ಪುಟ:ಕುರುಕ್ಷೇತ್ರ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬೋಧಿನಿ 37 ಅಜಮಾಯಿಸಿ ಎಗ್ಗೆ ೧,000 ರೂಪಾಯಿನವರೆಗೆ ರೈಲ್ವೇ ಮೂಲಕ ಕಳುಹಿಸಿಕೊಟ್ಟಲ್ಲಿ ಅದನ್ನು ಖರ್ಚುಮಾಡಿ ನೋಡಿಕೊಂಡು, ಮುಂ ದಕ್ಕೆ ಬೇಕುಬೇಕಾದ ಹಾಗೆಲ್ಲಾ ತರಿಸಿಕೊಳ್ಳುತ ಬರುತ್ತೇನೆ, ನನ್ನ ವಿಷಯವಾಗಿ ಅಲ್ಲಿಯ ತರಗಿನಮಂಡಿ ಬೊಮ್ಮಸಂದ್ರದ ವೀರಣ್ಣ ಶೆಟ್ಟ ರನ್ನು ವಿಚಾರಿಸಿ ತಿಳಿದುಕೊಳ್ಳಬಹುದು. ಈ ವಿಷಯದಲ್ಲಿ ಜಾಗ್ರತೆಯಾಗಿ ಪ್ರತ್ಯುತ್ತರವನ್ನು ಬೇಡುವ ಮಲ್ಲಣ ನ ಶರಣಾರ್ತಿ ಬಳ್ಳಾರಿ, ಶುಕ್ರವಾರಪೇಟೆ, ೧೪ನೇ ಲೈ, ೧ರ್v೩. ೧೧ ಇದಕ್ಕೆ ಉತ್ತರ, ಬೆಂಗಳೂರು, ೦೫ನೇ ಜಲೈ ೧v೯೩. ಬಳ್ಳಾರಿಯಲ್ಲಿರುವ ಜವಳಿ ಅಂಗಡೀ ಸಾಹುಕಾರರು ರಾಜಮಾನ್ಯ ರಾಜಶ್ರೀ ಮಲ್ಲಣ್ಣನವರ ಸ| ಕೈ. ಬೆಂಗಳೂರು ಲಿಂಗಣ್ಣನ ಶರಣಾರ್ತಿ ಈ ವರೆಗೆ ಉಭಯ ಕ್ಷೇಮೋಪರಿ : ತಮ್ಮ ಬಾಬತು ಈ ತಿಂಗಳು ೧೪ನೇ ತಾರೀಖಿನ ಕಾಗದದ ಪ್ರಕಾರ ಇದರಲ್ಲಿಟ್ಟಿರುವ ಪಟ್ಟಿಯಲ್ಲಿರುವಂತೆ ಜವಳಿಯನ್ನು ಈ ದಿವಸ ತಮ್ಮ ಸನ್ನಿಧಾನಕ್ಕೆ ರವಾನಿಸಿದ್ದೇನೆ. ನಮಗೆ ಪರಮಾಪ್ತರಾದ ರತ್ನ ಮೊದಲಿಯಾರವರೂ ವೀರಣ್ಣ ಶೆಟ್ಟರೂ ಇಬ್ಬರೂ ತಮ್ಮ ಯೋಗ್ಯತೆಯ ವಿಷಯವಾಗಿ ಬಹಳ ಹೇಳಿರುತ್ತಾರೆ, ತಮ್ಮಂತಾ ದೊಡ್ಡ ಮನುಷ್ಯ ರೊಂದಿಗೆ ಲೇವಾದೇವಿ ನಡಿಸಲು ನಮಗೆ ಬಹಳ ಸಂತೋಪ್ರವಾಗಿದೆ.