ಪುಟ:ಕುರುಕ್ಷೇತ್ರ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೆಬೋಧಿನಿ ಯಲ್ಲಿ ಮಕ್ಕಳೊಡನೆ ಇದ್ದು ಕೊಂಡಿರುವ ನಿಮಗೆ ನನ್ನನ್ನು ಬಿಟ್ಟಿರುವು ದಿಷ್ಟು ಕಷ್ಮವಾಗಿ ತೋರಿದರೆ, ಇಲ್ಲಿ ಗ್ರಾಮೈಕರಾತ್ರಿಯಾಗಿ ಮನೆಬಾ ಗಿಲು ಬಿಟ್ಟು, ಅಲೆಯುತಿರುವ ನನಗಿನ್ನೆಷ್ಟು ತೊಂದರೆಯಾಗಿರಬೇಕು ? - ಇದರಲ್ಲಿ ಕಮ್ಮವಿದ್ದರೂ ಸುಖವೂ ಇಲ್ಲವೆಂದು ಹೇಳುವುದಕ್ಕಿಲ್ಲ. ಇಲ್ಲಿ ದಾರಿಯ ಮೇಲೆ ಹೋಗುವಾಗ ಕೆಲವು ಕಾಡುಗಳು ಸಿಕ್ಕುತವೆ; ಅವುಗಳ ರಮಣೀಯತೆಯನ್ನು ವರ್ಣಿಸುವುದಕ್ಕೆ ಆಗುವುದಿಲ್ಲ, ಒಂದು ಮೈಲಿ ಎರಡು ಮೈಲಿ ದೂರಗಳ ವರೆಗೂ ಗಿಡಗಳ ಮೇಲೆಯೇ ನಡೆದು ಕೊಂಡು ಹೋಗಬಹುದು ; ಅಷ್ಟು ಒತ್ತಾಗಿವೆ. ಗಿಡಗಳ ಎತ್ತರವನ್ನು ದೂರದಿಂದ ನೋಡಿದರೆ ಅವೆಲ್ಲಾ ಬೆಟ್ಟದ ಮೇಲೆ ಬೆಳದು, ಮೇಲಿನ ಭಾಗಮಾತ್ರ ಕಾಣಬರುತ್ತಿದೆಯೋ ಎಂಬಹಾಗೆ ತೋರುತ್ತವೆ. ಅಲ್ಲಲ್ಲಿ ಜಿಂಕೆಗಳು ಹಿಂಡುಹಿಂಡಾಗಿ ಓಡುತಿವೆ ; ಕೆಲವು ಕಡೆ ಕಾಡುಕೋಣ ಗಳು ಕಾಣುತವೆ, ಒಂದುಸಾರಿ ೪೦-೫೦ ಆನೆಗಳ ಗುಂಪು ಬಹಳ ಹತ್ತರ ಹೋಯಿತು. ಮೊನ್ನೆ ಮಧ್ಯಾಹ್ನ ಕಾಡೆಲ್ಲಾ ಸುತ್ತಿಕೊಂಡು ಹೋಗುವಾಗ ಒಂದು ತಿಳಿನೀರಿನ ಕೊಳದ ಬಳಿಯಲ್ಲಿ ಅಡಿಗೆ ಸಿದ್ದ ಮಾಡಿಕೊಂಡಿದ್ದರು. ಆ ಕೊಳದ ಅಂದವನ್ನು ನಮ್ಮ ಪ್ರಾಂತ್ಯದಲ್ಲಿ ನೋಡಬೇಕೆಂದರಾಗುವ ದಿಲ್ಲ, ಸೂಜೆಯನ್ನು ಒಳಗೆ ಹಾಕಿದರೆ ಮೇಲಕ್ಕೆ ಕಾಣುತಿರುವುದು, ಅಲ್ಲಿ ಸ್ನಾನಮಾಡಿ, ಆ ಕೊಳದ ಪಾವಟಿಗೆಯ ಮೇಲೆ ಊಟಕ್ಕೆ ಕೂತು ಕೊಂಡಾಗ, ಪರಮ ಸುಖಕ್ಕೆ ನನ್ನ ಸುಂದರಿಯು ನನ್ನ ಸವಿಾಪದಲ್ಲಿಲ್ಲ ವಲ್ಲ ಎಂಬ ಯೋಚನೆಯೊಂದೇ ಕೊರತೆಯನ್ನುಂಟುಮಾಡುತಿತ್ತು, ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಂಡಿರಬೇಕು, ಅವರಿಲ್ಲ ರಿಗೂ ಆಡುವ ಸಾಮಾನುಗಳ ಎರಡು ಹೊರೆಯನ್ನು ಕೂಡಿಸಿಟ್ಟಿದೇನೆ, ಅದಲ್ಲದೆ ಒಂದು ಮುದ್ದಾದ ಜಿಂಕೆಯ ಮರಿಯನ್ನೂ ಎರಡು ನವಿಲುಗ ಳನ್ನೂ ತರುತೇನೆ. - ಶಾಪ: ಆ ಬೋರಿಗೆ ನೀನು ಎಷ್ಟು ಉಪಕಾರ ಮಾಡಿದರೂ ನನಗೆ ಸಂತೋಷವೇ,