ಪುಟ:ಕುರುಕ್ಷೇತ್ರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬೈಬೋಧಿನಿ ಆರ್ಜೆಗಳ ನಮೂನೆಗಳು. ೦೦••••••..ವರೆಗೆ ಶ್ರೀಮಾನ ಮಹಿಸೂರು ಸಂಸ್ಥಾನದ ಮಹಾ ರಾಜಾಧಿರಾಜ ಶ್ರೀ ಕೃತ್ಮರಾಜೇಂದ್ರ ಒಡೆಯರ ಬಹರ್ದ ಮಹಾಸ್ವಾಮಿಯವರ ದಿವ್ಯ ಚರಣ ಸನ್ನಿಧಾನಂಗಳಿಗೆ, ಆಜ್ಞಾಧಾರಕ ಮಂಡೀ ಶಿವಪ್ಪನ ಬಿನ್ನಹ. ಈ ವಿಜಯ ಸಂವತ್ಸರದ........... ಮಹಾಸ್ವಾಮಿಯವರ ಅನ್ನ ಪ್ರಭಾವದಿಂದ ಕ್ಷೇಮವಾಗಿದ್ದೇನೆ, ಮಹಾ ಸ್ವಾಮಿಯವರ ಶ್ರೇಯೋಭಿವೃದ್ಧಿಯು ದಿನೇ ದಿನೇ ಬೆಳಯುತಿರಬೇ ಕೆಂದು ಅನವರತವೂ ಇದೇವತಾ ಪ್ರಾರ್ಥನೆಯನ್ನು ಮಾಡುತಿರು ವೆನು, ಮಹಾಸ್ವಾಮಿ, ಸೇವಕನು ಮಹಾಸ್ವಾಮಿಯವರ ಅನುಗ್ರಹ ಬಲದಿಂದಲೂ ಕೆಲ ವರು ಈ ಊರಿನ ಮಹಾಜನಗಳ ಸಹಾಯದಿಂದಲೂ ಈ ಮಹಿಸೂರು ಪಟ್ಟಣದಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ಕಟ್ಟಿಸಿರುವೆನು. ಮಹಾಸ್ವಾಮಿಯವರ ಪ್ರಜೆಗಳಿಗೆ ಉಪಯೋಗಾರ್ಥವಾಗಿ ಇದನ್ನು ನಡ ನಿರುವುದರಿಂದ, ಖಾವಂದರು ದಯಮಾಡಿ ಅದನ್ನು ಪ್ರತಿಪ್ಪೆಮಾಡಿದರೆ ಅದು ಸ್ಥಿರವಾಗಿ ನಿಲ್ಲುವುದೆಂಬ ಭರವಸೆಯುಂಟಾಗಿ ನಮ್ಮಗಳ ಕೆಲಸ ವೆಲ್ಲಾ ಸಾರ್ಧಿಕ ಹೊಂದುವುದಲ್ಲದೆ, ಈ ನಗರವಾಸಿಗಳಿಗೆಲ್ಲಾ ಆನಂದ ಉಂಟಾಗುವುದು. ಆದ್ದರಿಂದ ಇತರಕಾರ್ಯದ ಅಡಚಣೆ ಇಲ್ಲದೆ ಇ ರುವಾಗ ಒಂದು ಘಳಿಗೆಯಮಟ್ಟಿಗೆ ದಯಮಾಡುವ ಅಭಯ ಉಂಟಾ ದರೆ, ಆ ಮಹೋತ್ಸವಕ್ಕೆ ತಕ್ಕ ಉಪಕರಣಗಳನ್ನು ಸಿದ್ಧಪಡಿಸಿಕೊಂ ಡು ಅರಿಕೆ ಮಾಡಿಕೊಳ್ಳುತ್ತೇನೆ, ಮಹಾಸ್ವಾಮಿ. - ಸಮಸ್ತವನ್ನೂ ತಿಳಿದಿರುವ ದಿವ್ಯಚಿತ್ರಕ್ಕೆ ಹೆಚ್ಚಾಗಿ ಅರಿಕೆಮಾಡಿ ಕೊಳ್ಳಲು ಅಶಕ್ತನಾಗಿದೇನೆ. ಇದು ಮಂಡೀ ಶಿವಪ್ಪನ ಮೈಸೂರು, ಅತ್ಯಂತ ಭಕ್ತಿ ವಿನಯಪೂರ್ವಕವಾದ ಬಿನ್ನಹ woooooooo.೧VF&, ಮಹಾಸ್ವಾಮಿ? ಒ