ಪುಟ:ಕುರುಕ್ಷೇತ್ರ.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


36 ಲೇಬೇಬೋಧಿಸಿ ರು, ಕೆಲವರು ಒರಟುಜನರು ಸಮಾಧಾನವನ್ನು ಹೇಳಬೇಕೆಂದು ಹೋಗಿ ಘಾಯದ ಮೇಲೆ ಸೂಜಿಯನ್ನು ಚುಚ್ಚಿದಂತೆ ದುಃಖವನ್ನು ಉಕ್ಕಿಸುತ್ತಾರೆ, ಹೆಂಡತಿಯು ಸತ್ತಿರುವಾಗ ಆಕೆಯ ಗುಣವನ್ನು ನೆನದುಕೊಂಡು ಅಳುತ್ತಿರುವ ಗಂಡನಿಗೆ ಹಳೇ ಜೋಡು ಹೋದರೆ ಹೊಸಜೋಡನ್ನು ನೆಟ್ಟು ಕೊಳ್ಳಬಹುದೆಂದು ಹೇಳುವ ನರಮೃಗ ಗಳೂ ಕೂಡಾ ಈ ಪ್ರಪಂಚದಲ್ಲಿ ಕೆಲವರು ಇರುತ್ತಾರೆ. ಲೇವಾದೇವಿಯ ಸಂಬಂಧದ ಕಾಗದಗಳು. ಸಾಲವನ್ನು ಕೇಳುವುದು. ರಾಜಮಾನ್ಯರಾಜಶ್ರೀ ಸುಬ್ಬಶೆಟ್ಟರವರ ಸಗಿ ಕೈ. ಗೋವಿಂದಯ್ಯನ ವಿಜ್ಞಾಪನೆ-ಈ ವರೆಗೆ ಉಭಯ ಕ್ಷೇಮೋಪರಿ. ನಾನು ಈ ಊರಿನ ಸವಿಾಪದಲ್ಲಿ ಒಂದು ಜವಿಾನನ್ನು ತೆಗೆದು ಕೊಳ್ಳಬೇಕೆಂದಿದ್ದೇನೆ, ನನ್ನಲ್ಲಿ ನಗದಾಗಿರುವ ಹಣ ಸಾಲದೆ ಇರುವುದ ರಿಂದ, ತಮಗೆ ಅನಾನುಕೂಲ ಉಂಟಾಗದೆ ನನಗೆ ಒಂದು ಸಾವಿರ ರ ಪಾಯನ್ನು ಒಂದು ತಿಂಗಳವರೆಗೆ ಸಾಲವಾಗಿ ಕೊಟ್ಟಿದ್ದರೆ ತಮ್ಮ ಉಪ ಕಾರವನ್ನು ಬಹಳವಾಗಿ ಸ್ಮರಿಸಿಕೊಳ್ಳುತೇನೆ. ತಮ್ಮ ಹಣವನ್ನು ಸರಿ ಯಾಗಿ ಪಾವತಿ ಮಾಡುವುದಲ್ಲದೆ ವಾಡಿಕೆಯ ಪ್ರಕಾರ ಕೊಡತಕ್ಕೆ ಬಡ್ಡಿ ಯನ್ನು ಕೊಡುತೇನೆ. ಈ ವಿವರ ತಮ್ಮ ಅಂತಃಕರಣಕ್ಕೆ ಸರಿತಂದು ನನ್ನ ಸಮಯಕ್ಕೆ ತಕ್ಕ ಸಹಾಯವನ್ನು ಮಾಡಬೇಕೆಂಬುವುದು, ತಮ್ಮ ವಿಧೇಯನಾದ ಗೋವಿಂದಯ್ಯನ ವಿಜ್ಞಾಪನೆ ತಿರಸೂರು, ೧೧ನೇ ೫೯, ೧vr