ಪುಟ:ಕುರುಕ್ಷೇತ್ರ.djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


38 ಲೇಬೇಬೋಧಿನಿ ಕಾಗದಗಳಲ್ಲಿ ೨೫ ರೂಪಾಯಿ ಸಾಲವಾಗಿ ಕೊಡಬೇಕೆಂದು ಬರೆಯೋ ಣವಾಗಿದೆ. ನನಗೂ ತಮಗೂ ಲೇವಾದೇವಿ ನಡಿಸುವಷ್ಟು ಪರಿಚಯ ಉಂಟಾಗಿದೆ ಎಂದು ತಾವು ಊಹಿಸಿದ್ದು ನೋಡಿ, ನನಗೆ ಆಶ ರ್ಯವಾ ಗುತ್ತದೆ. ಒಂದೆರಡು ಸಲ ಮಾತ್ರವೇ ನೋಡಿರುವವರಿಗೆಲ್ಲ ನಾನು ಸಾಲಕೊಡುವುದನ್ನು ಮೊದಲುಮಾಡಿದರೆ ನನ್ನ ಆಪ್ತಸ್ನೇಹಿತರಿಗೆ ನಾನು ಸಹಾಯಮಾಡುವುದು ಹೇಗೆ ? ತಮ್ಮಂತಾ ದೊಡ್ಡಮನುಪ್ಪರಿಗೆ ನೆನ್ನೆ ಮೊನ್ನೆ ಯ ಪರಿಚಯಸ್ಥರಿಗಿಂತ ಆಪ್ತರಾದ ಸ್ನೇಹಿತರು ಯಾರೂ ಇಲ್ಲ ವೆಂದು ನಂಬಲಾರೆನು. ಅದು ಹೇಗಾದರೂ ಇರಲಿ ; ಈಗ ಸಾಲವನ್ನು ಕೊಡಲು ನನಗೆ ಅನುಕೂಲವಾಗಿಲ್ಲವಾದ್ದರಿಂದ ಕ್ಷಮಿಸಬೇಕು. ತಮ್ಮ ವಿಧೇಯ | ರಂಗಣ್ಣನ ವಿಜ್ಞಾಪನೆ. (ಊರು, ತಾರೀಖು) ೧ಂ ಸಾಮಾನುಗಳನ್ನು ಕಳುಹಿಸಬೇಕೆಂದು ಕೇಳುವುದು, ಬೆಂಗಳೂರಲ್ಲಿರುವ ಜವಳ ಸಾಹುಕಾರರು ಮ# ಲಿಂಗಣ್ಣನವರ ಸಚ ಹೈ. ಬಳ್ಳಾರಿಯಲ್ಲಿರುವ ಜವಳಿ ಅಂಗಡಿ ಮಲ್ಲಣ್ಣನ ಶರಣಾರ್ತಿ, ಈ 'ವರೆಗೆ ಉಭಯಕ್ಷೇಮೋಪರಿ ; ಬೆಂಗಳೂರು ಪ್ರಾಂತ್ಯದ ಜವಳಿ ಇಲ್ಲಿ ಖರ್ಚಾಗುವುದೆಂದು ತೋ ರಿ ಅಲ್ಲಿಂದ ತರಿಸಿಕೊಳ್ಳಬೇಕೆಂಬ ಕುತೂಹಲವಿದೆ. ಅಲ್ಲಿಂದ ಕಳುಹಿ ಸತಕ್ಕ ವರ್ತಕರು ನಮಗೆ ಯಾರೂ ಇದುವರೆಗೂ ಗೊತ್ತಾಗಿರಲಿಲ್ಲವಾ ಗಿ ಇಲ್ಲಿ ನಮ್ಮ ಸಾಹುಕಾರರು ಮ| ರತ್ನ ಮೊದಲಿಯಾರವರು ತಮ್ಮ ವಿಷಯವಾಗಿ ನಮಗೆ ಬಹಳ ಭರವಸೆಯನ್ನು ಹೇಳಿರುವುದರಿಂದ ತಮ್ಮ ಸನ್ನಿಧಾನಕ್ಕೆ ಬರೆದಿದ್ದೇನೆ. ಸದ್ಭತಿ ತರಹವಾರಾಗಿ ಅಲ್ಲಿನ ಜವಳಿಯನ್ನು