ಪುಟ:ಕುರುಕ್ಷೇತ್ರ.djvu/೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


51 ಲೇಖ್ಯಬೋಧಿನಿ ದಿಂದಲೇ, ಕೋಟನವರು ಅವನ ಕಡೆ ತೀರ್ಪು ಮಾಡುವುದಕ್ಕಿಲ್ಲ. ಆದರೆ ಬಡವರಿಗೋಸ್ಕರ ಯಾವುದಾದರೂ ಒಂದು ಧರ್ಮವನ್ನು ಕಲ್ಪಿಸಿ ರುವ ಸಂದರ್ಭದಲ್ಲಿ ಅದರ ಪ್ರಯೋಜನವನ್ನು ಪಡೆಯಬೇಕೆಂದು ಕೇಳಿ ಕೊಳ್ಳುವಾತನು ತನ್ನ ಅರ್ಜಿಯಲ್ಲಿ ತಾನು ದೊಡ್ಡ ಸಂಸಾರಿಯೆಂದು ಬರೆದುಕೊಳ್ಳುವುದು ಅನುಚಿತವಲ್ಲ. ಇದಲ್ಲದೆ, ಫಿರಾದು ಹೇಳಿಕೊಳ್ಳು ವವನಿಗೆ ತನ್ನ ಫೆರಾದೇ ದೊಡ್ಡದಾದರೂ, ಅದನ್ನು ಓದಿಕೊಳ್ಳುವ ಅಧಿ ಕಾರಿಗೆ ಇಂತಾ ಅನೇಕ ಕಾಗದಗಳು ಬರುವುದರಿಂದ ಇವುಗಳಲ್ಲಿ ಅನಾ ವಶ್ಯಕವಾದ ಸಂಗತಿಗಳನ್ನು ಬಹಳವಾಗಿ ಬರೆದಿದ್ದರೆ ಅದು ಆತನಿಗೆ ಸಮರ್ಪಕವಾಗಿರಲಾರದು. 26. ಸಾಧಾರಣವಾದ ಕಾಗದಗಳಿರುವಂತೆಯೇ, ಅರ್ಜಿಗಳು ಮುಂತಾದವುಗಳಲ್ಲಿಯೂ ಯಾರಿಗೆ ಬರೆಯಬೇಕೋ ಆ ಉದ್ಯೋಗ ಸ್ಥರ ಗೌರವಕ್ಕೆ ತಕ್ಕ ಒಕ್ಕಣೆಯನ್ನು ಅನುಸರಿಸಿಬರೆಯಬೇಕು, ದಾವಾ ಅರ್ಜಿಗಳು ಅಂದರೆ ಸಿವಿಲ್ ಕೋರ್ಟುಗಳಿಗೆ ಸುಲಾ ಮುಂತಾದ್ದನ್ನು ಬರಮಾಡಿಕೊಳ್ಳಲಿಕ್ಕೆ ಬರೆಯಲ್ಪಡತಕ್ಕೆ ಅರ್ಜಿಗಳು, ಫಿರಾದು ಅರ್ಜಿ ಗಳು ಅಂದರೆ ಕ್ರಿಮಿನಲ್ ಕೋರ್ಟುಗಳಿಗೆ ಬರೆದುಕೊಳ್ಳತಕ್ಕ ಅಜಿ ಗಳು, ಇವನ್ನು ಬರೆಯುವಾಗ, ಸ್ವಲ್ಪ ಮಟ್ಟಿಗೆ ತಕ್ಕ ಕಾನೂನುಗಳು ತಿಳಿದಿರಬೇಕು, ಅರ್ಜಿಗಳಿಗೆ ತಕ್ಕ ಸ್ವಾಂಪುಗಳನ್ನು ಹಾಕಬೇಕು. ಮುಲ್ಕಿ ವಿಷಯಗಳಲ್ಲಿ ತಕ್ಕ ಅಧಿಕಾರಿಗಳಿಗೆ ಬರೆದುಕೊಳ್ಳುವ ಅರ್ಜೆಗ. ಳಲ್ಲಿ ಇಂತಾ ನಿರ್ಬಂಧಗಳು ವಿಶೇಷವಾಗಿಲ್ಲ. ಸಾಧಾರಣವಾಗಿ ಅವಕ್ಕೆ ಸ್ಟಾಂಪು ಹಾಕಬೇಕೆಂಬ ನಿರ್ಬಂಧವೂ ಇಲ್ಲ. ತಕ್ಕ ಒಕ್ಕಣೆ ಮುಂತಾದ ಸಂಗತಿಗಳನ್ನೆಲ್ಲಾ ಕೆಳಗಿನ ನಮೂನೆಗಳಿಂದ ತಿಳಿದುಕೊಳ್ಳಬಹುದು, 27. ಕೆಲವರು ತಮ್ಮ ಹೆಸರುಗಳನ್ನು ಬರೆಯುವದಕ್ಕೆ ಹೆದರಿ ಅಥವಾ ಹಿಂದೆಗೆದು, ಹೆಸರಿಲ್ಲದೆ ಅರ್ಜಿಗಳನ್ನು ಟಶಾಲಿನ ಮೂಲಕವಾಗಿ ಕಳುಹಿಸುತ್ತಾರೆ, ಅನೇಕರು ತಮ್ಮ ಶತ್ರುಗಳ ವಿಷಯವಾಗಿ ಯಾವುದಾ ದರೂ ಮೊಕದ್ದಮೆ ವಿಚಾರಣೆಯಾಗುತ್ತಿದ್ದರೆ, ಅವರಿಗೆ ವಿರೋಧವಾಗಿ. ಕೋರ್ಟುಗಳಿಗೆ ಹೆಸರಿಲ್ಲದ ಅರ್ಜಿಗಳನ್ನು ಬರೆಯುವುರು, ಇದರಿಂದ ಸ್ವಲ್ಪವೂ ಫಲವಿಲ್ಲ: ಕೋರ್ಟಿನ ಅಧಿಕಾರಿಗಳು ಇಂತಾ ಅರ್ಜಿಗಳನ್ನು

  1. ?