ಪುಟ:ಕುರುಕ್ಷೇತ್ರ.djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


20 ಲೇಬ್ಯಬೋಧಿನಿ ಡಿದ ಊರಿನ ವಿವರ. ನನ್ನ ಪ್ರಿಯಸಖಿಯಾದ ಅನಸೂಯೆಗೆ ಪ್ರಿಯಂವದೆಯು ಬರೆದು ಕಳುಹಿಸಿದ ಪ್ರೀತಿಪೂರ್ವಕವಾದ ವಿವರ. ನಮ್ಮ ಯಜಮಾನರೊಡನೆ ನಾನು ಶ್ರೀರಂಗಕ್ಕೆ ಈ ದಿನ ಬಂದು ತಲಪಿದೆನು, ರೈಲು ಈ ಊರಿಗೆ ಸರಿಯಾಗಿ ೧೧ ಘಂಟೆಗೆ ಬಂದು ಸೇರುತ್ತದೆ. ನಾವು ಬರುವಾಗ್ಗೆ ಈ ಊರಲ್ಲಿ ಒಬ್ಬರು ಉದ್ಯೋ ಗಸ್ಥರು ಅತ್ಯಾದರಣೆಯಿಂದ ನಮ್ಮನ್ನು ನಿರೀಕ್ಷಿಸಿಕೊಂಡಿದ್ದು, ಕಾವೇ ರೀ ತೀರದಲ್ಲಿ ಸಿದ್ದಪಡಿಸಿಟ್ಟಿದ್ದ ಬಿಡಾರಕ್ಕೆ ಕರೆದುಕೊಂಡುಹೋದರು. ತಿರುಚನಾಪಳ್ಳಿ ಎಂಬ ದೊಡ್ಡ ನಗರವೂ ಶ್ರೀರಂಗವೂ ಒಂದೇ ಪಟ್ಟಣ ವಾಗಿ ಕತಿವೆ. ಈ ಊರು ಬಹಳ ಗುಂಪನದ್ದು; ಈ ಮಳೆಗಾ ಲದಲ್ಲಿ ಮದ್ಯ ಮದ್ಯ ನೀರು ಬಹಳ ನಿಂತಿದೆ. ಯಜಮಾನರು ಇದು ಅನಾರೋಗ್ಯವೆಂದು ಹೇಳುತ್ತಾರೆ. ನಮ್ಮ ಸೀಮೆಯಿಂದ ಬರುವವರು ಈ ಶಖೆಯನ್ನು ತಡೆಯುವುದು ಬಹು ಕಮ್ಮ, ಅದಲ್ಲದೆ, ಬಹಳ ದೂಳು, ಬೀದಿಬೀದಿಯಲ್ಲಿ ರಸ್ತೆ ಕಾಂಗಾರಿ ಮುಂತಾದ್ದಕ್ಕೆ ಹಾಕಿರುವ ಮಣ್ಣು ಗುಡ್ಡೆಗಳು ಕಬ್ಬಿಣದ ಕೊಳಬಿಗಳು, ಇವೆಲ್ಲಾ ನೋಡಿದರೆ ಹೊರಗೆ ಹೋಗುವುದಕ್ಕೆ ಮನಸ್ಸೇ ಬರುವುದಿಲ್ಲ. ಜನರಾದರೋ “ ಲೋ ಡಬಡ '” ಎಂಬುದಾಗಿ ಮಾತಾಡಿಕೊಳ್ಳುತ್ತಾರೆ, ಅವರ ಮಾತು ನಮಗೆ ತಿಳಿಯದು, ನಮ್ಮ ಮಾತು ಅವರಿಗೆ ತಿಳಿಯದು, ನಮ್ಮ ಸೀಮೆಯಲ್ಲಿ ಕಪ್ಪಪಡುವ ಜಾತಿಯ ಜನರೂ ಕೂಡ ಅನೇಕರು ಲಕ್ಷಣವಾಗಿರುತ್ತಾರೆ. ಇಲ್ಲಿ ಹೆಂಗಸರಲ್ಲಿ ಚೆನ್ನಾಗಿ ಕಾಣುವವರು ಅಪೂರ್ವ, ಸ್ವಲ್ಪ ಬಟ್ಟೆ ಓರೆ ಯಾದರೆ ತಲೆ ಒಡೆದ ಹಾಗೆ ಆಗುತದೆಯಷ್ಮೆ, ಇಲ್ಲಿ ಹೆಂಗಸರು ಅರ್ಧ ಮೈ ಬಿಟ್ಟುಕೊಂಡೇ ತಿರುಗುತ್ತಾರೆ. ಪಾಪ ; ಈ ಶಖೆ ಅಂತಾದ್ದು, ಅವರುತಾನೇ ಏನು ಮಾಡಿಯಾರು? ಹೊರಗೆ ಹೇಗಾದರೂ ಇರಲಿ, ನಾವಿರುವ ಬಂಗಲೆ ಎಷ್ಟು ರಮ