್ಪವಾದುದರಿಂದ ತಮ್ಮಂತಾ ಶ್ರೇಷ್ಠರಿಗೆ ಪರಿಗ್ರಹಯೋಗ್ಯವಾಗಿರಲಾರದು. ಕಳುಹಿಸಿದವನ ಭಕ್ತಿ ವಿಶ್ವಾಸದ ಪ್ರಮಾಣವನ್ನು ನೋಡಿ, ಅದರಂತೆ ಇದೂ ಅಪಾರವಾದು ದೆಂದು ಎಣಿಸಬಹುದಾದ ಕಾರಣ ತಮ್ಮ ಸನ್ನಿಧಾನಕ್ಕೆ ಧೈರ್ಯವಾಗಿ ಒಪ್ಪಿಸಿರುವೆನು. - ಇಂತಾ ಸಂತೋಷ ದಿವಸಗಳು ಅನೇಕ ಬರಬೇಕೆಂಬುವುದೂ ತಮ್ಮ ಆರೋಗ್ಯ ಐಶ್ವರ್ಯಾದಿಗಳು ದಿನೇ ದಿನೇ ಶುಕ್ಲಪಕ್ಷದ ಚಂದ ನಂತೆ ಹೆಚ್ಚು ತಿರಬೇಕೆಂಬುವುದೂ ಇವೇ ತಮ್ಮ ಮಿತ್ರ ಸದಾನಂದನ ಅನವರತ ಕೋರಿಕೆಗಳು ನೆಲ್ಲರು, ನಂದನ ಸಂವೈಶಾಖ ಬಗೆ ೪.