ಪುಟ:ಕುರುಕ್ಷೇತ್ರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಬ್ಬೋಧಿಸಿ M ೧೪. ಇದಕ್ಕೆ ಉತ್ತರ. ಮ|| ಜವಳಿ ಅಂಗಡಿ ಸಾಹುಕಾರರು ಮಲ್ಲಣ್ಣನವರ ಸ ಕೈ, ಸೇವಕ ಲಿಂಗಣ ನ ಶರಣಾರ್ತಿ. ಸೆಪ್ಟೆಂಬರ ೪ನೇ ತಾರೀಖಿನವರೆಗೆ ಉಭಯ ಕ್ಷೇಮೋಪರಿ : ಇದೇ ತಿಂಗಳು ೨ನೇ ತಾರೀಖಿನ ತಮ್ಮ ಕಾಗದವನ್ನು ನೋಡಿ, ನನಗೆ ಬಹಳ ಆಶ್ಚ ರ್ಯವಾಯಿತು, ನಮಗೆ ಪರಸ್ಥಳದ ಗಿರಾಕಿಗಳು ತಮ್ಮಂ ತಾ ದೊಡ್ಡ ಮನುಷ್ಯರು ಅನೇಕರಿದಾರೆ. *ಇದುವರೆಗೆ ನಾವು ಕಳು ಹಿಸಿದ ಸರಕುಗಳ ವಿಷಯವಾಗಿ ಯಾರೂ ಇಂತಾ ಆಕ್ಷೇಪಣೆಗಳನ್ನು ಮಾಡಿದ್ದಿಲ್ಲ, ನಾವು ಕಳುಹಿಸಿರುವ ಮಾಲುಗಳಲ್ಲಾ ತಮ್ಮ ಕಾಗದದಲ್ಲಿ ಕೇಳಿದುದಕ್ಕೆ ಅನುಸಾರವಾಗಿಯೇ ಇವೆ. ರುಮಾಲುಗಳಿಗೆ ಹಾಕಿರುವ ರೇಷ್ಮೆಯೂ ಸರಿಗೆಯ ಈ ಊರು ಪೇಟೆಯಲ್ಲಿ ಆ ತರಹದ ಸನಗಿಗೆ ಮಾಮೂಲೆ ಮೇರೆಗೆ ಹಾಕತಕ್ಕವೇ ಆಗಿವೆ. ಹೀಗಿರಲು, ತಮ್ಮ ಕೊರಿ ಕೆಯ ಪ್ರಕಾರ ಖರೀದಿಯ ದರವನ್ನು ಕಡಮೆ ಮಾಡತಕ್ಕದ್ದಕ್ಕಾಗಲಿ ಮಾಲನ್ನು ವಾಪಸು ತರಿಸಿಕೊಳ್ಳುವುದಕ್ಕಾಗಲಿ ಕಾರಣವಿಲ್ಲ. ನಮಗೆ ತಮಗೆ ಇದುವರಿಗೆ ನಡೆದು ಬಂದಿರುವ ಬಳಕೆಯಲ್ಲಿ ಈ ವಿಷಯವಾಗಿ ವೈಷ್ಣಮೃವನ್ನು ಬೆಳೆಸಬೇಕೆಂಬ ತಾತ್ಪರ್ಯವಿಲ್ಲ. ನಾವು ಮಾಡಿರುವುದರಲ್ಲಿ ಏನೂ ಹೆಚ್ಚು ಕಡಮೆ ಇಲ್ಲವೆಂಬ ನಂಬುಗೆ ಸಂಪೂ ರ್ಣವಾಗಿರುವುದರಿಂದ, ಈ ವಿಷಯಕ್ಕೆ ಸಂಬಂಧಪಟ್ಟ ಕಾಗದಪತ್ರಗಳ ನೆಲ್ಲಾ ನಮ್ಮ ಆಪ್ತರಾಗಿರುವ ರತ್ನ ಮೊದಲಿಯಾರಲ್ಲಿ ಕಳುಹಿಸಿದೇನೆ. ಅಲ್ಲಿನ ದೊಡ್ಡ ಮನುಷ್ಯರು ನಾಲ್ವರು ಸೇರಿ, ಈ ವಿಷಯದಲ್ಲಿ ಹೇಗೆ ಮಾಡಿದರೆ ಹಾಗೆ ಒಪ್ಪಬೇಕೆಂದು ಅವರಿಗೆ ಬರದಿದೇನೆ. ಆದ್ದರಿಂದ ತಮಗೆ ಪಂಚಾಯಿತಿಮಾಡಿ ಫೈಸಲ್ಮಾಡಿಕೊಳ್ಳುವುದಕ್ಕೆ ಇತ್ಮವಿದ್ದರೆ, ಸದರಿ ರತ್ನಮೊದಲಿಯಾರವರಿಗೆ ತಿಳಿಯಪಡಿಸಬೇಕು. ಇಂತೀ ಕರಕಾಲಿ