ಪುಟ:ಕುರುಕ್ಷೇತ್ರ.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ఆజ్యజeధినీ 89 ರೆಗೂ ಅದು ಮೊದಲುಗೊಂಡು ಒಂದು ವರ್ಷ ನಾನು ಜವಾಬ್ದಾರನಾಗಿ ರುತೇನೆ. ತಮ್ಮಂತ ಸಕಲವೂ ತಿಳಿದವರಿಗೆ ಇನ್ನು ವಿಶೇಷ ಬರೆಯತಕ್ಕದೇನು? ಇಂತೀ ವಿನಯಾರ್ಥ. ೧೬. ಸರಕುಗಳಲ್ಲಿ ತಪ್ಪು ತೋರಿಸುವುದು, ರಾಗಿ ರಾ| ಸಾಹುಕಾರ ಲಿಂಗಣ್ಣನವರ ಸ|| ಕ್ಕೆ. ಉಭಯ ಕ್ಷೇಮೋಪರಿ. ತಾವು ನೇ ತಾರೀಖಿನಲ್ಲಿ ಬೆಂಗಳೂರಿಂದ ರವಾನಿಸಿದ ಜವಳಿಯ ಮೂಟೆಯು ಬಂದು ತಲಪಿತು, ನಾವು ಕಳುಹಿಸಿದ ಕಾಗದದಂತೆ ಸರಿ ಯಾಗಿಲ್ಲವಾದ್ದರಿಂದ ಅದನ್ನು ಅಮಾನತ್ತಾಗಿಟ್ಟು, ತಮಗೆ ತಿಳಿಯಪಡಿಸಿ ದೇನೆ, ಅಂಚು ತಿರುಗಿರುವ ಪುಟಾಣಿ ಸೀರೆಗಳನ್ನು ಕಳುಹಿಸಬೇ ಕೆಂದು ಬರೆದುದಕ್ಕೆ ಬೇರೆ ತರಹಾದವನ್ನು ಕಳುಹಿಸೋಣವಾಗಿದೆ. ಇವು ಇಲ್ಲಿ ಸುಲಭವಾಗಿ ಖರ್ಚಾಗುವುದಿಲ್ಲ. ಆದರೆ ನನಗಿಗೆ ತಮ್ಮ ಪಟ್ಟಿಯಲ್ಲಿ ನಮೂದಿಸಿರುವ ಬೆಲೆಗೆ ೨ ರೂಪಾಯಿನಂತೆ ಕಮ್ಮಿ ಮಾಡಿ ದರೆ ಅವನ್ನು ಇಲ್ಲಿಯೇ ಇಟ್ಟುಕೊಳ್ಳುವೆವು, ರೇಷ್ಮೆ ರುಮಾಲುಗ ೪ಲ್ಲಿ ಹಾಕಿರುವ ಸರಿಗೆಯ ರೇಷ್ಮೆಯ ಬಹಳ ಕಿರದಾದುದರಿಂದ ಅವುಗಳಲ್ಲಿಯೂ ಸೇಕಡಾ ೫ ರೂ. ನಂತೆ ತಮ್ಮ ಪಟ್ಟಿಯ ಖರೀದಿ ಯಲ್ಲಿ ಕಮ್ಮಿ ಮಾಡಬೇಕು. ಇದಕ್ಕೆ ತಮ್ಮ ಉತ್ತರ ಬರುವ ವರೆಗೆ ತಮ್ಮ ಮಾಲುಗಳನ್ನು ಅಮಾನತ್ತಾಗಿ ನಿಲ್ಲಿಸಿಕೊಂಡಿದ್ದೇವೆ, ಕೃತವಿರಬೇಕು. ಮಲ್ಲಣ್ಣನ ವಿಜ್ಞಾಪನೆ ಬಳ್ಳಾರಿ, ೧ನೇ ಸೆಪ್ಟಂಬರಿ, ೧vre